’ಅರಿಮೆ’ ಬರಹಗಳಿಗೆ ಹೊಸದೊಂದು ತಾಣ

ಪ್ರಶಾಂತ ಸೊರಟೂರ.
arime_logo

ಜಗತ್ತಿನ ಮುಂಚೂಣಿ ನಾಡುಗಳು ತಮ್ಮ ನುಡಿಯ ಮೂಲಕವೇ ಏಳಿಗೆ ಹೊಂದಿರುವುದು, ಹೊಂದುತ್ತಿರುವುದು ನಮ್ಮೆದುರಿಗೇ ಇದ್ದಾಗಲೂ ಒಂದು ನುಡಿ ಸಮುದಾಯವಾಗಿ ನಮ್ಮ ನುಡಿ ಕನ್ನಡವನ್ನು ಎಲ್ಲದಕ್ಕೂ ಸಜ್ಜುಗೊಳಿಸುವ ಕೆಲಸದಲ್ಲಿ ನಾವಿನ್ನೂ ತುಂಬಾ ಎಳೆವೆಯಲ್ಲಿಯೇ ಇದ್ದೇವೆ, ಕೆಲವೆಡೆಯಂತೂ ನಮ್ಮಿಂದ ಇದಾಗದು ಅಂತಾ ಕೈಚೆಲ್ಲಿಯೇ ಕೂತಿದ್ದೇವೆ. ನಮ್ಮ ಸುತ್ತಣದಲ್ಲಿ ನಡೆಯುವ ಆಗುಹೋಗಗಳನ್ನು ಒರೆಗೆಹಚ್ಚುತ್ತಾ, ತಿಳುವಳಿಕೆಯನ್ನು ಹಿಗ್ಗಿಸುತ್ತಾ, ಈಗಿರುವ ಬದುಕಿನ ಮಟ್ಟವನ್ನು ಹೆಚ್ಚಿಸುವತ್ತಾ ಸಾಗುವಲ್ಲಿ ನೆರವಾಗುವ ಸಾಯನ್ಸ್ ಮತ್ತು ಟೆಕ್ನಾಲಜಿಯ ಅರಿವನ್ನು ನಮ್ಮ ನುಡಿಯಲ್ಲಿ ಕಟ್ಟಿಕೊಳ್ಳದೇ, ಕನ್ನಡಿಗರನ್ನು ಮುಂದಿನ ನಾಳೆಗೆ ಅಣಿಗೊಳಿಸುವಲ್ಲಿ ನಾವು ಹಿಂದಿನಿಂದಲೂ ಹಿಂದೇಟು ಹಾಕುತ್ತಲೇ ಬಂದಿದ್ದೇವೆ.

ಕನ್ನಡವನ್ನು ಹೆಚ್ಚಾಗಿ ಸಾಹಿತ್ಯಕ್ಕೆ ಮೀಸಲಿಟ್ಟು, ನಮ್ಮ ಅಬಿಮಾನವನ್ನು ಇದಕ್ಕೆ ಸೀಮೀತಗೊಳಿಸಿದ್ದೇವೆ. ಆದರೆ ಇದೇ ನಡೆಯನ್ನು ನಾವು ಇನ್ನೂ ಮುಂದುವರೆಸಿದರೆ ನಮ್ಮ ನುಡಿ ಸಮುದಾಯಕ್ಕೆ ಉಳಿಗಾಲವಿಲ್ಲ ಅನ್ನುವುದನ್ನು ನಾವು ಮನಗಾಣಬೇಕಿದೆ. ಕಾಲಕ್ಕೆ ತಕ್ಕಂತೆ ಕನ್ನಡದಲ್ಲಿ ಹೊಸ ಪದಗಳ ಕಟ್ಟಣೆ, ಹೊಸ ಅರಿವಿನ ಬರಹಗಳು, ವಿಡಿಯೋಗಳು, ಚರ್ಚೆಗಳು ಇಂದು ಎಡೆಬಿಡದೇ ಆಗಬೇಕಿವೆ. ಕನ್ನಡದಲ್ಲಿ ಎಲ್ಲವನ್ನೂ ಅಣಿಗೊಳಿಸಲು ಸಾದ್ಯವಾದರಶ್ಟೇ ನಾವು ನಮ್ಮ ನುಡಿ ಸಮುದಾಯದ ಎಲ್ಲರನ್ನೂ ಏಳಿಗೆಯತ್ತ ಕೊಂಡೊಯ್ಯಬಹುದು.

ಹೊನಲು ಮಿಂಬಾಗಿಲು ತಿಳಿಗನ್ನಡದಲ್ಲಿ ಸಾಯನ್ಸ್ ಮತ್ತು ಟೆಕ್ನಾಲಜಿ ಬರಹಗಳನ್ನು ತರುವುದರತ್ತ ಸುಮಾರು ಮೂರು ವರುಶಗಳ ಹಿಂದೆ ಹೆಜ್ಜೆಯಿಟ್ಟಿತ್ತು. ಇಲ್ಲಿಯವರೆಗೆ ಸಾಯನ್ಸ್ ಮತ್ತು ಟೆಕ್ನಾಲಜಿಯ ಸುಮಾರು 500 ಬರಹಗಳು ಹೊನಲಿನಲ್ಲಿ ಮೂಡಿಬಂದಿರುವುದು, ಹಲವಾರು ಬರಹಗಳನ್ನು ಓದುಗರು ಮೆಚ್ಚಿ ಬೆನ್ನುತಟ್ಟಿರುವುದು ತುಂಬಾ ನಲಿವಿನ ವಿಶಯ. ವಿಗ್ನಾನದ ಬರಹಗಳಲ್ಲಿ ಕನ್ನಡದ ಸೊಗಡನ್ನೇ ಬಳಸಿಕೊಂಡು ಪದಕಟ್ಟಣೆಯ ಮೂಲಕ ಹುಲುಸಾದ ಬೆಳೆಯನ್ನು ಬೆಳೆಯಬಹುದು ಅಂತಾ ಹೊನಲಿನ ಹಲವಾರು ಬರಹಗಳು ತೋರಿಸಿವೆ ಅಂದರೆ ತಪ್ಪಾಗಲಾರದು. ತಿಳಿಗನ್ನಡದಲ್ಲಿ ಸಾಯನ್ಸ್ ಮತ್ತು ಟೆಕ್ನಾಲಜಿ ಬರಹಗಳನ್ನು ಬರೆಯುವ ಈ ನಡೆಯನ್ನು ಮುಂದಿನ ಹಂತಕ್ಕೆ ಒಯ್ಯಲು ಈಗ ಇನ್ನೊಂದು ತಾಣವನ್ನು ಶುರು ಮಾಡಲಾಗಿದೆ. ಆ ತಾಣದ ಹೆಸರು ಅರಿಮೆ (http://arime.org)

ಹೊಸದಾಗಿ ಶುರುವಾಗಿರುವ ’ಅರಿಮೆ’ ತಾಣ ಸಾಯನ್ಸ್ ಮತ್ತು ಟೆಕ್ನಾಲಜಿ ಬರಹಗಳಿಗಾಗಿಯೇ ಮೀಸಲಾಗಿದ್ದು, ಇದರಲ್ಲಿ ಇತ್ತೀಚಿನ ಟೆಕ್ನಾಲಜಿ ಬರಹಗಳ ಜತೆ-ಜತೆಗೆ ಅಡಿಪಾಯದ ಅರಿಮೆಯ (basic science) ಬರಹಗಳು ಹೆಚ್ಚಾಗಿ ಮೂಡಿಬರುತ್ತವೆ. ಈ ಮೂಲಕ ಶಾಲೆಯ ಪಟ್ಯಪುಸ್ತಕಗಳಾಚೆ ಕನ್ನಡದಲ್ಲಿ ವಿಗ್ನಾನದ ವಿಶಯಗಳನ್ನು ಓದಿ ತಿಳಿದುಕೊಳ್ಳಲು ಮಿಂದಾಣವೊಂದನ್ನು ತೆರೆದಂತಾಗಿದೆ. ಅರಿಮೆಗೆ ಸಂಬಂದಿಸಿದ ಪದಗಳು (Science & Technology Glossary) ಒಂದೆಡೆ ಸಿಗುವಂತೆ ಮಾಡುವುದು ಈ ಹೊಸ ತಾಣದ ಗುರಿಗಳಲ್ಲೊಂದು. ಅದರಂತೆ ಹೊತ್ತೊತ್ತಿಗೆ ಅರಿಮೆಯ ಪದಗಳ ಪದಪಟ್ಟಿಯನ್ನು ತಯಾರು ಮಾಡಿ ಈ ತಾಣದಲ್ಲಿ ಹೊರತರಲಾಗುತ್ತದೆ. ಮುಂದುವರೆದ ನಾಡುಗಳಲ್ಲಿ ಸಾಯನ್ಸ್ ಮತ್ತು ಟೆಕ್ನಾಲಜಿಯ ಕಲಿಸುವಿಕೆ, ಪದ ಬಳಕೆ ಮುಂತಾದುವುಗಳ ಕುರಿತ ಅರಕೆಯ ಬರಹಗಳನ್ನು ಈ ತಾಣದಲ್ಲಿ ಮೂಡಿಸಲಾಗುತ್ತದೆ. ಬರಹಗಳಲ್ಲದೇ ವಿಡಿಯೋಗಳು, ಅನಿಮೇಶನ್ ಗಳಂತಹ ಇತರೆ ಚಳಕಗಳನ್ನು ಬಳಸಿಕೊಂಡು ಅರಿವು ಹಂಚುವ ಪ್ರಯತ್ನವನ್ನೂ ಈ ಮಿಂದಾಣ ಮಾಡಲಿದೆ.

ಹೊನಲಿನಂತೆ ಹೊಸದಾಗಿ ಶುರುವಾದ ’ಅರಿಮೆ’ ತಾಣವೂ ಆಸಕ್ತಿಯಿಂದ ತೊಡಗಿಕೊಳ್ಳುವ ಎಲ್ಲರಿಗೂ ತೆರೆದುಕೊಂಡಿದೆ. ಈ ಮೂಲಕ ಒಂದು ನುಡಿ ಸಮುದಾಯವಾಗಿ ನಮ್ಮ ನುಡಿಯಲ್ಲಿ ಅರಿವನ್ನು ಕಟ್ಟಿಕೊಳ್ಳಲು ಇದೊಂದು ವೇದಿಕೆಯಾಗಲಿದೆ. ಬನ್ನಿ, ನೀವೂ ಕೈಜೋಡಿಸಿ…

ಮಾಹಿತಿಗೆ: ಇದೇ ಬರುವ ಬಾನುವಾರ, 10.01.2016 ರಂದು ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ ನಡೆಯುವ ’ತಿಂಗಳ ಅಂಗಳ’ ಕಾರ್ಯಕ್ರಮದಲ್ಲಿ ಹೊಸದಾಗಿ ಶುರುವಾಗಿರುವ ’ಅರಿಮೆ’ ತಾಣದ ಇನ್ನಶ್ಟು ಹಿನ್ನೆಲೆಗಳು ಮತ್ತು ಮುಂದಿನ ಹಾದಿಗಳ ಬಗ್ಗೆ ಮಾಹಿತಿಗಳನ್ನು ನಾನು ಹಂಚಿಕೊಳ್ಳಲಿರುವೆ. ಬನ್ನಿ, ಬೇಟಿಯಾಗಿ ಮಾತಾಡೋಣ. (ಹೊತ್ತು: ಬೆಳಿಗ್ಗೆ 11 ರಿಂದ 12)Categories: ಅರಿಮೆ

ಟ್ಯಾಗ್ ಗಳು:, , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s