ಮೊಟ್ಟೆ ಕೈಮಾ
ಬೇಕಾಗುವ ಸಾಮಾನುಗಳು
- ಬೇಯಿಸಿದ ಮೊಟ್ಟೆ – 4
- ಈರುಳ್ಳಿ – 2
- ಟೊಮೆಟೊ – 2
- ಹಸಿಮೆಣಸಿನಕಾಯಿ – 2
- ಅಡುಗೆ ಎಣ್ಣೆ – 4 ರಿಂದ 5 ಟೇಬಲ್ ಚಮಚ
- ಜೀರಿಗೆ – ½ ಟೀ ಚಮಚ
- ಶುಂಟಿ ಬೆಳ್ಳುಳ್ಳಿ ಪೇಸ್ಟ್ -1 ಟೀ ಚಮಚ
- ಕಾಳು ಮೆಣಸಿನಪುಡಿ – 1 ಟೀ ಚಮಚ
- ಅಚ್ಚ ಕಾರದ ಪುಡಿ – ½ ಟೀ ಚಮಚ
- ಅರಿಶಿನ ಪುಡಿ – ½ ಟೀ ಚಮಚ
- ದನಿಯಾ ಪುಡಿ -1 ಟೀ ಚಮಚ
- ಗರಂ ಮಸಾಲ – ½ ಟೀ ಚಮಚ
- ನೀರು – ¼ ಬಟ್ಟಲು
- ಉಪ್ಪು
- ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ಬಗೆ
ಮೊದಲು ಬಾಣಲಿಗೆ ಎಣ್ಣೆ ಹಾಕಿ. ಬಿಸಿಯಾದ ನಂತರ ಜೀರಿಗೆಯನ್ನು ಉದುರಿಸಿ, ಬಳಿಕ ಸಣ್ಣಗೆ ಕತ್ತರಿಸಿದ ಈರುಳ್ಳಿ ಹೋಳುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಬಾಡಿಸಿ. ಆಮೇಲೆ ಶುಂಟಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ತಿರುವಿ(ಬೇಕಿದ್ದಲ್ಲಿ ಕತ್ತರಿಸಿದ ಕ್ಯಾಪ್ಸಿಕಂ ಹೋಳುಗಳನ್ನು ಸೇರಿಸಬಹುದು). ಸಣ್ಣಗೆ ಕತ್ತರಿಸಿದ ಹುಳಿ ಟೊಮಾಟೊ ಹೋಳುಗಳನ್ನು ಹಾಕಿ ಚೆನ್ನಾಗಿ ಒಗ್ಗರಣೆಯಲ್ಲಿ ಬಾಡಿಸಿ. ಅರಿಶಿನದ ಪುಡಿ,ಅಚ್ಚಕಾರದ ಪುಡಿ, ಗರಂ ಮಸಾಲ, ದನಿಯಾ ಪುಡಿ ಉದುರಿಸಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಸಣ್ಣಗೆ ಕತ್ತರಿಸಿಟ್ಟ ಬೇಯಿಸಿ ಸಿಪ್ಪೆ ಸುಲಿದ ಮೊಟ್ಟೆಯ ಹೋಳುಗಳನ್ನು (ಅತವಾ ಕೊಬ್ಬರಿ ತುರಿಯಲ್ಲಿ ತುರಿದಿಟ್ಟ ಮೊಟ್ಟೆಯ ಚೂರುಗಳನ್ನು) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕಶ್ಟು ಉಪ್ಪನ್ನು ಹಾಕಿ, ಕತ್ತರಿಸಿದ ಕೊತ್ತಂಬರಿಯನ್ನು ಸೇರಿಸಿದರೆ ಮೊಟ್ಟೆ ಕೈಮಾ ಸಿದ್ದವಾಗುತ್ತದೆ. ಇದನ್ನು ಚಪಾತಿ ಅತವಾ ರೊಟ್ಟಿಯ ಜೊತೆ ಸವಿಯಬಹುದು.
ಇತ್ತೀಚಿನ ಅನಿಸಿಕೆಗಳು