ಕೊಳಲ ಹಾಡು
ಒಂದೊಮ್ಮೆ ಕಾಡಲ್ಲಿ
ಮೈಯೆಲ್ಲಾ ಹಸಿರಿನಿಂದ ಸಿಂಗರಿಸಿಕೊಂಡು
ಜೀವನ ಸಂಬ್ರಮಿಸಿದ್ದ ಮರ
ನಗರದ ಜನರ ನಡುವೆ
ಮೆರೆವ ಕನಸ ಕಂಡಿತ್ತು
ತನ್ನನೇ ಕಡಿದುಕೊಂಡು
ಕೊಳಲಾಗಿತ್ತು
ನಗರ ಸೇರಿತ್ತು
ಇಂಪಾದ ದ್ವನಿ ಹೊತ್ತು
ತುಂಬಿದ ಸಬೆ
ತಾದ್ಯಾತ್ಮ ಸಬಿಕರು
ವೇದನೆಯ ಹಾಡು
ಕೊಳಲ ಕೊರಳಿಂದ
ಸಬಿಕರಿಗೆ ಅದು ಯಾತನೆಯ ದ್ವನಿ
ಗಾಯಕನ ಉಸಿರಿಂದ
ಅವ ಬಾರಿಸಿದ
ಜನ ಅನುಬವಿಸಿದರು
ಸಬೆ ಮುಗಿಸಿ
ಕೊಳಲು ಬದಿಗಿರಿಸಿದಾಗ
ಸಬಿಕರಿಂದ ಕರತಾಡನದ ಚಪ್ಪಾಳೆ
ಸಬಿಕರನು ರಂಜಿಸಿದ ದನ್ಯತೆ
ಸಂಗೀತಗಾರನಿಗೆ
ಸಾದನೆಯ ಗುಂಗಿನಲ್ಲಿರುವ
ಬಾರಿಸುವವ
ಅನುಬವಿಸಿ ಮತ್ತಿನಲ್ಲಿರುವ
ಕೇಳುಗರು
ಅಬಿನಂದನೆಗಾಗಿ ಕಾಯುತಿರುವ
ಕೊಳಲ ಕಡೆ ನೋಡಲೇ ಇಲ್ಲ
ಅದರ ಮೌನ ವೇದನೆ
ಅವರನು ತಟ್ಟಲೇ ಇಲ್ಲ
ಕೊಳಲು
ಮುಗಿದ ಸಂಗೀತ ಸಬೆಯಲ್ಲೀಗ
ಬರಿ ಕೊರಡು
( ಚಿತ್ರ ಸೆಲೆ: instructables.com )
ಇತ್ತೀಚಿನ ಅನಿಸಿಕೆಗಳು