‘ಹೊನಲು ಹಬ್ಬ’ – ಅಕ್ಕರೆಯ ಕರೆಯೋಲೆ

-ಹೊನಲು ತಂಡ

ಹೊನಲು ಮಿಂಬಾಗಿಲು ಶುರುವಾಗಿ ಒಂದು ವರುಶ ಕಳೆದಿದೆ. ಕನ್ನಡದ ಕೂಡಣದ ಏಳಿಗೆಗೆ ನೆರವಾಗುವಂತೆ, ಕನ್ನಡದ ಲಿಪಿ ಸುದಾರಣೆ ಮಾಡಿಕೊಂಡು, ವಿಶಿಶ್ಟ ಬರಹಗಳಿಂದ ಹೊನಲಿನ ಒಂದು ವರುಶ ಸಾಗಿಬಂದಿದೆ. ಎಲ್ಲರೂ ಬರಹದಲ್ಲಿ ತೊಡಗುವಂತೆ ಹುರಿದುಂಬಿಸುತ್ತಾ, ಜಗತ್ತಿನ ಅರಿಮೆ ಹಾಗು ಚಳಕಗಳ ವಿಶಯಗಳನ್ನು ತಿಳಿಯಾದ ಕನ್ನಡದಲ್ಲಿ ತಿಳಿಸುತ್ತಾ, ಕನ್ನಡದಲ್ಲಿ ಹಿಂದೆಂದೂ ಬಾರದ ಹೊಸ ಪ್ರಯೋಗಕ್ಕೆ ಹೊನಲು ಮುನ್ನುಡಿ ಹಾಡಿದೆ. ಅರಿಮೆ, ನಾಡು, ನಲ್ಬರಹ ಮತ್ತು ನಡೆ-ನುಡಿ ಬರಹಗಳಿಂದ ಸಿಂಗಾರಗೊಂಡ ಹೊನಲು ಈಗ ಒಂದು ವರುಶ ಪೂರಯ್ಸಿರುವುದು ನಲಿವನ್ನು ತಂದಿದೆ.

ಈ ಸಡಗರದ ಹೊತ್ತನ್ನು ಒಂದು ವರುಶದಿಂದ ಹೊನಲನ್ನು ಬೆಳೆಸುತ್ತಿರುವ ಓದುಗರು ಮತ್ತು ಬರಹಗಾರರೊಡನೆ ಕಳೆಯಲು ಕಾರ‍್ಯಕ್ರಮವೊಂದನ್ನು ಮೇ 3, 2014 ರಂದು ಏರ್‍ಪಡಿಸಲಾಗಿದೆ. ಕಾರ‍್ಯಕ್ರಮಕ್ಕೆ ಕನ್ನಡ ನಾಡಿನ ಹೆಸರಾಂತ ವ್ಯಕ್ತಿಗಳು ಅತಿತಿಗಳಾಗಿ ಬರಲಿದ್ದಾರೆ. ಕಾರ‍್ಯಕ್ರಮದ ಅತಿತಿಗಳ ವಿವರ ಮತ್ತು ನಡೆಯುವ ಜಾಗವನ್ನು ಲಗತ್ತಿಸಿರುವ ಕರೆಯೋಲೆಯಲ್ಲಿ ನೀಡಿದ್ದೆವೆ. ಈ ಕಾರ‍್ಯಕ್ರಮಕ್ಕೆ ತಮಗೆಲ್ಲರಿಗೂ ಅಕ್ಕರೆಯ ಕರೆಯೋಲೆಯನ್ನು ಈ ಮೂಲಕ ನೀಡುತ್ತಿದ್ದೇವೆ.

ತಪ್ಪದೇ ಬನ್ನಿ, ಹೊನಲು ಹಬ್ಬದಲ್ಲಿ ನೀವು ಪಾಲ್ಗೊಳ್ಳಿ.

ಪೇಸ್‍ಬುಕ್‍ನಲ್ಲಿ ಈ ಕಾರ್‍ಯಕ್ರಮದ ಕರೆಯೋಲೆಯನ್ನು ನೋಡಲು ಈ ಕೆಳಗಿನ ಕೊಂಡಿಯನ್ನು ಒತ್ತಿ. ನಿಮ್ಮ ಬರುವಿಕೆಯನ್ನು ಅಲ್ಲಿ ನಿಕ್ಕಿ ಮಾಡಿ.

https://www.facebook.com/events/612056755544016/?ref=2&ref_dashboard_filter=upcoming

 

Honalu_modala_varusha

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications