ಇರುಳಲ್ಲೂ ಬಳಸಬಹುದಾದ ನೇಸರ ಒಲೆ
– ವಿವೇಕ್ ಶಂಕರ್.
ನೇಸರನ ಕಸುವು (solar power) ಬಳಕೆ ಮಾಡುವುದರಿಂದ ತುಂಬಾ ಉಪಯೋಗವೆಂದು ನಮಗೆ ಗೊತ್ತು. ಆದರೆ ಅದೇ ನೇಸರನ ಅಳವು ಇಲ್ಲದಿದ್ದಾಗ ಸಲಕರಣೆಗಳನ್ನು ಹೇಗೆ ಬಳಕೆ ಮಾಡವುದೆಂದು ನಮ್ಮಲ್ಲಿ ಆಗಾಗ ಮೂಡಿ ಬರುವ ಕೇಳ್ವಿ.
ಇತ್ತೀಚಿನ ಬೆಳವಣಿಗೆಗಳಿಂದ ಈ ಕೊರತೆಯನ್ನು ಬಗೆಹರಿಸಬಹುದು. ಅಂದರೆ ನೇಸರನ ಕಸುವು ಕೂಡಿಟ್ಟು ಇರುಳಲ್ಲೂ ಈಗ ಸಲಕರಣೆಗಳನ್ನು ಉಪಯೋಗಿಸಬಹುದು. ಇದರಿಂದ ಅಡುಗೆ ಕೆಲಸಗಳನ್ನು ಇರುಳು ಹೊತ್ತಿನಲ್ಲೂ ಮಾಡಬಹುದು. ಈ ಹೊಸ ಚಳಕವನ್ನು ಮೇಲೆ ತೋರಿಸಲಾಗಿರುವ ಒಲೆಯಲ್ಲಿ (grill) ಬಳಸಿದ್ದಾರೆ.
ಈ ಒಲೆಯಲ್ಲಿರುವ ಪ್ರೆಸ್ನೆಲ್ ಸೇರ‍್ಗನ್ನಡಿಯು ಲಿತಿಯಂ ನಯ್ಟ್ರೇಟನ್ನು ಬಿಸಿ ಮಾಡುತ್ತದೆ. ಈ ಬಿಸಿ ಲಿತಿಯಂ ನಯ್ಟ್ರೇಟನ್ನು ಒಂದೆಡೆ ಕೂಡಿಟ್ಟರೆ ಅದರಿಂದ ಉಂಟಾಗುವ ಕಾವನ್ನು ಇಪ್ಪತ್ತಯ್ದು ಗಂಟೆಯವರೆಗು ಬಳಸಬಹುದು. ಇದು ಒಯ್ಯುವ ಕಾವಾಗಿ ಬಳಕೆ ಆಗುತ್ತದೆ ಹಾಗೂ ಇದರ ಕಾವಳತೆ (temperature) ಸುಮಾರು 450 ಡಿಗ್ರಿ ಪಾರನ್ಹಯ್ಟ್ (fahrenheit).
ಎಂ.ಅಯ್.ಟಿ. ಮೇಲ್ಕಲಿಸುಗರಾದ ಡೆವಿಡ್ ವಿಲ್ಸನ್ ಹೇಳುವುದೇನೆಂದರೆ ಈ ಕಾವನ್ನು ಬರಿ ಅಡಗೆಗಲ್ಲ ಮನೆಯನ್ನು ಬಿಸಿ ಮಾಡಲೂ ಬಳಸಬಹುದು ಇಲ್ಲ ನೀರನ್ನು ಕಾಯಿಸಬಹುದು ಇಲ್ಲ ಮಿಂಚನ್ನು ಕೂಡ ಉಂಟುಮಾಡಬಹುದು.
ಹೀಗೆ ನೇಸರನ ಕಸುವನ್ನು ಕೂಡಿಟ್ಟು ಹಗಲಿರುಳು ಹಲವು ಕೆಲಸಗಳಿಗೆ ಬಳಸಬಹುದೆನ್ನುವುದು ನಮ್ಮೆಲ್ಲರಿಗೂ ಒಸಗೆನುಡಿ.
(ತಿಟ್ಟ ಹಾಗೂ ಒಸಗೆಯ ಸೆಲೆ: wesupportorganic)
ಇತ್ತೀಚಿನ ಅನಿಸಿಕೆಗಳು