ಹಬ್ಬದ ವಿಶೇಶ ಕಾಯಿ ಒಬ್ಬಟ್ಟು
– ಕಲ್ಪನಾ ಹೆಗಡೆ.
ಬೇಕಾಗುವ ಸಾಮಗ್ರಿಗಳು:
1. 1 ಕಾಯಿ
2. 2 ಉಂಡೆ ಬೆಲ್ಲ.
3. 1/2 ಕೆ.ಜಿ. ಚಿರೋಟಿ ರವೆ.
4. 1/4 ಕೆ.ಜಿ. ಮೈದಾ ಹಿಟ್ಟು
5. ಉಪ್ಪು
6. ಎಣ್ಣೆ
ಮಾಡುವ ಬಗೆ:
ಮೊದಲು ಕಾಯಿ ಹೂರಣವನ್ನು ತಯಾರಿಸಿಕೊಳ್ಳಿ.
ಕಾಯಿಯನ್ನು ತುರಿದುಕೊಂಡು ಅದಕ್ಕೆ ಬೆಲ್ಲವನ್ನು ತುರಿದು ಬಾಣಲೆಗೆ ಹಾಕಿ ಸವಟಿನಿಂದ ಕಲಸಿ. ಸ್ವಲ್ಪ ಪಾಕ ಬಂದ ನಂತರ ಇಳಿಸಿ, ಆರಿದ ನಂತರ ಉಂಡೆಗಳನ್ನಾಗಿ ಮಾಡಿಕೊಳ್ಳಿ.
ಹಿಟ್ಟನ್ನು ತಯಾರಿಸಿಕೊಂಡು ಒಬ್ಬಟ್ಟನ್ನು ಮಾಡುವ ವಿದಾನ:
ಚಿರೋಟಿ ರವೆಗೆ ನೀರು ಹಾಕಿ 5 ನಿಮಿಶಗಳ ಕಾಲ ನೆನಸಿಡಿ. ಆನಂತರ ಅದಕ್ಕೆ ಮೈದಾಹಿಟ್ಟು ಹಾಗೂ ರುಚಿಗೆ ತಕ್ಕಶ್ಟು ಉಪ್ಪು, 1 ಚಮಚ ಹಳದಿಪುಡಿ, ಕಲಸಲಿಕ್ಕೆ ಬೇಕಾಗುವಶ್ಟು ನೀರು ಹಾಕಿ ಕಲಸಿಕೊಳ್ಳಿ. ಆಮೇಲೆ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಹಿಚುಕಿ ಕಲಸಿಕೊಂಡು 1/2 ಗಂಟೆ ಬಿಟ್ಟು ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು, ಅದರಲ್ಲಿ ಮೊದಲು ಕಟ್ಟಿಕೊಂಡ ಕಾಯಿ ಹೂರಣದ ಉಂಡೆಯನ್ನು ತುಂಬಿ, ಬಾಳೆ ಎಲೆ ಅತವಾ ಒಬ್ಬಟ್ಟು ಮಾಡುವ ಹಾಳೆ ಮೇಲೆ ಇಟ್ಟು, ಎಣ್ಣೆ ಸವರಿ ಲಟ್ಟಣಗೆಯಿಂದ ತೆಳ್ಳಗೆ ಲಟ್ಟಿಸಿ. ಕಾವಲಿ ಕಾದ ನಂತರ ಸ್ವಲ್ಪ ಎಣ್ಣೆ ಸವರಿ ನಿದಾನವಾಗಿ ಹಾಕಿ ಎರಡು ಕಡೆ ಬೇಯಿಸಿಕೊಳ್ಳಿ. ತಯಾರಿಸಿದ ಒಬ್ಬಟ್ಟಿಗೆ ಸ್ವಲ್ಪ ತುಪ್ಪ ಹಾಕಿ ತಿನ್ನಲು ನೀಡಿ.
ಇತ್ತೀಚಿನ ಅನಿಸಿಕೆಗಳು