ಗಣಪನಿಗೆ ವಿಶೇಶ ಪ್ರಸಾದ ಸಿಹಿ ಅವಲಕ್ಕಿ

– ರೂಪಾ ಪಾಟೀಲ್.

ಬೇಕಾಗುವ ಸಾಮಗ್ರಿಗಳು

ತೆಳ್ಳನೆಯ ಅವಲಕ್ಕಿ – 2-3 ಬಟ್ಟಲು
ಬೆಲ್ಲ – 1 ಬಟ್ಟಲು
ಏಲಕ್ಕಿ – 2-3
ಶುಂಟಿ – 1 ಚಮಚ
ಹಸಿ ಕೊಬ್ಬರಿ (ತೆಂಗಿನಕಾಯಿ ತುರಿ) – 1 ಬಟ್ಟಲು
ತುಪ್ಪ – ಸ್ವಲ್ಪ

ಮಾಡುವ ಬಗೆ

ಮೊದಲು ಕಾಯಿಸಿದ ಪಾತ್ರೆಗೆ ಬೆಲ್ಲ, ಸ್ವಲ್ಪ ನೀರು ಅತವಾ ತುಪ್ಪ ಹಾಕಿಕೊಂಡು ತೆಳ್ಳನೆಯ ಪಾಕ ತಯಾರಿಸುವುದು. ನಂತರ ಈ ಪಾಕಕ್ಕೆ ಕಾಯಿತುರಿ, ಶುಂಟಿ, ಏಲಕ್ಕಿ ಯನ್ನು ಸೇರಿಸಿ ಕಡಿಮೆ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಶಗಳ ಕಾಲ ಬೇಯಿಸಿಕೊಳ್ಳುವುದು. ಮಿಶ್ರಣ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ನಂತರ ಒಲೆ ಮೇಲಿಂದ ಕೆಳಗಿಳಿಸಿ ಅದಕ್ಕೆ ಅವಲಕ್ಕಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಸಿಹಿ ಅವಲಕ್ಕಿ ತಯಾರಾಗುವುದು. ಇದಕ್ಕೆ ಹೆಚ್ಚಿನ ರುಚಿ ಬರಲೆಂದು ತುಪ್ಪದಲ್ಲಿ ಹುರಿದ ಒಣ ಹಣ್ಣುಗಳನ್ನು(ಡ್ರೈ ಪ್ರೂಟ್ಸ್) ಸೇರಿಸಬಹುದು.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: