ಹ್ರುದಯ ನೋವಿನಲಿ ಬೇಯುತಿದೆ…

ಶ್ರೀನಿವಾಸ್.ಎಮ್.ಎಸ್.

28-1380364074-27-1380281847-man
ಇಂದು ನನ್ನವಳು ಮದುವಣಗಿತ್ತಿ
ಕಳಚಿ ಬಿದ್ದಿದೆ ಕನಸುಗಳ ಬುತ್ತಿ
ಕರೆದಿದ್ದಾಳೆ ಮದುವೆಗೆ ಅವಳು
ನನ್ನ ಪ್ರೀತಿಯ ಕೊಂದವಳು

ನನ್ನೊಲವಿಗೆ ವಿಶ ಹಾಕಿದವಳ
ನೆನಪುಗಳು ಕಾಡುತಲಿವೆ
ಹ್ರುದಯ ನೋವಿನಲಿ ಬೇಯುತಿದೆ
ನೋವಿನ ಸುಕವು ಒಂತರ ಚೆನ್ನಾಗಿದೆ

ವಿರಹದ ಬೇಗೆ ಸುಡುತಿರಲು
ನಾ ಹೇಗೆ ಹೋಗಲಿ ಮದುವೆಗೆ
ಅವಳ ಹೆಸರು ಸೇರಿಹೋಯಿತೀಗ
ಬೇರೊಬ್ಬನ ಹೆಸರಿಗೆ…

(ಚಿತ್ರ: kannada.boldsky.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: