ಚಾಕೋಲೇಟ್ ಪಡ್ಡಿಂಗ್ – ಕಾಪಿ ಮತ್ತು ಚಾಕೋಲೇಟಿನ ಸಿಹಿತಿಂಡಿ

– ನಮ್ರತ ಗೌಡ.

ಬೇಕಾಗುವ ವಸ್ತುಗಳು:

ಮಾರಿ ಬಿಸ್ಕತ್ತು – 20
ಕಾಪಿ ಪುಡಿ – ಸ್ವಲ್ಪ
ಕೋಕೋ ಪುಡಿ – 2 ಚಮಚ
ಗೋಡಂಬಿ – 50 ಗ್ರಾಂ
ಕಡಲೆ ಬೀಜ – 50 ಗ್ರಾಂ
ಚಾಕೋಚಿಪ್ಸ್ – ಸ್ವಲ್ಪ
ಬಾದಾಮಿ – 50ಗ್ರಾಂ
ಕಸ್ಟರ‍್ಡ್ – 2 ಚಮಚ
ಹಾಲು – 300 ಮಿ. ಲೀ
ಸಕ್ಕರೆ – 6 ಚಮಚ

ಮಾಡುವ ಬಗೆ:

ಮೊದಲಿಗೆ ಕಾಪಿಯ ಡಿಕಾಕ್ಶನ್ ಮಾಡಿಟ್ಟುಕೊಳ್ಳಿ. ಕಡಲೆ ಬೀಜ, ಬಾದಾಮಿ ಮತ್ತು ಗೋಡಂಬಿಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿರಿ. ಕೋಕೋ ಪುಡಿ ಮತ್ತು ಕಸ್ಟರ‍್ಡ್ ಪುಡಿಯನ್ನು ಗಂಟು ಕಟ್ಟಿಕೊಳ್ಳದಂತೆ ಸ್ವಲ್ಪ ಬಾಗ ಹಾಲಿನಲ್ಲಿ(ತಣ್ಣನೆಯ) ಕಲಸಿಕೊಳ್ಳಿ, ಉಳಿದ ಬಾಗ ಹಾಲನ್ನು ಕುದಿಯಲು ಇಟ್ಟು ಅದಕ್ಕೆ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಕರಗಿದ ಮೇಲೆ ಮೊದಲೇ ಕಲಸಿಟ್ಟುಕೊಂಡಿರುವ ಹಾಲನ್ನು ಬೆರೆಸಿ. ಸೌಟಿನಿಂದ ತಿರುಗಿಸುತ್ತಾ ದೋಸೆಯ ಹಿಟ್ಟಿನ ಹದಕ್ಕೆ ಕುದಿಸಿ, ಬಳಿಕ ಇಳಿಸಿಡಿ.

image1 (2)

ಒಂದು ತಟ್ಟೆಯನ್ನು ತೆಗೆದುಕೊಂಡು ಒಂದು ಪದರ ಕುದಿಸಿದ ಮಿಶ್ರಣವನ್ನು ಹಾಕಿ, ಅದರ ಮೇಲೆ ಬಿಸ್ಕತ್ತನ್ನು ಒಂದೊಂದಾಗಿ ಕಾಪಿಯ ಡಿಕಾಕ್ಶಿನಲ್ಲಿ ಅದ್ದಿ ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಇಡುತ್ತಾ ಬನ್ನಿ, ಇದರ ಮೇಲೆ ಮತ್ತೊಂದು ಪದರ ಮಿಶ್ರಣವನ್ನು ಹಾಕಿ ಮತ್ತೆ ಅದರ ಮೇಲೆ ಬಿಸ್ಕತ್ತನ್ನು ಜೋಡಿಸಿರಿ. ಹೀಗೆಯೇ ಹಲವು ಪದರಗಳು ಬರುವಂತೆ ಎಲ್ಲಾ ಬಿಸ್ಕತ್ತುಗಳನ್ನು ಜೋಡಿಸಿರಿ. ಇದರ ಮೇಲೆ ಹುರಿದಿಟ್ಟುಕೊಂಡ ಕಡಲೆ ಬೀಜ, ಬಾದಾಮಿ, ಗೋಡಂಬಿ ಮತ್ತು ಚಾಕೋಚಿಪ್ಸನ್ನು ತುಂಡು ತುಂಡಾಗಿಸಿ ಉದುರಿಸಿ. ಆರಿದ ನಂತರ ಕತ್ತರಿಸಿ ಐಸ್ ಕ್ರೀಂನೊಂದಿಗೆ ಸವಿಯಲು ಕೊಡಿ.

image22

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: