ನಿನ್ನ ನೆನಪು….

– ನಾಗರಾಜ್ ಬದ್ರಾ.

waiting

ನಗಿಸುವುದು ನಿನ್ನ ನೆನಪು
ಅಳಿಸುವುದು ನಿನ್ನ ನೆನಪು
ಕಾಡುವುದು ನಿನ್ನ ನೆನಪು
ನನ್ನಯ ಬಾಳಿನಲ್ಲಿ ಬೆರೆತಿರುವುದು ನಿನ್ನ ನೆನಪು

ದಶಕಗಳೇ ಕಳೆದರೂ ನಶಿಸದ
ಆಲದ ಮರದಂತೆ ಬೆಳೆದಿರುವ ನಿನ್ನ ನೆನಪು
ಎದೆಯ ಬಯಲಿನಲ್ಲಿ ಅಳಿಸಲಾಗದ
ಹೆಜ್ಜೆ ಗುರುತು ಮೂಡಿಸಿದೆ ನಿನ್ನ ನೆನಪು

ಕಹಿಯಾದ ಮನದಲ್ಲಿ ಸಿಹಿಯಾದ ಮಕರಂದ
ಬೀರುವ ಚಿಟ್ಟೆಯಂತೆ ನಿನ್ನ ನೆನೆಪು
ಮೌನಕ್ಕೆ ಸ್ವಾಗತ ಹೇಳಿದ ತುಟಿಗಳಲ್ಲಿ
ಪ್ರೀತಿಯ ಹಾಡು ಹೇಳಿಸುವ ನಿನ್ನ ನೆನಪು

ನಿದ್ದೆಯಲ್ಲಿಯು ಕೇಳಿಸುವುದು
ನಿನ್ನ ನೆನಪಿನ ಕಾಲ್ಗೆಜ್ಜೆಯ ಸದ್ದು
ಇರುಳಲ್ಲಿ ಬೆಳಗುವುದು
ನಿನ್ನ ನೆನಪಿನ ದೀಪವು ಹೊಸ ಬೆಳಕನ್ನು

ನಿನ್ನ ನೆನಪಿನ ಸೋನೆ ಮಳೆಯು
ನಿನ್ನ ಮದುರ ಬಾವಗಳನ್ನು ಮತ್ತೆ ಹಸಿಯಾಗಿಸಿದೆ
ಹ್ರುದಯದ ಪರದೆ ಹಿಂದೆ ಅಡಗಿರುವ
ನಿನ್ನ ನೆನಪು ಕೂಗದೆ ಬರುತಲಿದೆ

ನೆನಪಿನ ಬೂಮಿಯ ಮೇಲೆ
ಕನಸಿನ ಆಗಸವ ಕಾಣುತ್ತಲೇ
ಇಂದಿನ ಜೀವನದ ಪಯಣ ಸಾಗಲಿ
ಶಿವನ ಕರೆಯು ಬರುವತನಕ

(ಚಿತ್ರ ಸೆಲೆ: memes.asia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: