ಚಿಕ್ಕಬರಹ

ಕಡಲ ತೀರದ ಬಾರ‍್ಗವ – ನಿನಗೆ ನಮೋ

– ಶಂಕರ್ ಲಿಂಗೇಶ್ ತೊಗಲೇರ್. ಅಕ್ಟೋಬರ್ 10 “ಕಡಲ ತೀರ ಬಾರ‍್ಗವ” ಶ್ರೀ ಶಿವರಾಮ ಕಾರಂತರ ಜನುಮದಿನ. ಅದು ಕನ್ನಡಿಗರ ಹೆಮ್ಮೆಯ ದಿನ. ಅವರಿಗೆ ಸಣ್ಣದೊಂದು ಸಮರ‍್ಪಣೆ. ಮುಂಜಾನೆ ಉದಿಸುವ ರವಿಯ ಗರ‍್ವವ ಮುಸ್ಸಂಜೆ ಮದಿಸುವ ಕಡಲ ತಟದವ ಜಗದ ಜೋಪಡಿಯ ಜಡ್ಡು ಕೊಡವಿದವ ನಿನಗೆ ನಮೋ ಕಡಲ ತೀರದ ಬಾರ‍್ಗವ ಮೂಕಜ್ಜಿಯ-ಕನಸುಗಳು ಮರಳಿ-ಮಣ್ಣಿಗೆ ಹೋಗುವಾಗ ಚೋಮನದುಡಿಯ ಸದ್ದು… Read More ›

ನಮಗೂ ನಿಮ್ಮಂಗೆ ಆಸೆ ಇಲ್ವೇ ?

–ಸಿ.ಪಿ.ನಾಗರಾಜ ಹಲವು ವರುಶಗಳ ಹಿಂದೆ ನಾನು ಕನ್ನಡ ಮಾಸ್ತರನಾಗಿ ಕೆಲಸ ಮಾಡುತ್ತಿದ್ದ ಕಾಳಮುದ್ದನದೊಡ್ಡಿಯ ಬಾರತಿ ಕಾಲೇಜಿನಲ್ಲಿ ನಡೆದ ಪ್ರಸಂಗವಿದು. ಏಕೋ…ಏನೋ… ಆ ವರುಶ ವಿದ್ಯಾರ‍್ತಿಗಳ ಸಮಸ್ಯೆಗಳು ತುಸು ಹೆಚ್ಚಾಗಿ, ಹತೋಟಿಗೆ ಸಿಗಲಾರದಂತೆ ಬಿಗಡಾಯಿಸಿಕೊಳ್ಳುತ್ತಿದ್ದವು. ದಿನ ಬೆಳಗಾದರೆ ಕಾಲೇಜಿನ ಪರಿಸರದಲ್ಲಿ ಏನಾದರೊಂದು ಬಗೆಯ ಕಹಿ ಪ್ರಸಂಗ ನಡೆಯುತ್ತಿತ್ತು. ಕಟ್ಟುಪಾಡುಗಳನ್ನು ಹೇರುವುದರ ಮೂಲಕ ವಿದ್ಯಾರ‍್ತಿಗಳನ್ನು ಹತೋಟಿಯಲ್ಲಿಡುವುದರ ಬದಲು…ಒಲವು ಮತ್ತು… Read More ›

ಬಾಲ್ಯದ ಆ ದಿನಗಳು ಎಶ್ಟು ಚೆಂದ

– ಸುನಿತಾ ಹಿರೇಮಟ. ಚಿಕ್ಕವ್ವನ ಹತ್ತಿರ ಕಾಡಿ ಬೇಡಿ ತೆಗೆದಕೊಂಡು ಹೋದ ಜೀರಿಗೆ, ಉಪ್ಪು, ಬೆಲ್ಲದ ಚೂರು, ಒಣ ಕಾರದ ಪುಡಿ, ಆಗ ತಾನೆ ಹುಣಿಸೆ ಗಿಡದಿಂದ ಕಿತ್ತ ಹಣ್ಣಾದ ಹುಣೆಸೆ ಹಣ್ಣು – ಎಲ್ಲವನ್ನು ಸೇರಿಸಿ ಅಲ್ಲೆ ಎಲ್ಲೊ ಒಂದು ಕಲ್ಲಿನ ಮೇಲೆ ಕುಟ್ಟಿ ಗುಂಡಗೆ ಮಾಡಿ ಕಡ್ಡಿಗೆ ಸಿಕ್ಕಿಸಿ ಚೀಪಿದ ಅ ಮಜವೇ ಬೇರೆ . ಕಚಗುಳಿ… Read More ›

ನಂಗೆ ಬಾಶೆ ಕೊಡ್ತೀರಾ?

–ಸಿ.ಪಿ.ನಾಗರಾಜ ಮಯ್ಸೂರನ್ನು ತಲುಪಿದಾಗ ಸಂಜೆ ಅಯ್ದು ಗಂಟೆಯಾಗಿತ್ತು. ಬಸ್ ನಿಲ್ದಾಣದಿಂದ ಕೇವಲ ಒಂದು ಕಿಲೊ ಮೀಟರ್ ಅಂತರದೊಳಗಿದ್ದ ಆ ಕಚೇರಿಗೆ ನಡೆದುಕೊಂಡು ಹೋದರೆ, ಕಚೇರಿಯ ವ್ಯವಹಾರದ ವೇಳೆ ಮುಗಿದುಹೋದೀತೆಂಬ ಆತಂಕದಿಂದ, ರಸ್ತೆಯಂಚಿನಲ್ಲಿ ನಿಂತಿದ್ದ ಆಟೋದಲ್ಲಿ ಕುಳಿತು, ಡ್ರಯ್‌ವರನಿಗೆ ನಾನು ಹೋಗಬೇಕಾಗಿದ್ದ ಕಚೇರಿಯ ಹೆಸರನ್ನು ಹೇಳಿ ” ಸ್ವಲ್ಪ ಬೇಗ ಹೋಗಪ್ಪ ” ಎಂದೆ. ಆತ ಸ್ಟಾರ‍್ಟರ್‌ಗೆ… Read More ›

ಹೆತ್ತಕರುಳಿನ ಮರೆಯಲ್ಲಿ…

–ಸಿ.ಪಿ.ನಾಗರಾಜ ಕಳೆದ ಒಂದೆರೆಡು ವರುಶಗಳ ಹಿಂದೆ, ನಮ್ಮ ಪಕ್ಕದ ಊರಿನಲ್ಲಿ ಹೆಂಗಸರ ಒಕ್ಕೂಟವೊಂದು ತುಂಬಾ ಚಟುವಟಿಕೆಯಿಂದ ಕೂಡಿತ್ತು. ಈ ಒಕ್ಕೂಟದ ವತಿಯಿಂದ ದರ‍್ಮಸ್ತಳ, ಉಡುಪಿ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯ ಮುಂತಾದ ಊರುಗಳ ಕಡೆಗೆ ಒಮ್ಮೆ ನಾಲ್ಕಾರು ದಿನಗಳ ಕಾಲ ಹೆಂಗಸರು ಪ್ರವಾಸ ಹೊರಟರು. ಪ್ರವಾಸಿಗರಲ್ಲಿ ಹದಿನಾರರ ಹರೆಯದವರಿಂದ ಹಿಡಿದು ಅಯ್ವತ್ತು-ಅಯ್ವತ್ತಯ್ದು ವಯೋಮಾನದ ನಲವತ್ತು ಮಂದಿ ಹೆಂಗಸರು… Read More ›

ಅಕ್ಕತಂಗೇರು…

–ಸಿ.ಪಿ.ನಾಗರಾಜ ಮನೆಯಲ್ಲಿ ಮೂರು ವರುಶದ ಪುಟ್ಟ ಹುಡುಗ ರಾಜೇಶನು ಎಲ್ಲರ ಕಣ್ಮಣಿಯಾಗಿದ್ದ . ಹರಳು ಹುರಿದಂತೆ ಮಾತನಾಡುವ ರಾಜೇಶನ ಮಾತುಗಳನ್ನು ಕೇಳುತ್ತಾ…ನಕ್ಕುನಲಿಯುವುದರ ಜತೆಗೆ, ಇಶ್ಟು ಚಿಕ್ಕವಯಸ್ಸಿನಲ್ಲೇ ಮುದ್ದುಮುದ್ದಾಗಿ ಮಾತನಾಡುವುದರ ಬಗ್ಗೆ ಮನೆಯವರೆಲ್ಲರೂ ತುಂಬಾ ಹೆಮ್ಮೆಪಡುತ್ತಿದ್ದರು. ಒಂದು ದಿನ ರಾಜೇಶನ ತಾಯಿಯನ್ನು ನೋಡಲೆಂದು ಇಬ್ಬರು ಹೆಂಗಸರು ಬಂದರು. ಸುಮಾರು ಇಪ್ಪತ್ತಯ್ದು-ಮೂವತ್ತರ ವಯೋಮಾನದ ಈ ಅಕ್ಕತಂಗಿಯರು…ರೂಪದಲ್ಲಿ ಒಬ್ಬರನ್ನೊಬ್ಬರು ಬಹಳವಾಗಿ… Read More ›

ಹನಿಯೊಂದು ಜಾರಿದೆ…

–ಸುನಿತಾ ಹಿರೇಮಟ ಮುಂಗಾರು ಒಮ್ಮೆ ಎಲ್ಲ ಕೆರೆಗಳನ್ನು ತುಂಬಿ ತುಳುಕಿಸಿದರೆ ನನ್ನ ಕಣ್ಣ ಹನಿನೀರು ನಗಬಲ್ಲದೆ… ಎಂದು. “ತರಿಕೆರೆ ಏರಿ ಮೇಲೆ ಮೂರು ಕರಿ “ಕುರಿ” ಮರಿ ಮೇಯಿತಿತ್ತು” ಅಂತ ಮನಸು ಹುಚ್ಚು ಕುದುರೆ ಹಾಗೆ ಕುಣಿಯುತ್ತದೆ “ಮೂಡಲು ಕುಣಿಗಲು ಕೆರೆ ನೋಡೋರ್ ಗೊಂದಯ್ಬೋಗ ಮೂಡಿs ಬರ್‍ತಾನೆ ಚಂದಿರsಮಾ | ತಾನಂದನೋ” ಅಂತ ಗುನುಗುನಿಸುತ್ತಿದೆ. ಬೆಳಗು… Read More ›

ರಕ್ತ ಯಾರದಮ್ಮ?

–ಸಿ.ಪಿ.ನಾಗರಾಜ ಇಂದಿಗೆ ಸುಮಾರು ಇಪ್ಪತ್ತು ವರುಶಗಳ ಹಿಂದೆ ಹಳ್ಳಿಯೊಂದರಲ್ಲಿ ನಡೆದ ಪ್ರಸಂಗವಿದು. ನಗರದಲ್ಲಿದ್ದ ಕಾಲೇಜಿಗೆ ಪ್ರತಿನಿತ್ಯ ಹಳ್ಳಿಯೊಂದರಿಂದ ಜತೆಯಾಗಿ ಹೋಗಿ ಬರುತ್ತಿದ್ದ ನಾಲ್ಕು ಮಂದಿ ಹುಡುಗರಲ್ಲಿ… ಮೂರು ಮಂದಿ ಒಕ್ಕಲಿಗ ಹುಡುಗರು, ತಮ್ಮ ಗೆಳೆಯನ ಮನೆಯಲ್ಲಿ ಒಂದು ದಿನ ಊಟ ಮಾಡಿದರು. ಆತ ದಲಿತನಾಗಿದ್ದುದರಿಂದ ಈ ಸುದ್ದಿ ಕಾಳ್ಗಿಚ್ಚಿನಂತೆ ಊರಲ್ಲೆಲ್ಲಾ ಹಬ್ಬಿತು. ಇದೇ ರೀತಿ ಸಡಿಲಬಿಟ್ಟರೆ,… Read More ›

ಬೆಳಗಾಗೋ ಮೊದಲೆದ್ದು ಯಾರ‍್ಯಾರ ಮನೆಯ…!?

–ಗೀತಾಮಣಿ “ತೂಕ ಕಡಿಮೆ ಮಾಡಿ,ಮಾರ್‍ನಿಂಗ್ ವಾಕ್ ಮಾಡಿ” ಕಾಲು ನೋವಿಗೆ, ಬರೆದ ಅವ್ಶದಿಯ ಜೊತೆಗೆ ವಯ್ದ್ಯರು ಹೇಳಿದ ಪರಿಹಾರ!…..ಚೆ!……. ಈ ಚಳಿಯಲ್ಲಿ ಪಾತ್ರೆ ತೊಳೆಯೋದೇ ಕಶ್ಟ, ಅಂತದ್ರಲ್ಲಿ ಇದು ಬೇರೇನಾ?!……ಅಳತೆ ಮಾಡಿ ತಿಂದರೂ ಹೆಚ್ಚುತ್ತಿರುವ ದೇಹದ ವಿಸ್ತೀರ‍್ಣ, ತೂಕ ಎರಡಕ್ಕೂ ಹಿಡಿ ಶಾಪ ಹಾಕುತ್ತಾ ಮನೆಗೆ ಬಂದೆ. ಸುರಕ್ಶೆ, ಸಂಕೋಚ ಎರಡನ್ನೂ ದ್ರುಶ್ಟಿಯಲ್ಲಿಟ್ಟುಕೊಂಡು ಎದುರು ಮನೆ… Read More ›

ಅವಳು ಮತ್ತು ಅವನು

– ಹರ‍್ಶಿತ್ ಮಂಜುನಾತ್. ಗೆಳೆತನ ಎಂಬುವುದು ಒಂದು ಒಳ್ಳೆಯ ನಂಟು ಮತ್ತು ಜೀವನದ ಒಂದು ಅತಿಮುಕ್ಯ ಬಾಗವೂ ಹವ್ದು. ಕವ್ಟುಂಬಿಕ ನಂಟು ಹುಟ್ಟಿನಿಂದ ಪರಿಚಿತವಾಗಿ ಬಂದರೆ, ಗೆಳೆತನ ಎಂಬುದು ಹೆಚ್ಚಾಗಿ ಅಪರಿಚಿತರ ನಡುವೆ ಹಟ್ಟುವ ಒಂದು ಅಪರೂಪದ ನಂಟು. ಅದರಲ್ಲೂ ಕೆಲವೊಮ್ಮೆ ಕವ್ಟುಂಬಿಕವಾಗಿ ಪರಿಚಿತರ ನಡುವೆ ಗೆಳೆತನ ಬೆಳೆದರೆ ಅದು ಇನ್ನೂ ವಿಶೇಶವಾಗಿ ಕಾಣುತ್ತದೆ. ಇದೇ ಸಾಲಿನಲ್ಲಿ… Read More ›