ಕಿರುಗವಿತೆಗಳು
– ನಿತಿನ್ ಗೌಡ.
ಹೊಸಬಾಳ ಮುನ್ನುಡಿ
ಬಾಳಬೇಕು ಬವಣೆಗಳ ಬದಿಗಿಟ್ಟು,
ಚಿಂತೆಯೇ ಚಿತೆಗೆ ದಾರಿ,
ಬದಲಾಗುವುದೇನು ವಾಸ್ತವ , ಚಿಂತಿಸಲು?
ಬದಲಾಗುವುದು ವಾಸ್ತವ, ಒಮ್ಮೆ ಅದನು ಒಪ್ಪಲು,
ಒಪ್ಪಿ ಮುನ್ನಡೆಯಲು; ಬರೆಯವುದದು ಮುನ್ನುಡಿ ಹೊಸಬಾಳ ಪಯಣಕೆ;
*************
ಇರುವವರೆಶ್ಟೋ
ಬಾಳೆಂಬ ಪಯಣದಲಿ ಕೆಲವರು ಬರುವರು,
ಕೆಲವರು ಇರುವರು, ಕೆಲವರು ತೆರಳುವರು;
ಅದರಲಿ ಬಯಸಿ ಬಂದವವರೆಶ್ಟೋ,
ಬಯಸಿದರೂ, ಉಳಿಯಲಾಗದವರೆಶ್ಟೋ,
ಸಾಗಬೇಕು ಹರಿವ ನೀರಂತೆ ಬದುಕು,
ಪಯಣದ ಅನುಬವಗಳ ಬುತ್ತಿ ಕಟ್ಟಿಕೊಂಡು
*************
ಆಗಲಾದೀತೆ?
ಹುಣ್ಣಿಮೆಯ ಕಡಲಂತೆ, ಉಕ್ಕಿ ಬರುವ ಯೋಚನೆಗಳಿಗೆ,
ತೀರ ಮೀರುವಾಸೆ, ಆಗಲಾದೀತೆ ಅದು?
ಪಾಲಿಗೆ ಬಂದದ್ದನ್ನು ಒಪ್ಪಲು
ಎಲ್ಲವೂ ತಿಳಿಯಾಗುವುದು, ಕಾರಿರುಳ ಕಡಲಂತೆ.
*************
(ಚಿತ್ರಸೆಲೆ: copilot.mocrosoft.com )
ಇತ್ತೀಚಿನ ಅನಿಸಿಕೆಗಳು