ಮಿಂಬಲೆಯ ವೇಗ ಮುಮ್ಮಡಿಸಲಿದೆ!

ವಿವೇಕ್ ಶಂಕರ್
internetteaser

ಮಿಂಬಲೆಯ (internet) ಬಳಕೆ ಈಗ ತುಂಬಾ ಹೆಚ್ಚಾಗಿದೆ. ಇತ್ತೀಚೆಗಂತೂ ಮಿಂಬಲೆಯ ಬಳಕೆದಾರರ ಎಣಿಕೆ ತುಂಬಾ ಹೆಚ್ಚಾಗಿದ್ದು, ಮಿಂಬಲೆಯ ಒಯ್ಯಾಟ (internet traffic) ಕೂಡ ಎಲ್ಲೆ ದಾಟಿದೆ. ಇದರಿಂದಾಗಿ ಕಿಕ್ಕಿರಿಕೆ (congestion) ಕೂಡ ಉಂಟಾಗಿ, ಮಿಂಬಲೆಯ ವೇಗ ಬೇಸರ ತರುವಶ್ಟು ಕಡಿಮೆ ಆಗುತ್ತಿದೆ. ಊರಿನ ಬೀದಿಗಳಲ್ಲಿ ಗಾಡಿಗಳ ಓಡಾಟ ಹೆಚ್ಚಾದಾಗ ಓಡಾಟದ ವೇಗ ಹೇಗೆ ಕಡಿಮೆ ಆಗುತ್ತದೋ ಹಾಗೆ ಮಿಂಬಲೆಯಲ್ಲಿ ಒಯ್ಯಾಟ ಹೆಚ್ಚಾದಾಗ, ಕಿಕ್ಕಿರಿಕೆ ಕೂಡ ಉಂಟಾಗಿ ಮಿಂಬಲೆಯ ವೇಗ ಕಡಿಮೆ ಆಗುತ್ತದೆ.

ಈ ತೊಂದರೆಯನ್ನು ಕಡಿಮೆ ಮಾಡಲು ಹಲವೆಡೆ, ಹಲಬಗೆಯ ಅರಕೆ ನಡೆಯುತ್ತಿದ್ದು, ಈದೀಗ ಅಮೇರಿಕಾದ MIT ಕೂಟವು ರೆಮ್ಮಿ (Remy) ಅನ್ನುವ ಮಿನ್ನವಿರಿನ (software) ಏರ‍್ಪಾಟೊಂದನ್ನು ಹೊರತರುತ್ತಿದೆ. ಮಿಂಬಲೆ ಒಯ್ಯಾಟವನ್ನು ಕಡಿಮೆ ಮಾಡಲು ಈಗ ಬಳಕೆಯಾಗುತ್ತಿರುವ TCP ಗಿಂತ ಇದು ಬೇರೆ ಬಗೆಯಲ್ಲಿ ಕೆಲಸ ಮಾಡುತ್ತದೆ.

’ರೆಮಿ’ ಮಿಂಬಲೆ ಬಳಕೆದಾರರಿಗೆ ಮೊದಲು ಕೆಲವು ಚಿಕ್ಕದಾದ ಕೇಳ್ವಿಗಳನ್ನು ಮುಂದಿಡುತ್ತದೆ ಎತ್ತುಗೆಗೆ: ಈ ಮಿಂಬಲೆಯ ಬೆಸೆತವನ್ನು (internet connection) ಎಶ್ಟು ಮಂದಿ ಬಳಸುತ್ತಾರೆ ? ಇಂತ ಚಿಕ್ಕ ಪುಟ್ಟ ಕೇಳ್ವಿಗಳಿಗೆ ಪಡೆದ ಉತ್ತರಗಳನ್ನು ಬಳಸಿ ’ರೆಮಿ’ (Remy) ತನ್ನದೇ ಆದ ಕಟ್ಟಲೆಗಳನ್ನು ಅಣಿಮಾಡಿಕೊಳ್ಳುತ್ತದೆ. ಮಿಂಬಲೆಯ ಒಯ್ಯಾಟವಿದ್ದಲ್ಲಿ ಅವುಗಳನ್ನು ನುಸುಳಿಕೊಂಡು ಬಳಕೆದಾರರ ಮಿಂಬಲೆಯ ವೇಗವನ್ನು ಹೆಚ್ಚಿಸುತ್ತದೆ.

ಈ ಮಿಂಬಲೆಯ ಹೊಸ ಮಿನ್ನವಿರು (software) ತನ್ನ ಒರೆಗೆಯಲ್ಲಿ (test) ಗೆಲುವು ಕಂಡರೆ ಎಣ್ಣುಕಗಳಲ್ಲಿ ಮಿಂಬಲೆಯ ವೇಗ ಮೂರುಪಟ್ಟು ಮತ್ತು ಅಲೆಯುಲಿಗಳ (ಮೊಬಾಯ್ಲ್) ವೇಗ 20-30% ರಶ್ಟು ಹೆಚ್ಚಾಗಲಿದೆ ಎಂದು MIT ಕೂಟದ ಅರಿಗರು ತಿಳಿಸಿದ್ದಾರೆ.

ಒಸಗೆಯ ಸೆಲೆ: popsci

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *