ಆಪಲ್ ಎದುರು ಸೋಲುತ್ತಿರುವ ಗೂಗಲ್

ವಿವೇಕ್ ಶಂಕರ್.

Apple-Maps-009

ಮಂದಿ ಹಲವು ಏಡುಗಳಿಂದ (years) ತಮ್ಮ ಓಡಾಟಕ್ಕೆ ನಾಡತಿಟ್ಟಗಳ (maps) ನೆರವನ್ನು ಪಡೆಯುವುದು ಗೊತ್ತು. ಇತ್ತೀಚೆಗೆ ಚೂಟಿಯುಲಿಗಳು ಹಾಗೂ ಎಣ್ಣುಕಗಳನ್ನು ಬಳಸಿ ನಾಡತಿಟ್ಟದ ಬಳಕಗಳನ್ನು (applications) ಮಂದಿ ಉಪಯೋಗಿಸುತ್ತಾರೆ. ಈ ನಾಡತಿಟ್ಟದ ಸಲುವಾಗಿ ಆಪಲ್ ಹಾಗೂ ಗೂಗಲ್ ನಡುವೆ ತುಂಬಾ ಪಯ್ಪೋಟಿ ನಡೆಯುತ್ತಿದೆ. ಆದರೆ ಈಗಿನ ಪಯ್ಪೋಟಿಯಲ್ಲಿ ಇತ್ತೀಚೆಗೆ ಆಪಲ್‍ಗೆ ಹೆಚ್ಚು ಗೆಲುವು ಕಾಣುತ್ತಿದೆ.

ಹಿಂದಿನ ಸೆಪ್ಟೆಂಬರ್ ನಲ್ಲಿ ಮೇಲ್ತುದಿಯನ್ನು (peak) ಕಂಡ ಗೂಗಲ್, ಆ ಹೊತ್ತಿನಲ್ಲಿ ಸುಮಾರು 8,10,00,000 ಅಲೆಯುಲಿ ಬಳಕೆದಾರರು, ಗೂಗಲ್ ನಾಡತಿಟ್ಟವನ್ನು ಬಳಸುತ್ತಿದ್ದರು, ಆದರೆ ಅಂದಿನಿಂದ ಇಲ್ಲಿಯವರೆಗೆ ಸುಮಾರು 2,30,00,000 ಬಳಕೆದಾರರನ್ನು ಕಳೆದುಕೊಂಡಿದ್ದಾರೆ. ಇದು ಎಲ್ಲರಲ್ಲೂ ಬೆರಗು ಉಂಟುಮಾಡಿದೆ.

ಆಪಲ್ ಕೂಟ ತನ್ನ ಅಯ್.ಒ.ಸ್-6(iOS-6) ಮೆದುಜಾಣವನ್ನು(software) ಸೆಪ್ಟೆಂಬರ್ 2012 ನಲ್ಲಿ ಬಿಡುಗಡೆ ಮಾಡಿತು. ಅದರ ಜೊತೆ ನಾಡತಿಟ್ಟಗಳು ಬಳಕ ಇತ್ತು ಆದರೆ ನಾಡತಿಟ್ಟದ ಬಳಕದಲ್ಲಿ ತುಂಬಾ ತಪ್ಪುಗಳಿದ್ದವು. ಎತ್ತುಗೆಗೆ: ಉಗಿಬಂಡಿ ನಿಲ್ದಾಣವೊಂದನ್ನು ನಾಡತಿಟ್ಟದಲ್ಲಿ ತೋಟವಾಗಿ ತೋರಿಸಲಾಗಿತ್ತು. ಇಂತ ಬೆಳವಣಿಗೆಗಳು ಆಪಲ್ ಕುರಿತು ಮಂದಿಯಲ್ಲಿ ಮುನಿಸು ಏರಿಸಿದವು. ಇದಾದ ಮೇಲೆ ಆಪಲ್ ಮಂದಿಯಲ್ಲಿ ತಪ್ಪೊಪ್ಪಿಗೆ ಕೂಡ ಸಲ್ಲಿಸಿತು.

ಅದಾದ ಮೇಲೆ ಆಪಲ್ ತಾನು ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ತುಂಬಾ ಬಿರುಸಿನಿಂದ ಕೆಲಸ ಮಾಡಿತು. ಆಪಲ್ ಸರಿಪಡಿಸಿದ ಹೊಸದಾದ ಬಳಕವನ್ನು ಮಂದಿ ಮುಗಿಬಿದ್ದು ಮಿಂಬಲೆಯಿಂದ ಇಳಿಸಿಕೊಂಡರು. ಬಿಡುಗಡೆಯಾದ ಬರೀ ನಲವತ್ತೆಂಟು ಗಂಟೆಗಳಲ್ಲಿ ಸುಮಾರು 1,00,00,000 ಇಳಿಕೆಗಳಾದವು (downloads).

ಈಗ ಒಂದೇಡಿನ ಮೇಲೆ ಅಮೇರಿಕಾದಲ್ಲಿ ಸುಮಾರು 3,50,00,000 ಅಲೆಯುಲಿ ಬಳಕೆದಾರರು ಆಪಲ್ ನಾಡತಿಟ್ಟದ ಬಳಕವನ್ನು ಬಳಸುತ್ತಿದ್ದಾರೆ, ಗೂಗಲ್ ನಾಡತಿಟ್ಟದ ಬಳಕೆದಾರರ ಎಣಿಕೆ 5,87,00,000. ಗೂಗಲ್ ಮಾರುಕಟ್ಟೆಯಲ್ಲಿ ತಮ್ಮ ಹಿಡಿತವನ್ನು ಕಳೆದುಕೊಂಡಿದ್ದಾರೆ ಅಂತ ಕಾಮ್ಸೋಕೊರ್ ಅರಕೆ (commscore research) ತಿಳಿಸುತ್ತದೆ.

ತುಂಬಾ ಬೆಲೆ

ನಾಡತಿಟ್ಟದ ತಿಳಿಹವು (data) ಆಪಲ್ ಹಾಗೂ ಗೂಗಲ್ ಅವರಿಗೆ ತುಂಬಾ ಅರಿದು (important). ಒಯ್ಯಾಟದ ಹರಿವು (traffic flow) ತಿಳಿಹದಿಂದ ಬಳಕೆದಾರರ ಎಡೆಯನ್ನು (user location) ಗುರುತಿಸಿ ದೊರೆತ ಮಾಹಿತಿಯನ್ನು ಹಲವು ಕೂಟಗಳಿಗೆ ಕಳುಹಿಸುತ್ತಾರೆ. ಗೂಗಲ್ ಇದನ್ನು ಬಳಸಿ ತಕ್ಕಂತೆ ತಮ್ಮ ನಾಡತಿಟ್ಟ ಹಾಗೂ ಹುಡುಕಾಟದಲ್ಲಿ ಬಯಲರಿಕೆಗಳನ್ನು (advertisements) ಹಾಕುತ್ತಾರೆ.

ಅದೇ ಆಪಲ್ ತಮ್ಮ ಅಲೆಯುಲಿಗಳ ಸಲುವಾಗಿ ಇಂತ ಒಯ್ಯಾಟದ ತಿಳಿಹವನ್ನು ಬಳಸುತ್ತಾರೆ. ಇವರ ನಡುವೆ ತುಂಬಾ ಪಯ್ಪೋಟಿ ನಡೆದಿದ್ದು 2009 ನಲ್ಲಿ ಒಂದು ಆಗುಹದಿಂದ ಈ ಪಯ್ಪೋಟಿಗೆ ಹೊಸ ತಿರುವು ನೀಡಿತು. ಅದೇನೆಂದರೆ ತಲುಪದಾರಿಯ (navigation) ಸಲುವಾಗಿ ತಿಳಿಸುವ ತಿರುವು-ತಿರುವು (turn by turn) ತಿಳಿಹವನ್ನು ಗೂಗಲ್ ಅವರು ಆಪಲ್ ಗೆ ನೀಡಲಿಲ್ಲ. ಇದರಿಂದ ಆಪಲ್ ಅವರು ತಮ್ಮ ನಾಡತಿಟ್ಟವನ್ನು ಕಟ್ಟುವ ತೀರ‍್ಮಾನ ತೆಗೆದುಕೊಂಡರು.

ಯಾವಾಗಿನ ನಡೆವಳಿಕೆ

ಆಪಲ್ ಅಲೆಯುಲಿಗಳನ್ನು ಬಳಸುವ ಮಂದಿ ಅದರಲ್ಲಿರುವ ನಾಡತಿಟ್ಟದ ಬಳಕವನ್ನು ಬಳಸುತ್ತಾರೇ ಹೊರತು ಗೂಗಲ್ ಅವರ ನಾಡತಿಟ್ಟಗಳನ್ನು ಬಳಸುವುದಿಲ್ಲ. ಕಾಮ್ಸೋಕೊರ್ ಅವರ ಅರಕೆ ಹೇಳುವುದೇನೆಂದರೆ ಸೆಪ್ಟೆಂಬರ್ 2012 ನಲ್ಲಿ 10,36,00,000 ಬಳಕೆದಾರರಲ್ಲಿ 8,10,00,000 ಬಳಕೆದಾರರು ಗೂಗಲ್ ನಾಡತಿಟ್ಟ ಬಳಸುತ್ತಿದ್ದರು ಆದರೆ ಒಟ್ಟು ಬಳಕೆದಾರರ ಎಣಿಕೆ 13,67,00,000 ಗೆ ಏರಿದ್ದರೂ ಕೂಡ, ಗೂಗಲ್ ಬಳಕೆದಾರರ ಎಣಿಕೆ 5,87,00,000 ಗೆ ಇಳಿದಿದೆ. ಸಾಮಾನ್ಯ ಬಳಕೆದಾರರ ಬಳಿ ಗೂಗಲ್ ನಾಡತಿಟ್ಟ ಇದ್ದರೂ ಅದನ್ನು ಬಳಸುವುದಿಲ್ಲ. ಇದಕ್ಕೆ ಆಪಲ್ ಅವರ ನಾಡತಿಟ್ಟಗಳಲ್ಲಿ ಕಡಿಮೆ ತಪ್ಪುಗಳಿವೆ ಅನ್ನುವುದೇ ಮುಕ್ಯ ಕಾರಣವಂತೆ.

ಹೊಸ ಸುದ್ದಿ

ಇವುಗಳ ನಡುವೆ ವೇಸ್ (waze) ಅನ್ನುವಂತ ಬಳಕವೊಂದನ್ನು ಗೂಗಲ್ ಜೂನ್ 2012 ನಲ್ಲಿ ಹೊರತಂದಿತು. ಆದರೆ ಹಲವು ತಿಳಿಹವನ್ನು ನೋಡಿದರೂ ಕೂಡ ಇವರ ಮಾರುಕಟ್ಟೆಯಲ್ಲಿ ತುಂಬಾ ಗೆಲುವು ಪಡೆದಿಲ್ಲ. ಈ ಬಳಕದಿಂದ ಗೂಗಲ್‍ಗೆ ಹೆಚ್ಚು ಉಪಯೋಗವಾಗಿಲ್ಲ. ಒಟ್ಟಿನಲ್ಲಿ ಗೂಗಲ್ ಹಾಗೂ ಆಪಲ್ ನಡುವೆ ನಡೆಯುತ್ತಿರುವ ಪಯ್ಪೋಟಿಯಲ್ಲಿ ಈ ಹೊತ್ತಿನಲ್ಲಿ ಆಪಲ್ ಮುನ್ನಡೆ ಪಡೆದಿದ್ದಾರೆ ಕಾಮ್ಸೋಕೊರ್ ಅವರ ಅರಕೆಯಿಂದ ತಿಳಿದುಬರುತ್ತದೆ.

ಗುರು ಗೂಗಲ್‍ನ ಮುಂದಿನ ನಡೆಗಳನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.

(ಒಸಗೆಯ ಹಾಗೂ ತಿಟ್ಟದ ಸೆಲೆ: guardian)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: