ತಟ್ಟಿ ಎಬ್ಬಿಸಲು ಮೂರು ಚುಟುಕಗಳು

ರತೀಶ ರತ್ನಾಕರ

IMG_08191

(1)
ತಟ್ಟಿ ಎಬ್ಬಿಸು ನಿನ್ನ ನೀನು

ತಟ್ಟಿ ಎಬ್ಬಿಸು ನಿನ್ನ ನೀನು
ಕನ್ನಡಮ್ಮನ ಪುಟ್ಟ ಮಾತಿದೆ
ಕೇಳಬೇಕಿದೆ ನೆಟ್ಟು ಕಿವಿಯನು
ಕೆಟ್ಟ ಕೂಟವು ಅಟ್ಟವೇರಿದೆ
ಮಟ್ಟ ಹಾಕಲು ನಿನ್ನನು|

ಬಿಟ್ಟಿ ಮೆರೆದಿಹ ಹೊರಗಿನವನು
ಕಟ್ಟಿ ಮೂಲೆಗೆ ನಿನ್ನತನವನು|
ತೊಟ್ಟಿಲೊಳಗಿನ ಪುಟ್ಟ ನೀನಾ?
ಮೆಟ್ಟಿ ನಿಲು ನೀ ಹಂಗನು|
ನಿನಗೆ ಕಟ್ಟಿದ ನಾಡು ನುಡಿಯಿದು
ತಟ್ಟಿ ಎಬ್ಬಿಸು ನಿನ್ನ ನೀನು!

(2)
ಉಗೀರಿ ಮುಕಕ್ಕೆ!

ಹೇಯ್, ಒಕ್ಕೂಟದಾಳ್ವಿಕೆ
ಸಾಕು ಮಾಡು ನಿನ್ನ ಹಿಂದಿಯ ಹೇರಿಕೆ
ಕನ್ನಡಿಗರ್ ಅರಿತರು ನಿನ್ನ ಬೂಟಾಟಿಕೆ
ಹಿಂದಿ ರಾಶ್ಟ್ರನುಡಿ ಎಂದವನಿಗೆ
ಇನ್ನು ಉಗಿಯುತಾರೆ ಮುಕಕ್ಕೆ!

(3)
ಅಂಗಡಿಯೊಳು ಕನ್ನಡ ನುಡಿ

ನಮ್ಮ ಊರು ನಮ್ಮ ಜಾಗ ನಮ್ಮದೇ ಆಳ್ವಿಕೆ
ಸುಮ್ಮನೇಕೆ ಅಂಜಿಕೆ?
ಬಾಯಿ ಬಿಡಲು ಹಿಂಜರಿಕೆ|
ಅಳುಕ ಬಿಟ್ಟು ಬಳಕೆ ಮಾಡೋಣ
ಅಂಗಡಿಯೊಳು ಕನ್ನಡ ನುಡಿಯನ್ನ|

(ಚಿತ್ರ: ಬರತ್ ಕುಮಾರ್)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಚಿನ್ದಿಯಾಗ್ ಬರ್ದಿದ್ದಿರಿ….:)

ಅನಿಸಿಕೆ ಬರೆಯಿರಿ: