ನಿಮ್ಮ ಕಿರುಮಣೆಗಳು ಮಡಚುವಂತಿದ್ದರೆ?

maducuva_kirumane

ಇಂದು ನಮ್ಮ ಒಡನಾಡಿಗಳಾಗಿರುವ ಎಣಿಕಗಳನ್ನು (computers) ನಮ್ಮ ಬದುಕಿಗೆ ಇನ್ನೂ ಹತ್ತಿರವಾಗಿಸುವಂತಹ ಕೆಲಸಗಳು ಜಗದೆಲ್ಲೆಡೆ ನಡೆಯುತ್ತಲಿವೆ. ಇದಕ್ಕೊಂದು ಹೊಸ ಸೇರ‍್ಪಡೆ, ಹಾಳೆಗಳಂತೆ ಮಡಚಬಹುದಾದ “ಕಿರುಮಣೆ ಎಣಿಕಗಳು” (tablet computers). ಈಗಿರುವ ಎಣಿಕಗಳ ಹಾಗೂ ಸೋಕುತೆರೆ ಚೂಟಿಯುಲಿಗಳ (smartphones) ಮುಂದುವರೆದ ತಲೆಮಾರಿನಂತೆ ಈ ಮಡಚಬಹುದಾದ ಕಿರುಮಣೆಗಳು ಹೊಮ್ಮಲಿವೆ. ಕೆನಡಾದ ಕ್ವೀನ್ಸ್ ಕಲಿಕೆವೀಡಿನ ಅರಕೆಗಾರರು ಮತ್ತು ಬ್ರಿಟನ್ನಿನ ಅರೆಕೆಗಾರರು, ಇಂಟೆಲ್ ಲ್ಯಾಬನೊಂದಿಗೆ ಸೇರಿಕೊಂಡು ಇಂತಹ “ಮಡಚು ಕಿರುಮಣೆ” ಗಳನ್ನು ಹುಟ್ಟುಹಾಕಿದ್ದಾರೆ.

ಈ ಮಡಚು ಕಿರುಮಣೆಗಳನ್ನು ಮುಟ್ಟಿದರೆ ಕಾಗದದ ಹಾಳೆಗಳನ್ನು ಮುಟ್ಟಿದಂತಾಗುತ್ತದೆ. ಈ ಹಾಳೆಗಳು ತೆಳುವಾಗಿದ್ದು ಇವುಗಳನ್ನು ಹಿಂದೆ-ಮುಂದೆ ಮಡಚಬಹುದು. ಸುಮಾರು ಹತ್ತು ಹಾಳೆ (ಗಳಂತಿರುವ) ಮಿಂಪುಟಗಳನ್ನು ಒಂದು ಕಿರುಮಣೆ ಹೊಂದಿದ್ದು, ಕಾಗದದ ಹಾಳೆಗಳಂತೆ ಒಂದರ ಮೇಲೊಂದು ಇಟ್ಟುಕೊಳ್ಳಬಹುದು, ಕಾಗದಗಳನ್ನು ಅಲ್ಲಿಲ್ಲಿ ಹರಡುವಂತೆ ಹರಡಲೂ ಬಹುದು! ಅಲ್ಲದೆ, ಒಮ್ಮೆಲೇ ಹಲವು ಕಡತಗಳಲ್ಲಿ ಬರೆಯಬಹುದು; ಒಂದರಿಂದ ಇನ್ನೊಂದಕ್ಕೆ ಚಿತ್ರ ಹಾಗೂ ಬರಹಗಳನ್ನು ಕೂಡ ಹಂಚಿಕೊಳ್ಳಬಹುದು.

ಒಸಗೆಯ ಸೆಲೆ:

 ವಿವೇಕ್ ಶಂಕರ್.

 Categories: ಅರಿಮೆ

ಟ್ಯಾಗ್ ಗಳು:, , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s