ಕಿರುಗವಿತೆಗಳು

– ನಿತಿನ್ ಗೌಡ.

ಪ್ರಕ್ರುತಿಯ‌ ಸರಿಗಮ

ಮುಂಜಾವಿನ ಹಕ್ಕಿಗಳ‌ ಕಲರವ..
ನೀಡುವುದು ಕಿವಿಗೆ ಇಂಪಾದ ಇನಿತ..
ಮಾದವನ‌ ಕೊಳಲ ದನಿಯಂತೆ..
ಮದ್ದಾನೆಗಳ ಕೂಗದು, ಕಾನನದ ನಗಾರಿಯಂತೆ..
ಹುಲಿ-ಸಿಂಹ, ಗರ್‍ಜನೆಯ ಮಾರ್‍ದನಿಯದು
ಕಾನೊಡಲಿನ ಗತ್ತಂತೆ!
ಹರಿವ ಜರಿಗಳ ಸಪ್ಪಳವದು,
ಹಸಿರುಮನೆಯ ಶ್ರುತಿಯಂತೆ..
ಕೂಡಿ ಒಡ ಮೂಡುವುದು ಕೊನೆಗಿದರಿಂದ;
ಪ್ರಕ್ರುತಿಯ‌ ಸರಿಗಮಪದ-ಸ್ವರಗಳ ಮೇಳ.

ಪರಿಪಾಟ

ನೆಚ್ಚಿದವರೇ ಆಗುವರು ಪಾಟ
ಇದುವೆ ಬಾಳ ಚಕ್ರದಾಟ,
ಕಲಿ ನೀ ಇದರಿಂದ ಪಾಟ..
ಆಗಬೇಕಿದು ಬಾಳ ಅನುಬವಕೆ ಪರಿಪಾಟ

ಹಗಲ ಬೆನ್ನತ್ತು

ಹುಡುಕಲಾದೀತೇ ದಿಟ ಹಾದಿ..
ಕಳೆದು ಹೋಗದೆ ಪಯಣದಲಿ..
ಮಸುಕು‌ ಮರೆಯಾಗಲಿದೆ, ಸಾಗಿದಂತೆ…
ಎಲ್ಲಿಯೂ ನಿಲ್ಲದಿರೂ;
ಸಾಗು ನೀ, ಮುನ್ನುಗ್ಗು ನೀ ಬಾಳಯಾನದಲಿ..
ಇರುಳು ಹಗಲ ಬೆನ್ನತ್ತಿದಂತೆ‌‌‌

( ಚಿತ್ರಸೆಲೆ: bing.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: