ಅಚ್ಚರಿ ಮೂಡಿಸುವ ಅರಕೆಗಳು – ಬಾಗ 2

– ಜಯತೀರ‍್ತ ನಾಡಗವ್ಡ.

(ಅಚ್ಚರಿ ಮೂಡಿಸುವ ಅರಕೆಗಳು ಬರಹದ ಮುಂದುವರಿದ ಬಾಗ)

4. ಚಾರ‍್ಜಿಂಗ್ ಚಪ್ಪಲಿಗಳು:
ನಾವು ಕೆರಗಳನ್ನು ತೊಟ್ಟು ಟಪ್ ಟಪ್ ಎಂದು ತುಳಿದುಕೊಂಡು ಹೋಗುತ್ತಿರುತ್ತೇವೆ. ಕೆಲವರಿಗೆ ಈ ಟಪ್ ಟಪ್ ಎಂಬ ಸದ್ದು ಬಹಳ ಹಿಡಿಸುತ್ತದೆ ಮತ್ತು ಮುದಕೊಡುತ್ತದೆ. ನಮ್ಮ ಕೆರ ತುಳಿತದಿಂದ ಕಸುವು ಉಂಟಾಗುತ್ತದೆ ಇದನ್ನು ಬಳಸಿ ಬಲ್ಬವೊಂದನ್ನು ಉರಿಸಬಹುದು ಎಂದರೆ ನಂಬಲಾಗದು. ಇದೇ ಕಸುವನ್ನು ಚಿಕ್ಕ-ಪುಟ್ಟ ದಿನ ನಿತ್ಯದ ಕೆಲಸಗಳಲ್ಲಿ ಅಳವಡಿಸಿಕೊಂಡರೆ ಎಶ್ಟು ಲಾಬ.

ಮ್ಯಾಟ್ ಸ್ಟಾಂಟನ್(Matt Stanton) ಎಂಬ ಬಿಣಿಗೆಯರಿಗರೊಬ್ಬರು ಇಂತ ಕೆರಗಳ ಕಸುವು ಬಳಸಿ ಅದನ್ನು ತಮ್ಮ ಅಲೆಯುಲಿ ಚಾರ‍್ಜ್ ಮಾಡಲು ಕೆಲಸಮಾಡುತ್ತಿದ್ದಾರೆ. ಕಾರ‍್ನೇಜ್ ಮೆಲ್ಲೊನ್(Carnegie Mellon) ಕಲಿಕೆವೀಡಿನಲ್ಲಿ ತಮ್ಮ ಜೊತೆ ಓದುತ್ತಿರುವ ಹಾಹ್ನಾ ಅಲೆಕ್ಸಾಂಡರ್ (Hahna Alexander) ಎಂಬ ಇನ್ನೊಬ್ಬ ಬಿಣಿಗೆಯರಿಗೆ ಇವರ ಈ ಹಮ್ಮುಗೆಯಲ್ಲಿ ಜೊತೆಯಾಗಿದ್ದಾರೆ. ಕೆರ ತುಳಿತದಿಂದ ಉಂಟಾಗುವ ಕಸುವನ್ನು ಇವರು ಮಿಂಚಿನ ಕಸುವಾಗಿಸುವ ಹೊಳಹೊಂದನ್ನು ಇವರು ಮುಂದಿಟ್ಟಿದ್ದಾರೆ. ಪೀಜೊಎಲೆಕ್ಟ್ರಿಕ್ ಬಿಡಿಬಾಗಗಳನ್ನು ಕಡಿಮೆಗೊಳಿಸಿ ಮಿಂಚಿನ ಕಸುವುಂಟುಮಾಡುವ ಕೆರ ತಯಾರಿಸಲಾಗಿದೆ.

solepower

ಇದು ಹೇಗೆ ಕೆಲಸ ಮಾಡುತ್ತದೆ:
ಕಾಲ್ಮೆಟ್ಟಿನ ಹಿಂಬಾಗದ ಸೋಲ್ ನಲ್ಲಿ ಜೋಡಿಸಲಾಗಿರುವ ಹಲ್ಲುಗಾಲಿಯ ಏರ‍್ಪಾಟು ತುಳಿತದ ಬಲವನ್ನು ತಿರುಗಣೆ ಬಲವಾಗಿ ಬದಲಾಯಿಸುತ್ತದೆ.ಮಿನ್ಸುಳಿತದ ತಿರುಗುಣಿಗಳು ಇದರಿಂದ ಮಿಂಚನ್ನು ಉಂಟು ಮಾಡಿ ಲಿತಿಯಂ-ಆಯಾನ್ ಬ್ಯಾಟರಿಗೆ ಒದಗಿಸುತ್ತವೆ. ಇದೇ ಬ್ಯಾಟರಿ ಅಲೆಯುಲಿ, ಅಯ್-ಪ್ಯಾಡ್ ಗಳನ್ನು ಚಾರ‍್ಜ್ ಮಾಡುತ್ತದೆ. ಇದೀಗ ಒಂದು ಆಯ್-ಪೋನ್ ಪೂರ‍್ತಿಯಾಗಿ ಚಾರ‍್ಜ್ ಮಾಡಲು ನೀವು ಇಂತ ಕಾಲ್ಮೆಟ್ಟು ತೊಟ್ಟು 24 ಕಿ.ಮೀ ಓಡಾಡಬೇಕು. ಇದನ್ನು 8 ಕಿ.ಮೀ ಗೆ ಇಳಿಸುವತ್ತ ಸ್ಟಾಂಟನ್ ಅರಕೆ ಕೆಲಸ ನಡಿಯುತ್ತಿದೆ. ಈ ಸೋಲ್ ಅನ್ನು ಬೇಕಾದಾಗ ತೆಗೆದು ಮತ್ತೆ ನಿಮ್ಮ ಕಾಲ್ಮೆಟ್ಟಿಗೆ ಸೇರಿಸುವಂತೆ ತಯಾರಿಸಲಾಗಿದೆ. ಈ ಹಮ್ಮುಗೆಗೆ ಈಗಾಗಲೇ ಮೂರು ಲಕ್ಶ ಡಾಲರ್ ವೆಚ್ಚವಾಗಿದೆ. ಸೋಲ್ ಪಾವರ್ ಎಲ್ ಎಲ್ ಸಿ (Sole Power LLC) ಎಂಬ ಕೂಟದವರ ನೆರವಿನಡಿಯಲ್ಲಿ ಈ ಹಮ್ಮುಗೆ ನಡೆಯುತ್ತಿದೆ.

5. ಹೊಸ ಹೊರಸೂಸುಕ:
ಮಾರ‍್ಶಲ್ ಕಾಕ್ಸ್ (Marshall Cox) ಎಂಬುವರು ಎಲೆಕ್ಟ್ರಿಕಲ್ ಬಿಣಿಗೆಯರಿಮೆಯಲ್ಲಿ ಹೆಚ್ಚಿನ ಕಲಿಕೆ ಅಂದರೆ ತಮ್ಮ ಪಿಎಚ್ಡಿ ಕಲಿಯುವ ಹೊತ್ತಿನಲ್ಲಿ ಒಂದು ವಿಶೇಶ ಅನುಬವಕ್ಕೊಳಗಾದರು. ಇದೇ ಅನುಬವ ಮುಂದೆ ಅವರನ್ನು ವಿಶೇಶವಾದ ಹೊರಸೂಸುಕ ಕಂಡುಹಿಡಿಯುವಲ್ಲಿ ಪ್ರಮುಕ ಹೆಜ್ಜೆಯಾಗಿ ಮಾರ‍್ಪಟ್ಟಿತು. 90 ವರುಶದಶ್ಟು ಹಳೆಯದಾದ ಮ್ಯಾನ್ ಹಟನ್ನಿನ ಹಲಮಹಡಿ ಕಟ್ಟಡದಲ್ಲಿದ್ದು ಕೊಂಡು ಕಾಕ್ಸ್ ತಮ್ಮ ಕಲಿಕೆ ಮುಂದುವರೆಸಿದ್ದರು. ಮನೆಯಲ್ಲಿ ಕಡುಕೊರೆಯುವ ಚಳಿಗಾಲದ ಇರುಳಿನಲ್ಲಿ ಮಲಗಿದಾಗ ವಿಪರೀತ ಸೆಕೆಯಿಂದ ಬೆವರುಹರಿದು ಬಸವಳಿಯುತ್ತಿದ್ದರು ಕಾಕ್ಸ್. ಇದಕ್ಕೆಂದು ಕಿಟಕಿಯ ಬಾಗಿಲು ತೆರೆದು ಮಲಗಿಕೊಂಡರೆ ಬೆಳಿಗ್ಗೆ ಏದ್ದೇಳುವ ಸಮಯದಲ್ಲಿ ಚಳಿಯಿಂದ ಗಡಗಡ ನಡುಗುತ್ತಿದ್ದರು. ಇದು ದಿನನಿತ್ಯದ ಅನುಬವವಾಗಿತ್ತು.ಇದಕ್ಕೆ ಅವರ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಹೊರಸೂಸುಕವೇ ಕಾರಣವಾಗಿತ್ತು.

ಕಾಕ್ಸ್ ಪ್ರಕಾರ ಅಮೇರಿಕಾದ ಶೇಕಡಾ 10 ರಶ್ಟು ಮನೆ/ಮಹಡಿಗಳಲ್ಲಿ ಇಂತ ಸಮಸ್ಯೆ ಇತ್ತು. ಬೇಡವಾದಾಗ ಹೆಚ್ಚಿನ ಬಿಸುಪು ನೀಡಿ ಚಳಿಗಾಲದಲ್ಲಿ ಬೇಸಿಗೆಯನ್ನು ತರಿಸುವ ಬಾಯ್ಲರ್ ಆದರಿತ ಹೊರಸೂಸುಕಗಳ ಸಮಸ್ಯೆಯನ್ನು ತಡೆಯಲು ಮಾರ‍್ಶಲ್ ಕಾಕ್ಸ್ ಹೊಸ ಅರಕೆಯೊಂದಕ್ಕೆ ಕಯ್ ಹಾಕಿದರು. ಈ ಹೊರಸೂಸುಕಗಳು ಸಮವಾಗಿ ಬಿಸುಪನ್ನು ನೀಡುವಲ್ಲಿ ಸೋತಿದ್ದವು. ಬಾಯ್ಲರ್ ನಿಂದ ಬರುವ ಬೀಸಿ ನೀರಿನ ಬಿಸುಪನ್ನು ಬಳಸಿ ಮನೆಯನ್ನು ಚಳಿಗಾಲದಲ್ಲಿ ಬೆಚ್ಚಗಿರಿಸುವುದು ಹೊರಸೂಸುಕದ ಕೆಲಸ. ಆದರೆ ಇದು ಎಲ್ಲೆಡೆ ಸಮನಾಗಿ ಬೆಚ್ಚಗಿರುಸುತ್ತಿರಲಿಲ್ಲ, ಈ ಹೊರಸೂಸುಕಗಳ ಸುಮಾರು 30% ರಶ್ಟು ಬಲ ಬಳಕೆಯಾಗದೇ ಹೋಗುತ್ತಿತ್ತು. ಇದರಿಂದ ಮ್ಯಾನ್-ಹಟನ್ ಊರೊಂದರಲ್ಲೇ 700 ಮಿಲಿಯನ್ ಡಾಲರ್ ದಶ್ಟು ಹಣ ದುಂದುವೆಚ್ಚವಾಗಿತ್ತು. ಅಶ್ಟೇ ಅಲ್ಲದೇ ಬಾಯ್ಲರ್ ಕಾಯಿಸಲು ಬೇಕಾಗುವ ಕೆಲವು ಎಸಕದ ವಸ್ತುಗಳಿಂದ ವಾತಾವರಣದಲ್ಲಿ ಕೆಡುಗಾಳಿ ಸೇರಿಕೊಂಡು ಅಸ್ತಮಾ ಮುಂತಾದ ರೋಗ ಹಬ್ಬುತ್ತವೆ.

ಕಾಕ್ಸ್ ಇದನ್ನು ನೀಗಿಸಲು ಕೋಜಿ(Cozy) ಎಂಬ ಮಿಂಚಿನ ಹೊರಸೂಸುಕ ಕಂಡುಹಿಡಿದರು. ಇದು ಕಟ್ಟಡದ ಎಲ್ಲ ಮನೆಗಳಿಗೂ ಸಮನಾದ ಬಿಸುಪು ನೀಡಿ ಬೆಚ್ಚಗಿಡಲು ನೆರವಾಗುತ್ತದೆ. ಮಿಂಚಿನ ಕಸುವು ಬಳಸುವ ಕೋಜಿ ಕಡಿಮೆ ಉರುವಲಿನ ಎಣ್ಣೆ ಬಳಸಿ,ಕಡಿಮೆ ಕೆಡುಗಾಳಿ ಉಗುಳುತ್ತದೆ.

boiler-radiator

ಕಾಕ್ಸ್ ಕಂಡು ಹಿಡಿದ ಹೊರಸೂಸುಕದ ಕೆಲಸದ ಪರಿ:
ಬಾಯ್ಲರ್ ಮೂಲಕ ಬಿಸಿಯಾದ ಆವಿ ಕಟ್ಟಡದ ಮನೆಗೊಂದರಂತೆ ಜೋಡಿಸಲಾಗಿರುವ ಹೊರಸೂಸುಕಗಳಿಗೆ ಸಾಗಿಸುತ್ತದೆ. ಬಾಯ್ಲರ್ ಗೆ ಹತ್ತಿರವಿರುವ ಹೊರಸೂಸುಕಗಳು ಮೊದಲು ಕಾಯ್ದರೆ ಮೇಲ್ಮಹಡಿಯ ಹೊರಸೂಸುಕಗಳು ತಡವಾಗಿ ಕಾಯುತ್ತವೆ. ಎಂದಿನಂತೆ ಹೆಚ್ಚು ಕಾವುಗೊಳ್ಳುವ ಮನೆಗಳನ್ನು ಕೋಜಿ ನಿಯಂತ್ರಿಸಿ ಹೊರಸೂಸುಕದ ಬಿಸುಪನ್ನು ಕೂಡಿಡುತ್ತದೆ. ಬೇಕಿನಿಸಿದಾಗ ಮಾತ್ರ ಬಿಸುಪನ್ನು ಒದಗಿಸಿ ಇಲ್ಲವಾದಾಗ ಅದನ್ನು ಹಿಡಿದಿಟ್ಟು ಹೊರಸೂಸುಕಗಳ ಅಳವುತನ ಹೆಚ್ಚುಗೊಳಿಸುತ್ತದೆ. ಕೋಜಿ-ಹೊರಸೂಸುಕದಲ್ಲಿರುವ ಎಣ್ಣುಕ ಕೋಣೆಯ ಬಿಸುಪಿಗೆ ತಕ್ಕಂತೆ ಹೊಂದಿಕೊಂಡು ಮನೆಗಳನ್ನು ಬೇಕಾದಾಗ ಅಗತ್ಯವಿದ್ದಶ್ಟು ಮಾತ್ರವೇ ಬೆಚ್ಚಗಿಡುತ್ತದೆ. ಮೇಲ್ಮಹಡಿಯ ಮನೆಗಳಿಗೆ ಹೆಚ್ಚಿನ ಕಾವು ಬೇಕೆನಿಸಿದಾಗ ಅದನ್ನು ಸುಲಬವಾಗಿ ಅಲ್ಲಿಗೆ ಕಳುಹಿಸಿ ಎಲ್ಲ ಮನೆಗಳನ್ನು ನಿಯಂತ್ರಿಸಲು ಈ ಚಳಕ ನೆರವಾಗುತ್ತದೆ. ಕೋಜಿ-ಹೊರಸೂಸಿಯಲ್ಲಿರುವ ಅರಿವಿಕದ ಮೂಲಕ ಮನೆಯ ಬಿಸುಪನ್ನು ಅಳೆದು ಅದಕ್ಕೆ ತಕ್ಕಂತೆ ತಂಗಾಳಿಯನ್ನು ಹೊರಹಾಕಿ ಕಾವನ್ನು ಒದಗಿಸುತ್ತದೆ. ಇದಕ್ಕೊಂದು ಆಪ್ ಕೂಡ ಸಿದ್ದಪಡಿಸಲಾಗಿದ್ದು ಮನೆಯಲ್ಲಿರುವರು ವಾಯ್-ಪಾಯ್ ಮೂಲಕ ತಮ್ಮ ಮನೆಗೆ ಬೇಕೆನಿಸಿದಶ್ಟು ಕಾವನ್ನು ಪಡೆಯಬಹುದು. 500000 ಡಾಲರ್ ವೆಚ್ಚದ ಈ ಅರಕೆಗೆ ರೇಡಿಯೇಟರ್ ಲ್ಯಾಬ್ಸ್ ಅನ್ನುವ ಕೂಟವೊಂದು ಹಣಕಾಸಿನ ನೆರವು ನೀಡಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: popsci.com)Categories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s