ನುಡಿ ಸಮಾನತೆ ಕಾಪಾಡುವಲ್ಲಿ ಎಡವಿದ ಪಾಕಿಸ್ತಾನ

ಅನ್ನದಾನೇಶ ಶಿ. ಸಂಕದಾಳ.

pak-langs

 

ಬಲೂಚಿ, ಬ್ರಹೂಯಿ, ಬಾಲ್ಟಿ, ಪುಶ್ಟೋ, ಪಂಜಾಬಿ, ಶಿನಾ, ಸಿಂದಿ, ಸರಯ್ಕಿ ಮತ್ತು ಹಿಂದ್ಕೋ ನುಡಿಗಳನ್ನೂ ಪಾಕಿಸ್ತಾನದ ರಾಶ್ಟ್ರೀಯ ನುಡಿಗಳಾಗಿ ಮಾಡಬೇಕು ಎಂದು ಆ ದೇಶದ ಸಂಸತ್ತಿನಲ್ಲಿ ಮಾರ್‍ವಿ ಮೆಮನ್ ಎಂಬುವವರು ಮಂಡಿಸಿದ ಮಸೂದೆಯೊಂದನ್ನು ತಳ್ಳಿಹಾಕಲಾಯಿತು ಎನ್ನುವ ಸುದ್ದಿಯೊಂದು ಬಂದಿದೆ. ಈ ಬೇಡಿಕೆಯು ಬಹಳ ದಿನಗಳಿಂದಾ ಇದ್ದಿದ್ದು, ಆ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ನಡೆದಿದ್ದವು ಎಂದೂ ಹೇಳಲಾಗಿದೆ. ಮೇಲೆ ಪಟ್ಟಿ ಮಾಡಿರುವ ನುಡಿಗಳಾಡುವ ಮಂದಿ ಹೆಚ್ಚಿನ ಎಣಿಕೆಯಲ್ಲಿದ್ದೂ , ಆ ನುಡಿಗಳನ್ನು ಅಲ್ಲಿ ರಾಶ್ಟ್ರೀಯ ನುಡಿಗಳಾಗಿ ಮಾಡದಿರುವುದು ಆ ನುಡಿಯಾಡುವವರಿಗೆ ಬೇಸರ ಮೂಡಿಸಿದೆ. ಇವತ್ತಿಗೆ ಅತವಾ ಈ ಹೊತ್ತಿಗೆ ಉರ್‍ದು ಒಂದೇ ಪಾಕಿಸ್ತಾನದ ರಾಶ್ಟ್ರೀಯ ನುಡಿಯಾಗಿದೆ. 1948ರಲ್ಲಿ ಉರ್‍ದು ಮಾತಾಡುವವರು 3% ರಶ್ಟಿದ್ದು, 2008ರ ಮಂದಿಯೆಣಿಕೆ ಪ್ರಕಾರ ಪಾಕಿಸ್ತಾನದ 8% ಮಂದಿ ಉರ್‍ದು ನುಡಿಯಾಡುವವರು ಎಂದು ತಿಳಿದುಬಂದಿದೆ. ಪಾಕಿಸ್ತಾನವು ಬೇರೆ ಬೇರೆ ನುಡಿಯಾಡುವ ನಾಡಾಗಿದ್ದು, ಉರ್‍ದುವೊಂದನ್ನೇ ಎಲ್ಲರ ಮೇಲೆ ಹೇರಿರುವುದು-ಹೇರುತ್ತಿರುವುದು ಅಲ್ಲಿನ ಮಂದಿಗೆ ಹಿಡಿಸಿಲ್ಲ. ಉರ್‍ದು ಬಡಗಣ ಬಾರತದಲ್ಲಿ ನೆಲೆಯೂರಿದ್ದ ನುಡಿಯಾಗಿದ್ದು ಪಾಕಿಸ್ತಾನಕ್ಕೆ ಹೊರಗಿನ ನುಡಿ ಎಂಬುದನ್ನು ಗಮನಿಸಬೇಕಾದ ವಿಚಾರ.

ಈ ಹಿಂದೆ ಉರ್‍ದುವಲ್ಲದೆ ಬಂಗಾಳಿ ನುಡಿಯನ್ನೂ ರಾಶ್ಟ್ರೀಯ ನುಡಿಯನ್ನಾಗಿ ಮಾಡಿದ್ದರಿಂದ ಮೂಡಣ ಪಾಕಿಸ್ತಾನವು ಬಾಂಗ್ಲಾದೇಶವಾಗಿ ಬೇರೆಯಾಯಿತು ಎನ್ನುವ ನೆಪವೊಡ್ಡಿ ಬೇರೆ ನುಡಿಗಳನ್ನು ರಾಶ್ಟ್ರೀಯ ನುಡಿಗಳಾಗಿ ಮಾಡದಿರಲು ಅಲ್ಲಿ ತೀರ್‍ಮಾನಿಸಿದ್ದಾರೆ. ಆದರೆ ಇದು ಹಿನ್ನಡುವಳಿಯನ್ನು(history) ತಿರುಚುವ ಬಗೆಯಾಗಿದ್ದು, ಬಾಂಗ್ಲಾದೇಶ ಪಾಕಿಸ್ತಾನದಿಂದ ಬೇರೆಯಾಗಲು ಕಾರಣ ಬೇರೆಯೇ ಇದೆ. ಬ್ರಿಟೀಶರಿಂದ ಬಿಡುಗಡೆ ಹೊಂದಿದ ಮೇಲೆ ಮೂಡಣ ಮತ್ತು ಪಡುವಣ ಪಾಕಿಸ್ತಾನದಲ್ಲಿ ಉರ್‍ದುವೊಂದೇ ರಾಶ್ಟ್ರೀಯ ನುಡಿಯಾಗಿಸಿದ್ದು, ಬಾರತದ ಪಡುವಣ ಬಂಗಾಳಕ್ಕೆ ಹತ್ತಿರವಿದ್ದ ಮೂಡಣ ಪಾಕಿಸ್ತಾನದಲ್ಲಿ, ಹೆಚ್ಚಿನ ಎಣಿಕೆಯಲ್ಲಿದ್ದ ಬಂಗಾಳಿ ನುಡಿಯಾಡುವವರಿಗೆ ಒಪ್ಪಿಗೆಯಾಗಲಿಲ್ಲ. ಆ ನಿಲುವಿಗೆ ಮೊದಲಿಂದಲೇ ಬಂಗಾಳಿ ನುಡಿಯಾಡುವವರ ವಿರೋದವಿದ್ದ ಕಾರಣ, ಆ ವಿರೋದವನ್ನು ಹತ್ತಿಕ್ಕುವ ಬರದಲ್ಲಿ ಕೆಲ ಬಂಗಾಳಿ ವಿದ್ಯಾರ್‍ತಿಗಳನ್ನು ಪಾಕಿಸ್ತಾನದ ಪೊಲೀಸರು ಸಾಯಿಸಿದರು. ಉರ್‍ದು ಹೇರಿಕೆಯಿಂದ ಇಶ್ಟೆಲ್ಲಾ ಅನಾಹುತವಾಗಿ, ಮುಂದೆ ಅದು ಬೆಂಗಾಲಿ ನುಡಿ ಚಳುವಳಿಯಾಗಿ ಬದಲಾಗಿ ಮೂಡಣ ಪಾಕಿಸ್ತಾನ, ಬಾಂಗ್ಲಾದೇಶವಾಗಿ ಬೇರೆ ನಾಡಾಯಿತು ಎಂದು ಹಿನ್ನಡುವಳಿಯನ್ನ ಸರಿಯಾಗಿ ಬಲ್ಲ ಪಾಕಿಸ್ತಾನೀಯರೇ ಹೇಳುವರು. ಒಂದು ನಾಡಿಗೆ ಒಂದೇ ನುಡಿಯಿರಬೇಕು ಎಂಬುದು ಸರಿಯಲ್ಲ ಎಂಬುದನ್ನು, ಅವರು ಬಾಂಗ್ಲಾದೇಶ ಬೇರೆ ನಾಡಾದ ಎತ್ತುಗೆ ಕೊಟ್ಟು ಹೇಳುವರು. ಚಿಕ್ಕ ನಾಡಾಗಿರುವ ಸ್ವಿಜರ್‍ಲ್ಯಾಂಡ್ , ನಾಲ್ಕು ರಾಶ್ಟ್ರೀಯ ನುಡಿಗಳನ್ನು ಹೊಂದಿರಬೇಕಾದರೆ, ಪಾಕಿಸ್ತಾನದಲ್ಲಿ ಯಾಕಾಗಬಾರದು ಎಂದೂ ತಮ್ಮ ಸರಕಾರದ ನಿಲುವನ್ನು ಪ್ರಶ್ನಿಸುತ್ತಾರೆ.

ನುಡಿಯ ವಿಚಾರದಲ್ಲಿ ಬಾರತ ಮತ್ತು ಪಾಕಿಸ್ತಾನವನ್ನು ನೋಡಿದಾಗ ಕೆಲವು ಗಮನಸೆಳೆವ ಹೋಲಿಕೆಗಳು ಕಾಣುವವು. ಬಾರತ ಸರಕಾರ ಹಿಂದಿ ಮತ್ತು ಇಂಗ್ಲೀಶನ್ನು ಮಾತ್ರ ಕೇಂದ್ರ ಸರಕಾರದ ಕೆಲಸಗಳಿಗೆ ಅದಿಕ್ರುತ ನುಡಿ ಮಾಡಿರುವ ಹಾಗೆ, ಪಾಕಿಸ್ತಾನವೂ ಕೂಡ ಉರ್‍ದು ಮತ್ತು ಇಂಗ್ಲೀಶ್ ನುಡಿಗಳಿಗೆ ಮಾತ್ರ “ಅದಿಕ್ರುತ ನುಡಿ” ಪಟ್ಟ ನೀಡಿದೆ. ಪಾಕಿಸ್ತಾನ ಉರ್‍ದುವೊಂದನ್ನೇ ರಾಶ್ಟ್ರೀಯ ನುಡಿಯಾಗಿ ಮಾಡಿದ್ದರೆ, ಬಾರತವು ಹಿಂದಿಗೆ ಅದಿಕ್ರುತವಾಗಿ “ರಾಶ್ಟ್ರೀಯ ನುಡಿ” ಪಟ್ಟ ನೀಡದೆ ಹಿಂದಿಗೆ ಮಾತ್ರ ಹೆಚ್ಚು ಒತ್ತು ನೀಡುತ್ತಿದೆ. ಬಾರತವು ಹಿಂದಿಯೇತರರನ್ನು ತನ್ನ ನಾಡಲ್ಲಿ ಎರಡನೇ ದರ್‍ಜೆ ನಾಗರೀಕರನ್ನಾಗಿ ಮಾಡಿದರೆ, ಪಾಕಿಸ್ತಾನವು ಅಲ್ಲಿ ಉರ್‍ದುವೇತರರನ್ನು ಎರಡನೇ ದರ್‍ಜೆ ನಾಗರೀಕರನ್ನಾಗಿ ಮಾಡಿದೆ.ಒಂದು ನಾಡಿಗೆ ಒಂದೇ ನುಡಿ ಇರಬೇಕು ಎನ್ನುವ ಸಿದ್ದಾಂತವನ್ನು ಪಾಕಿಸ್ತಾನವು ನೇರವಾಗಿ ಪಾಲಿಸುತ್ತಿದ್ದರೆ, ಬಾರತವು ಹಿಂದಿಗೆ ಮಾತ್ರ ಬೆಂಬಲ ಸೂಚಿಸುತ್ತಾ ಮೆಲ್ಲನೇ ಅತ್ತ ದಾಪುಗಾಲಿಡುತ್ತಿದೆ. ಬಿಡುಗಡೆ ಹೊಂದುವ ಮುನ್ನ ಬ್ರಿಟೀಶರ ಆಳ್ವಿಕೆಗೆ ಒಳಪಟ್ಟಿದ್ದ ಬಾರತ-ಪಾಕಿಸ್ತಾನಗಳು ಇಂದು ಬೇರೆ ಬೇರೆ ನಾಡಾಗಿದ್ದರೂ, ನುಡಿಯ ವಿಚಾರದಲ್ಲಿ ಒಂದೇ ನಿಲುವು ತಾಳಿರುವುದು ಸೋಜಿಗವಲ್ಲವೇ?

“ಎಲ್ಲಾ ನುಡಿಯನ್ನು ಮತ್ತು ನುಡಿಯಾಡುವವರನ್ನು ಒಂದೇ ರೀತಿಯಲ್ಲಿ ನೋಡುವುದು ಆ ನಾಡಿನಲ್ಲಿ ಏಕತೆಯನ್ನು ಮೂಡಿಸುವುದಲ್ಲದೇ, ಒಗ್ಗಟ್ಟನ್ನು ಹೆಚ್ಚಿಸುತ್ತದೆ. ಯಾವ ನಾಡು ತನ್ನ ನೆಲದಲ್ಲಾಡುವ ನುಡಿಗಳಿಗೆ ಮನ್ನಣೆ ನೀಡುವುದಿಲ್ಲವೋ, ಆ ನಾಡು ತನ್ನ ರಾಶ್ಟ್ರೀಯತೆಯಿಂದ ಆ ಮಂದಿಯನ್ನು ಹೊರಗಿಟ್ಟಂತೆ” ಎನ್ನುವುದು, ಪಾಕಿಸ್ತಾನದಲ್ಲಿ ಬೇರೆ ಬೇರೆ ನುಡಿಗಳೂ ರಾಶ್ಟ್ರೀಯ ನುಡಿಗಳಾಗುವುದರ ಪರ ಇರುವವರ ಮಾತು. ಅದು ಪಾಕಿಸ್ತಾನ, ಬಾರತ ಮಾತ್ರವಲ್ಲದೇ ಎಲ್ಲಾ ನಾಡುಗಳಿಗೂ ಹೊಂದುತ್ತದೆ ಎನ್ನುವುದು ಯಾರೂ ಒಪ್ಪದಿರಲಾರರು.

( ಮಾಹಿತಿ ಸೆಲೆ : thebalochistanpoint.comtns.the.news.comwiki-urdu, wiki-pakistanlanguages )

( ಚಿತ್ರ ಸೆಲೆ : discofighter5000.files.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Forest Breez says:

    Good joke.. pakistan yavaga nettage ide anta heli aga naanu oppi koltini idu first time edavirodu anta
    adu yavattu nettake illa
    dushman kidat hai andre bagahal me hai anno tara
    they wont keep up their pakistan… its genetic disorder in them…

ಅನಿಸಿಕೆ ಬರೆಯಿರಿ: