ಕನ್ನಡ ನಾಡ ಸುತ್ತೋಣ – ಮಲೆನಾಡ ಬೆಡಗು

– ನಿತಿನ್ ಗೌಡ.

ಕಂತು-2 ಕಂತು-3

ಕರುನಾಡು ತನ್ನ ವೈವಿದ್ಯತೆಗೆ ಹೆಸರುವಾಸಿ. ಅದರಲ್ಲೂ ಬೌಗೋಳಿಕವಾಗಿ, ಕರುನಾಡು ‘ಒಂದು ರಾಜ್ಯ ಹಲವು ಜಗತ್ತು’ ಎಂಬುದು ನೂರಕ್ಕೆ ನೂರು ದಿಟ. ಹಚ್ಚ ಹಸಿರ ಸೀರೆ ಉಟ್ಟು ಕಂಗೊಳಿಸುವ ಮಲೆನಾಡು ಒಂದು ಕಡೆ ಇದ್ದರೆ, ಇನ್ನೊಂದು ಕಡೆ ಕಣ್ಣು ಹಾಯಿಸಿದಶ್ಟು ಉದ್ದಕ್ಕೆ ಪಡು ಕಡಲ ತೀರವಿದೆ. ಮಗದೊಂದು ಕಡೆ ಬಿರು ಬಿಸಿಲ ಬಯಲುಸೀಮೆ ಮತ್ತು ಅಲ್ಲಿನ ಹಳಮೆಯಿಂದ ಮನಸೂರೆಗೊಳ್ಳುವ ತಾಣಗಳು, ಕೋಟೆ ಕೊತ್ತಲುಗಳು, ಕನ್ನಡಿಗರ ಹಳಮೆಯನ್ನು ಕೂಗಿ ಸಾರುತ್ತಿವೆ. ಯಾವಾಗಲೂ ಹಸಿರಿಂದ/ಅರೆ ಹಸಿರಿನಿಂದ ಕೂಡಿರುವ ಕಾಡಿನಿಂದ ಹಿಡಿದು, ಮಳೆಕಾಡು, ಎಲೆ ಕಳಲುವ ತೇವಬರಿತ ಇಲ್ಲವೆ ಒಣ ಕಾಡು, ಕುರುಚಲು ಕಾಡು, ಶೊಲಾ ಸವನ್ನ ಕಾಡು ಮತ್ತು ಮ್ಯಾಂಗ್ರೂ ಕಾಡು ಹೀಗೆ ಬಗೆ ಬಗೆಯ ಕಾಡುಗಳು, ಜಗತ್ತಿನ ಜೀವ ವೈವಿದ್ಯತೆಯ ಹತ್ತಾರು ಬುಡಕಟ್ಟು ಜನಾಂಗಗಳು, ಗಟ್ಟಗಳು, ಕಣಿವೆಗಳು, ನದಿಗಳು ಮತ್ತು ಸಾವಿರಾರು ಬಗೆಯ ಗಿಡ-ಮರ ಪ್ರಾಣಿ, ಹಕ್ಕಿ, ಹುಳ, ಕೀಟಗಳನ್ನು ಒಳಗೊಂಡ ಜೀವವೈವಿದ್ಯತೆ – ಹೀಗೆ ಊಹೆಗೂ ನಿಲುಕದ ನಿಸರ‍್ಗದ ಸೋಜಿಗಗಳನ್ನು ಕರುನಾಡು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆ. ಕರುನಾಡಿನಲ್ಲಿ ಐದು ರಾಶ್ಟ್ರೀಯ ತೋಟ(National Park) ಮತ್ತು ಬರೋಬ್ಬರಿ 36 ಕಾಡುಜೀವಿಗಳ ನೆಲೆಕಾಡುಗಳಿವೆ( Wildlife sanctuary ). ನೂರಾರು ಜಲಪಾತಗಳು, ಹತ್ತಾರು ನದಿಗಳು, ಕೋಟೆ ಕೊತ್ತಲಗಳು – ಹೀಗೆ ಹಲವಾರು ಸೋಜಿಗಗಳನ್ನು ಒಳಗೊಂಡಿದೆ.
ಇಂತಹ ವೈವಿದ್ಯಮಯ ಕರುನಾಡ ಪಯಣವನ್ನು ಮಾಡುವ ಒಂದು ಚಿಕ್ಕ ಮೊಗಸು ಮಾಡೋಣ ಬನ್ನಿ.

ಮಲೆನಾಡ ಪಯಣ

ಕರುನಾಡ ಮಲೆನಾಡ ಮಟ್ಟಿಗೆ, ಸಿಹಿಮೊಗ್ಗೆಯನ್ನು( ಶಿವಮೊಗ್ಗವನ್ನು) ಮಲೆನಾಡ ಹೆಬ್ಬಾಗಿಲು ಎಂದೇ ಕರೆಯಲಾಗುತ್ತದೆ. ಹೀಗಿದ್ದರೂ ಶಿವಮೊಗ್ಗ ಕೂಡಾ ತನ್ನಲ್ಲಿ ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಯಂತಹ ಸ್ತಳಗಳನ್ನು ಹೊಂದಿರುವುದು ಕರುನಾಡ ವೈವಿದ್ಯತೆಗೆ ಹಿಡಿದ ಕನ್ನಡಿಯಂತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್‍ತಹಳ್ಳಿ, ಶಿವಮೊಗ್ಗ, ಹೊಸನಗರ ತಾಲೂಕುಗಳಲ್ಲ್ಲಿ ಮಲೆನಾಡಿನ ಎಡೆಗಳು ಹೆಚ್ಚಿದ್ದರೆ, ಸೊರಬ, ಬದ್ರಾವತಿ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಅರೆ ಬಯಲುಸೀಮೆ ಮತ್ತು ಬಯಲು ಸೀಮೆಯಂತ ತಾಣಗಳನ್ನು ಕಾಣಬಹುದು.

ಮೊದಲಿಗೆ ಆಯಾ ತಾಲೂಕಿನಲ್ಲಿರುವ ತಾಣಗಳನ್ನು ನೋಡೋಣ.

ಶಿವಮೊಗ್ಗ

ಶಿವಪ್ಪ ನಾಯಕನ ಅರಮನೆ, ಸಿಂಹದಾಮ, ಗಾಜನೂರು ಅಣೆಕಟ್ಟು, ತುಂಗಾ ಹಿನ್ನೀರು, ಸಕ್ರೆಬೈಲು ಆನೆಬಿಡಾರ, ಶೆಟ್ಟಿಹಳ್ಳಿ ಕಾಡುಜೀವಿ ನೆಲೆದಾಣ( ಅಬಯಾರಣ್ಯ )
ಇತರ ಹತ್ತಿರದ ನೆರೆಜಿಲ್ಲೆಯ ತಾಣಗಳು( ಚಿಕ್ಕಮಗಳೂರು ಜಿಲ್ಲೆ ): ಬದ್ರಾ ಅಣೆಕಟ್ಟು, ಬದ್ರಾ ಕಾಡುಜೀವಿ ನೆಲೆಕಾಡು ಮತ್ತು ಹುಲಿದಾಣ( Bhadra wildlife sanctuary and Tiger Reserve ).

ತೀರ್‍ತಹಳ್ಳಿ

ಮಂಡಗದ್ದೆ ಹಕ್ಕಿದಾಣ, ತುಂಗಾ ತೂಗು ಸೇತುವೆ, ಕುಂದಾದ್ರಿ ಬೆಟ್ಟ, ಆಗುಂಬೆ ಗಟ್ಟ,ಆಗುಂಬೆ ನೋಟದಾಣ, ಆಗುಂಬೆ ಮಳೆಕಾಡು ಅರಕೆದಾಣ(ARRs), ಮಾಲ್ಗುಡಿ, ಕುವೆಂಪು ಕುಪ್ಪಳ್ಳಿ ಕವಿಶೈಲ, ಕವಲೇದುರ್‍ಗ ಕೋಟೆ, ಹಿಡ್ಲುಮನೆ ಜಲಪಾತ, ಅಚ್ಚಕನ್ಯೆ ಜಲಪಾತ, ಒನಕೆ ಅಬ್ಬಿ ಜಲಪಾತ, ಜೋಗಿನ ಗುಂಡಿ ಜಲಪಾತ, ಬರ್‍ಕಣ ಜಲಪಾತ ಇತ್ಯಾದಿ.

ಇತರ ಹತ್ತಿರದ ನೆರೆಯ ತಾಲೂಕುಗಳು: ಶಿವಮೊಗ್ಗ, ಹೊಸನಗರ, ಹೆಬ್ರಿ, ಕೊಪ್ಪ

ಇತರ ಹತ್ತಿರದ ನೆರೆಜಿಲ್ಲೆಯ ತಾಣಗಳು (ಉಡುಪಿ): ಉಡುಪಿ ಜಿಲ್ಲೆಯ ತಾಣಗಳು ಎತ್ತುಗೆಗೆ ಹೆಬ್ರಿಯ ವೀರಬದ್ರಸ್ವಾಮಿ ದೇವಸ್ತಾನ,ಕೂಡ್ಲು ತೀರ‍್‍ತ ಜಲಪಾತ, ಸೋಮೇಶ್ವರ ವನ್ಯಜೀವಿ ನೆಲೆದಾಣ.

ಇತರ ಹತ್ತಿರದ ನೆರೆಜಿಲ್ಲೆಯ ತಾಣಗಳು (ಚಿಕ್ಕಮಗಳೂರು): ಶ್ರುಂಗೇರಿ ಶಾರದಾಂಬೆ ದೇವಸ್ತಾನ.

ಹೊಸನಗರ

ನಗರ ಕೋಟೆ, ಮಾಸ್ತಿಕಟ್ಟೆ – ಕುಂದಾಪುರ ರಸ್ತೆ, ಹುಲಿಕಲ್ ಗಾಟಿ, ಕುಂಚಿನಕಲ್ ಜಲಪಾತ, ಹುಲಿಕಲ್ ಜಲಪಾತ, ಮಾಣಿ/ವರಾಹಿ ಅಣೆಕಟ್ಟು, ಸಾವೇ ಹಕ್ಲು ಅಣೆಕಟ್ಟು, ಚಕ್ರ ಆಣೆಕಟ್ಟು, ಕೊಡಚಾದ್ರಿ ಬೆಟ್ಟ (ಚಾರಣಕ್ಕೆ),ಮಾಲ್ಗುಡಿ ತೋರುದಾಣ.
ನೆರೆಯ ತಾಲೂಕುಗಳು: ಶಿವಮೊಗ್ಗ, ಸಾಗರ, ಕುಂದಾಪುರ, ತೀರ‍್‍ತಹಳ್ಳಿ, ಶಿಕಾರಿಪುರ.
ಇತರ ಹತ್ತಿರದ ನೆರೆಜಿಲ್ಲೆಯ ತಾಣಗಳು (ಉಡುಪಿ): ಕೊಲ್ಲೂರು ಮೂಕಾಂಬಿಕ ದೇವಸ್ತಾನ , ಕೊಲ್ಲೂರು ಮೂಕಾಂಬಿಕ ವನ್ಯಜೀವಿ ನೆಲೆದಾಣ.

ಶಿಕಾರಿಪುರ

ಬಳ್ಳಿಗಾವಿ ಕೇದಾರೇಶ್ಬರ ದೇವಸ್ತಾನ( ಚಾಳುಕ್ಯ-ಹೊಯ್ಸಳ ವಾಸ್ತುಶಿಲ್ಪ), ಉಡುಗಣಿ ಅಕ್ಕಮಹಾದೇವಿ ನೆನಪಿನ ಸ್ತಳ, ತಾಳಗುಂದದ ಕದಂಬರ ಪ್ರಣವೇಶ್ವರ ದೇವಸ್ತಾನ, ಅಂಜನಾಪುರ ಅಣೆಕಟ್ಟು ಮತ್ತು ಈಸೂರು ದಂಗೆ ಸಾರುವ ತೋಟ, ಅಂಬಳೀಗೊಳ/ಹೊಸ ಹೊಸೂರು ಅಣೆಕಟ್ಟು.

ನೆರೆಯ ಹತ್ತಿರದ ತಾಲೂಕುಗಳು: ಶಿವಮೊಗ್ಗ, ಸೊರಬ, ಹೊನ್ನಾಳಿ, ಸಾಗರ, ಹಿರೇಕೆರೂರು.
ಇತರ ಹತ್ತಿರದ ನೆರೆಜಿಲ್ಲೆಯ ತಾಣಗಳು (ದಾವಣಗೆರೆ): ತೀರ‍್‍ತ ರಾಮೇಶ್ವರ ದೇವಸ್ತಾನ, ಹೊನ್ನಾಳಿ.

ಬದ್ರಾವತಿ

ಲಕ್ಶ್ಮೀ ನರಸಿಂಹ ದೇವಸ್ತಾನ ( ಹೊಯ್ಸಳ ವಾಸ್ತುಶಿಲ್ಪ )
ಹತ್ತಿರದ ನೆರೆ ತಾಲೂಕುಗಳು: ಶಿವಮೊಗ್ಗ, ತರೀಕೆರೆ ,ಚೆನ್ನಗಿರಿ.

ಹತ್ತಿರದ ನೆರೆ ಜೆಲ್ಲೆಯ ತಾಣಗಳು ( ಚಿಕ್ಕಮಗಳೂರು); ತರೀಕೆರೆ ಅಮ್ರುತೇಶ್ವರ ದೇವಸ್ತಾನ ( ಹೊಯ್ಸಳ ವಾಸ್ತುಶಿಲ್ಪ ).

ಸಾಗರ

ಕೆಳದಿ ರಾಮೇಶ್ವರ ದೇವಸ್ತಾನ, ಇಕ್ಕೇರಿಯ ಅಗೋರೇಶ್ವರ ದೇವಸ್ತಾನ, ಜೋಗ ಜಲಪಾತ, ಶರಾವತಿ ಹಿನ್ನೀರು, ಶರವಾತಿ ಸಾಹಸಮಯ ಕ್ಯಾಂಪ್ ತಾಣ( Sharavathi Adventure camps and activities, Jungle Lodges), ಲಿಂಗನಮಕ್ಕಿ ಅಣೆಕಟ್ಟು, ಬೀಮೇಶ್ವರ ದೇವಸ್ತಾನ ಮತ್ತು ಜಲಪಾತ, ಹೊನ್ನೇಮರಡು ಹಿನ್ನೀರು, ಹೊನ್ನೇಮರಡು ಜಲಾಶಯ, ಹೊನ್ನೇಮರಡು ಸಾಹಸಮಯ ಕ್ಯಾಂಪ್, ದಬ್ಬೆ ಜಲಪಾತ, ಸಿಗಂದೂರು ಚೌಡೇಶ್ವರಿ ದೇವಸ್ತಾನ ಮತ್ತು ಅಲ್ಲಿನ ಶರಾವತಿ ಹಿನ್ನೀರು ಇತ್ಯಾದಿ.

ಇತರೆ ಹತ್ತಿರದ ತಾಲೂಕುಗಳು: ಹೊಸನಗರ, ಶಿರಸಿ, ಸೊರಬ, ಹೊಸನಗರ, ಶಿಕಾರಿಪುರ, ಶಿವಮೊಗ್ಗ.

ಇತರೆ ಹತ್ತಿರದ ನೆರೆ ಜಿಲ್ಲೆಯ ತಾಣಗಳು (ಉತ್ತರ ಕನ್ನಡ): ಶಿರಸಿ ( ಉಂಚಳ್ಳಿ ಜಲಪಾತ).

ಸೊರಬ

ಗುಡವಿ ಹಕ್ಕಿದಾಣ, ಮದುಕೇಶ್ವರ ದೇವಸ್ತಾನ ,ಬನವಾಸಿ, ಚಂದ್ರಗುತ್ತಿ ರೇಣುಕಾಂಬ ದೇವಸ್ತಾನ.
ಇತರೆ ಹತ್ತಿರದ ತಾಲೂಕುಗಳು: ಸಾಗರ, ಶಿಕಾರಿಪುರ , ಸಿದ್ದಾಪುರ, ಹಿರೇಕೆರೂರು.
ಇತರೆ ಹತ್ತಿರದ ನೆರೆ ಜಿಲ್ಲೆಯ ತಾಣಗಳು (ಉತ್ತರ ಕನ್ನಡ): ಶಿರಸಿ ( ಉಂಚಳ್ಳಿ ಜಲಪಾತ).

ಮುಂದಿನ ಕಂತಿನಲ್ಲಿ ಕಡಿಮೆ ದೂರ ಮತ್ತು ಹೊತ್ತಿನಲ್ಲಿ ಹೇಗೆ ಈ ಮೇಲಿನ ಹಲವು ಜಾಗಗಳನ್ನು ನೋಡಬಹುದು ಎಂದು ನೋಡೋಣ. ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಇದರಲ್ಲಿ ಕೆಲವು ಮಾರ್‍ಪಡು ಮಾಡಿಕೊಳ್ಳಬಹುದು.

( ಚಿತ್ರಸೆಲೆ: ಬರಹಗಾರರು )

ಕಂತು-2 ಕಂತು-3

 

 

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *