ಕವಿತೆ: ಮುಕವಾಡ

ಮುಂದೆ ಮನ ಮಿಡಿಯುವ ಅಮ್ರುತ
ಹಿಂದೆ ಉಗುಳುವ ಕಾರ‍್ಕೋಟಕ
ಜನರ ಮುಂದೆ ವಿನಯತೆಯ
ಮಹಾ ನಟ… ತೆರೆಮರೆಯಲ್ಲಿ
ಮಹಾ ದಮನಕ

ವೇದಿಕೆಯಲ್ಲಿ ಮರುಗುವ
ಮಹಿಳಾ ವಿಮೋಚಕ
ಮನೆಗೆ ಬಂದರದೇ ಮಹಾ
ಪತ್ನಿ ಪೀಡಕ
ಹೊರಗು ಒಳಗು ವಿಬಿನ್ನ
ಪಾತ್ರದಾರಿ ಈ ಮಹಾ ನಯ ವಂಚಕ

ಒಳಗೊಂದು ಹೊರಗೊಂದು
ನಡೆ ಇರುವವರಿಗೆ ಹಾಕುವರಲ್ಲ
ಮಣೆ… ನೇರ ನಿಶ್ಟುರವಾದಿಗೆ
ಕರೆದು ನೂಕುವರಲ್ಲ ಮಣೆ
ಇಂತಹವರನ್ನೆ ನೋಡಿ
ಹೇಳಿರುವರಲ್ಲ ವ್ಯಾಗ್ರನ ದೇಹಕ್ಕೆ
ಗೋವಿನ ಮುಕವಾಡದ ಹೊದಿಕೆ

(ಚಿತ್ರ ಸೆಲೆ: trendsandlife.com

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: