ಬೆಳಕಿನಲ್ಲಿ ಬೆಳಕ ಹುಡುಕುವ ಬರಾಟೆಯಲ್ಲಿ…

ಶ್ವೇತ ಪಿ.ಟಿ.

sini_gal_assorted_13

ನಾ ಮೊಳೆತ ಆ ಗಳಿಗೆ ನಿನ್ನೆದೆಯಲಿ
ನವಮಾಸ ತುಂಬಿ ಕೊನೆಯ ಕ್ಶಣದ ಸಂತಸ
ನಿನ್ನೊಡಲ ಸೀಳಿ ಮೂಡಿದ್ದೆ, ಎರಡೆಲೆಯಾಗಿ
ನಿನ್ನದೇ ಬಣ್ಣವ ತಾಳಿ

ಹಸಿರನೊದ್ದ ಶಾಂತ ಚೆಲುವೆಯೆ
ನೀ ಹಿಡಿದ ಬಿಗಿತಕ್ಕೆ ನಾನೀಗ ಹೆಮ್ಮರ
ನಿನ್ನ ಕಾಯುವಶ್ಟು,
ನೆರಳನೊಡಿಸಿ ತಂಪ ನೀಡುವಶ್ಟು

ಬೆಳೆದಂತೆ ಬೆಳೆದಿದೆ ಎಲ್ಲವೂ
ಆವಿಶ್ಕಾರದ ಹುಸಿ ಹೆಸರಿನಲ್ಲಿ
ನಿನ್ನ ಮಡಿಲು ಬರಿದು ಮಾಡಿರುವರು
ಬೆಳಕಿನಲ್ಲಿ ಬೆಳಕ ಹುಡುಕುವ ಬರಾಟೆಯಲ್ಲಿ

ಹಸಿರ ತಂಪನು ನುಂಗಿ ಹಾಕಿ
ಮೀರಿ ದಾಟಿವೆ ಮುಗಿಲೆತ್ತರಕೆ
ತೀರದ ಬಯಕೆ ಸಾಗುತಿದೆ
ನೀ ಎಂದು ಬಾಯ್ಬಿಡುವೆ ಎಂಬ ಅರಿವಿಲ್ಲದೆ

(ಚಿತ್ರ: www.universini.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: