ಕವಿತೆ : ಅವತರಿಸಿದಳು ತಾಯಿ…

ಶ್ಯಾಮಲಶ್ರೀ.ಕೆ.ಎಸ್.

ಚಾಮುಂಡಿ, chamundi

ಅಂಬಾರಿಯಲಿ ಹೊರಟಿಹಳು
ಬಕ್ತರನ್ನು ಸೆಳೆದಿಹಳು
ಸಂಬ್ರಮವ ತಂದಿಹಳು
ದೇವಿ ನಾಡ ದಸರೆಯಲಿ

ನವ ಚೈತನ್ಯ ತುಂಬಿಹುದು
ನವೋಲ್ಲಾಸ ಹರಿದಿಹುದು
ನವಶಕ್ತಿ ಬಂದಿಹುದು
ನವರಾತ್ರಿ ವೈಬವದಲಿ

ದುಶ್ಟರ ಸಂಹಾರಕ್ಕಾಗಿ
ದುರ‍್ನೀತಿಯ ಕಡಿವಾಣಕ್ಕಾಗಿ
ದುರ‍್ಜನರ ಅಟ್ಟಹಾಸಕ್ಕಾಗಿ
ಅವತರಿಸಿದಳು ತಾಯಿ ನವದುರ‍್ಗೆಯರಾಗಿ

ನವದೇವಿಯರ ಉಪಾಸನೆಯೂ
ಆಯುದಗಳ ಆರಾದನೆಯೂ
ವಿಜಯೋತ್ಸವದ ದಶಮಿಯೂ
ವಿಜ್ರುಂಬಿಸಿಹುದು ದಸರೆಯಲಿ

( ಚಿತ್ರಸೆಲೆ : rediff.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *