
ಬೇಕಾಗುವ ಸಾಮಾನುಗಳು
ಮಾಡುವ ಬಗೆ
ಅಕ್ಕಿ ತೊಳೆದು, ಅನ್ನ ಮಾಡಿ ಇಟ್ಟುಕೊಳ್ಳಿ. ಹಸಿ ಕೊಬ್ಬರಿತುರಿ, ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ ಮತ್ತು ಜೀರಿಗೆಯನ್ನು ಮಿಕ್ಸರ್ ನಲ್ಲಿ ರುಬ್ಬಿ ಇಟ್ಟುಕೊಳ್ಳಿ (ಕಲ್ಲಿನಲ್ಲಿ ರುಬ್ಬಿದರೆ ಹೆಚ್ಚು ರುಚಿ). ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು ರಸ ತೆಗೆದಿಡಿ.
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಸಾಸಿವೆ, ಇಂಗು, ಕರಿಬೇವು, ಒಣ ಮೆಣಸಿನಕಾಯಿ (ಮುರಿದು ಹಾಕಿ), ಕಡಲೆ ಬೇಳೆ, ಉದ್ದಿನ ಬೇಳೆ, ಕಡಲೆ ಬೀಜ ಹಾಕಿ ಹುರಿಯಿರಿ. ಉಪ್ಪು ಮತ್ತು ಅರಿಶಿಣ ಸೇರಿಸಿ, ರುಬ್ಬಿದ ಮಿಶ್ರಣವನ್ನು ಹಾಕಿ ಹುರಿಯಿರಿ. ಹುಣಸೆ ರಸ ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ಹುರಿದು ಒಲೆ ಆರಿಸಿ. ಮಾಡಿಟ್ಟ ಅನ್ನ ಸೇರಿಸಿ ಚೆನ್ನಾಗಿ ಕಲಸಿ, ನಂತರ ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ಒರಳು ಚಿತ್ರಾನ್ನ ಸವಿಯಲು ಸಿದ್ಧ.
ಇದೇ ಬಗೆಯವು:
ಇತ್ತೀಚಿನ ಅನಿಸಿಕೆಗಳು