ವೆಜ್-ಚೀಸ್ ಸ್ಯಾಂಡ್ವಿಚ್

– ಕಿಶೋರ್ ಕುಮಾರ್.


ಏನೇನು ಬೇಕು

  • ಈರುಳ್ಳಿ – 4
  • ಹಸಿಮೆಣಸಿನಕಾಯಿ – 5
  • ಉಪ್ಪು – ಸ್ವಲ್ಪ
  • ಅಡುಗೆ ಎಣ್ಣೆ – ಸ್ವಲ್ಪ
  • ಅರಿಶಿಣದಪುಡಿ – ½ ಚಮಚ
  • ಜೀರಿಗೆ – ಸ್ವಲ್ಪ
  • ಕ್ಯಾರೆಟ್ – 2
  • ಕೊತ್ತಂಬರಿ ಪುಡಿ – ½ ಚಮಚ
  • ಚೀಸ್ ಸ್ಲೈಸ್ – 4
  • ಕತ್ತರಿಸಿದ ಬ್ರೆಡ್ (ಬ್ರೆಡ್ ಸ್ಲೈಸ್) – 8

ಮಾಡುವ ಬಗೆ

ಸ್ಯಾಂಡ್ವಿಚ್ ಗೆ ಬೇಕಾದ ಪಲ್ಯ ಮಾಡಲು, ಬಾಣಲೆಗೆ ಸ್ವಲ್ಪ ಎಣ್ಣೆ ಸೇರಿಸಿ ಕಾಯಲು ಬಿಡಿ. ಕಾದ ಎಣ್ಣೆಗೆ ಜೀರಿಗೆ, ಕತ್ತರಿಸಿದ ಹಸಿಮೆಣಸಿನಕಾಯಿ, ಈರುಳ್ಳಿ, ತುರಿದ ಕ್ಯಾರೆಟ್ ಸೇರಿಸಿ 5 ರಿಂದ 8 ನಿಮಿಶ ಚೆನ್ನಾಗಿ ಹುರಿಯಿರಿ. ನಂತರ ಕೊತ್ತಂಬರಿ ಪುಡಿ ಹಾಕಿ ಸ್ವಲ್ಪ ನೀರು ಸೇರಿಸಿ 5 ನಿಮಿಶ ಬೇಯಿಸಿ ತೆಗೆದಿಡಿ.

ತವೆ (ಪ್ಯಾನ್) ಗೆ ಸ್ವಲ್ಪ ಬೆಣ್ಣೆ ಹಚ್ಚಿ ಅದರ ಮೇಲೆ ಬ್ರೆಡ್ ಸ್ಲೈಸ್ ಗಳನ್ನು ರೋಸ್ಟ್ ಮಾಡಿಕೊಳ್ಳಿ. ಈಗ ಒಂದು ಬ್ರೆಡ್ ಸ್ಲೈಸ್ ಗೆ, ಚೀಸ್ ಹಾಕಿ ಹಾಗೂ ಮತ್ತೊಂದು ಸ್ಲೈಸ್ ಗೆ ಮಾಡಿಟ್ಟುಕೊಂಡಿದ್ದ ಪಲ್ಯ ಹಾಕಿ ಎರಡೂ ಬ್ರೆಡ್ ಗಳನ್ನು ಮುಚ್ಚಿ, ಪಾನ್ ಮೇಲೆ ಇಟ್ಟು, ಚೀಸ್ ಕರಗುವವರೆಗೆ ಬಿಸಿ ಮಾಡಿ. ನಂತರ ಬಿಸಿಮಾಡಿದ ಬ್ರೆಡ್ ಅನ್ನು ನಡುವೆ ಕತ್ತರಿಸಿ. ಈಗ ಚೀಸ್ ಸ್ಯಾಂಡ್ವಿಚ್ ಸವಿಯಲು ರೆಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: