ಟ್ಯಾಗ್: ಟಗರು ಮತ್ತು ಪ್ರೀತಿ

ಟಗರು ಮತ್ತು ಪ್ರೀತಿ

-ಸಿ.ಪಿ.ನಾಗರಾಜ   ನಾನು  ಏಳೆಂಟು  ವರುಶದ  ಹುಡುಗನಾಗಿದ್ದಾಗ ನಡೆದ ಪ್ರಸಂಗವಿದು. ನಮ್ಮೂರಿನಲ್ಲಿ ಒಂದು ದಿನ ಬೆಳಗ್ಗೆ ಇಬ್ಬರು ಆಳುಗಳೊಡನೆ ಹೊಲದ ಬಳಿಗೆ ಹೋದೆನು. ನಮ್ಮ ಸಂಗಡ ಮನೆಯಿಂದ  ಒಂದು ಟಗರು ಕೂಡ ಬಂದಿತ್ತು. ಆ ವರುಶ ಮಳೆಗಾಲ ಚೆನ್ನಾಗಿ ನಡೆದು ಹೊಲಮಾಳದಲ್ಲಿ ಎತ್ತ ನೋಡಿದರೆ ಅತ್ತ ರಾಗಿ ಪಯಿರುಗಳು  ತೆಂಡೆ ತೆಂಡೆಗಳಾಗಿ ಕವಲೊಡೆದು ಸೊಂಪಾಗಿ ಬೆಳೆದು ಹಚ್ಚಹಸಿರು ಕಣ್ಣಿಗೆ ರಾಚುತ್ತಿತ್ತು. ಸಾಲಾರಂಬದಲ್ಲಿ ಬೆಳೆದು ನಿಂತಿದ್ದ ಅವರೆ-ಹುಚ್ಚೆಳ್ಳು-ನವಣೆ-ಜೋಳ-ತೊಗರಿಯ ಗಿಡಗಳು ಬಿಳಿ ಹಳದಿ ಬಂಗಾರದ ಬಣ್ಣಬಣ್ಣದ ಹೂವುಗಳಿಂದ ತುಂಬಿ ಕಂಗೊಳಿಸುತ್ತಿದ್ದವು. ಹೊಲದೊಳಕ್ಕೆ  ಬರುತ್ತಿದ್ದಂತೆಯೇ ಆಳುಗಳು ಟಗರಿನ ಕತ್ತಿನಲ್ಲಿದ್ದ ಹುರಿಯನ್ನು ಬಿಚ್ಚಿ. ಅದು ತನಗೆ ಬೇಕೆಂದ ಕಡೆ ಮೇಯಲೆಂದು ಬಿಟ್ಟ ನಂತರ, ನನ್ನನ್ನು ಕುರಿತು “ನೀವು...

Enable Notifications OK No thanks