ಪ್ರೇಮ ನಿವೇದನೆ

ಕೆ.ಪಿ. ಬೊಳುಂಬು

Copy of Picture 591
ಅವನ ಕಣ್ಣಿನ ಮಿಂಚು
ಏನೇನೋ ಹೇಳಿದೆ ಇಂದು
ಅವನ ನಾಲಗೆ ಮಾತ್ರ ಮೂಕವಾಗಿದೆ

ಅರೆ ಬಿರಿದ ತುಟಿಗಳ ಚಲನೆ
ನೂರು ಬಯಕೆಗಳ ಸಾರಿವೆ
ಬರಿಯ ಮಾತೊಂದನ್ನೂ ನುಡಿಯನೇತಕೆ

ಅವನ ಕಣ್ಣಿನ ನೋಟ
ಕಾಳಜಿಯ ಸೂಸಿದೆ
ಅವನ ಆ ಮುಗುಳುನಗೆ ಕನಸಿನಲಿ ಕಾಡಿದೆ

ಅವನೆಂದು ನಿವೇದಿಸಿಯಾನು
ಕೊನೆಯಿರದ ಪ್ರೇಮವನ್ನು
ಮವ್ನಗಳ ಕೋಟೆಗಳ ಬಾಗಿಲನ್ನು ಸೀಳುತ್ತ

(ಚಿತ್ರ: ಬರತ್ ಕುಮಾರ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: