ಹಣತೆ ಹಚ್ಚಲಾಗಿದೆ…

ಅಂಕುಶ್ ಬಿ.

hanate

ದೀಪವಿರದ ದಾರಿಯಲ್ಲಿ
ಮಿಂಚುಹುಳುವಿಗುಡುಕಾಟವು
ಕಗ್ಗತ್ತಲ ರಾತ್ರಿಯಲ್ಲಿ
ಬೆಳದಿಂಗಳಿಗಾಗಿ ಅಲೆದಾಟವು

ಕಾಣದ ತೀರವ
ಸೇರುವ ತವಕವೊ
ಕಾಡುವ ಬ್ರಮೆಗಳ
ಹತ್ತಿಕ್ಕಲು ಪುಳಕವೊ

ಯಾನ ಮುಗಿಯುತಿಲ್ಲವೊ
ಎಶ್ಟೇ ನೆಡೆದರೂ
ಮಾತೇ ಮುಗಿಯುತಿಲ್ಲವೊ
ನೀ ಮೌನವಾದರೂ

ಜೀವ ಬೆಳಕ ಬಯಸಿದೆ
ಗುರಿಯಿರದ ಬದುಕಲಿ
ಹೊಸ ಬೆಳಕು ಮೂಡಿದೆ
ಕಂದೀಲು ಹಿಡಿದ ಮನದಲಿ

ಹಣತೆ ಹಚ್ಚಲಾಗಿದೆ
ಕಗ್ಗತ್ತಲ ಮನೆಯಲಿ
ಹೊಸ ಕಾಂತಿ ಮೂಡಿದೆ
ಎದೆಯ ಗುಡಿಯಲಿ

( ಚಿತ್ರಸೆಲೆ: kanasu-kanasu.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: