ಹನಿಗವನಗಳು

ಹರೀಶ್ ನಾಯಕ್, ಕಾಸರಗೋಡು.

*** ಅಮ್ಮ ***

ಅಚ್ಚುಕಟ್ಟಾಗಿದ್ದರೆ
ನಮ್ಮನೆ ನಿಮ್ಮನೆ
ಅದಕ್ಕೆ ಕಾರಣ
ದಣಿವಿಲ್ಲದೆ ದುಡಿಯುವ
ಅಮ್ಮನೇ…!

*** ಸಂಬಂದ ***

ನೆರೆಮನೆಯ ಸಂಬಂದಗಳು
ಯಾಕೆ ಇಂದು
ಬಿರುಕು ಬಿಟ್ಟಿವೆ?
ಮನೆಯ ಸುತ್ತಲೂ
ಕಲ್ಲುಗಳು ಎತ್ತರದ
ಗೋಡೆಯನ್ನು ಕಟ್ಟಿವೆ!

*** ರಾಗಿ ***

ಅಕ್ಕಿಯೊಂದಿಗಿನ ಜಗಳದಲ್ಲಿ
ತನ್ನ ಗುಣದಿಂದಲೇ
ಗೆದ್ದಿದೆ ರಾಗಿ
ಅದರಂತೆ ಅಹಂಅನ್ನು ಬಿಟ್ಟು
ಅಂತಸತ್ವದಿಂದಲೇ
ಎಲ್ಲರ ಪ್ರೀತಿಗೆ ಬಾಜನರಾಗಿ!

*** ಉದ್ವೇಗ ***

ಕೆಲವರು ಬಯಸುತ್ತಾರೆ
ಐಟಿ ಬಿಟಿ ಉದ್ಯೋಗ
ಪಡೆದ ಮೇಲೆ
ಬಿಡುವೇ ಇಲ್ಲ
ಯಾವಾಗಲೂ ಉದ್ವೇಗ!

*** ಉಗುರು ***

ಬೆಳವಣಿಗೆಯನ್ನು
ಸಹಿಸದವರು
ಚಿವುಟಿ ಬಿಡುತ್ತಾರೆ ಚಿಗುರನ್ನು
ಆದರೂ ಮತ್ತೆ
ಬೆಳೆಯಬೇಕು
ನೋಡಿ ಕಲಿಯಬೇಕು
ನಮ್ಮ ಬೆರಳ ಉಗುರನ್ನು!

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: