ಹುರುಕಲು ಮೊಟ್ಟೆ

– ಕಿಶೋರ್ ಕುಮಾರ್.

 

ಏನೇನು ಬೇಕು

  • ಮೊಟ್ಟೆ – 7
  • ಅಡುಗೆ ಎಣ್ಣೆ – 2 ಚಮಚ
  • ಅರಿಶಿಣದ ಪುಡಿ – 1/2 ಚಮಚ
  • ಸಾಂಬಾರ್ ಪುಡಿ – 3 ಚಮಚ
  • ಕರಿಬೇವಿನಸೊಪ್ಪು – 10 ಎಲೆ
  • ನೀರು
  • ಉಪ್ಪು

ಮಾಡುವ ಬಗೆ

ಮೊಟ್ಟೆಗಳನ್ನು ಬೇಯಿಸಿಕೊಂಡು, ಸಿಪ್ಪೆ ಬಿಡಿಸಿ. ಸಿಪ್ಪೆ ಬಿಡಿಸಿದ ಮೊಟ್ಟೆಗಳನ್ನು 2 ಚೂರುಗಳಾಗಿ ಕತ್ತರಿಸಿಟ್ಟುಕೊಳ್ಳಿ.

ಒಂದು ಬಾಣಲೆಗೆ 1 ಲೋಟ ನೀರು, 2 ಚಮಚ ಅಡುಗೆ ಎಣ್ಣೆ, 1/2 ಚಮಚ ಅರಿಶಿಣದ ಪುಡಿ, 1 ಚಮಚ ಉಪ್ಪು ಸೇರಿಸಿ ತಿರುಗಿಸಿ ಸ್ಟವ್ ಹಚ್ಚಿ 2 ನಿಮಿಶ ಕುದಿಸಿ. ನಂತರ 3 ಚಮಚ ಸಾಂಬಾರ್ ಪುಡಿಯನ್ನು ಸೇರಿಸಿ ತಿರುಗಿಸಿ 3 ನಿಮಿಶ ಕುದಿಸಿ. ಈಗ ಕತ್ತರಿಸಿಟ್ಟುಕೊಂಡಿದ್ದ ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ, 2 ನಿಮಿಶ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಕರಿಬೇವಿನ ಸೊಪ್ಪನ್ನು ಮೇಲೆ ಉದುರಿಸಿ. ಈಗ ಮೊಟ್ಟೆ ರೋಸ್ಟ್ ಸವಿಯಲು ರೆಡಿ. ಅಕ್ಕಿ ರೊಟ್ಟಿ ಇಲ್ಲವೆ ಚಪಾತಿ ಜೊತೆ ಸವಿಯಬಹುದು.

ಸಾಂದರ್‍ಬಿಕ ಚಿತ್ರ (ಚಿತ್ರಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: