ಮೊದಲ ಮಳೆ…

ಪ್ರಶಾಂತ ಎಲೆಮನೆ.

rain1

ಮೊದಲ ಮಳೆಗೆ ಮುಕವೊಡ್ಡಿ
ಹಗುರಾಯ್ತು ಮನಸು ಮಗುವಾಗಿ
ತಿರುತಿರುಗಿ ರುತುಚಕ್ರದ ಗಾಲಿ
ತಂತು ನವೋಲ್ಲಾಸವ ತೇಲಿ

ಗಿಜಿಗುಡುವ ಮಳೆಯಲ್ಲೂ ಏನಿಂತ ಮಾಯೆ
ತೊಟ್ಟಿಕ್ಕೊ ಸೂರಿಂದ ಸಂಗೀತ ಶಾಲೆ
ಗುಡುಗುಡುಸೋ ಬಾನಿಂದ ಪರಶಿವನ ಲೀಲೆ
ಮುತ್ತು ಹನಿ ಪೋಣಿಸಿದೆ ಒಲವಿನಾ ಓಲೆ

ಹೊಸ ಬಾನು,ಹೊಸ ಬೂಮಿ, ಹೊಸ ಮೋಡ,ಮಿಂಚು
ಬತ್ತಿದೆದೆಯಲ್ಲೂ ಹೊಸ ಹಸಿರ ತಂತು
ಮಂದ ಬೆಳಕಲ್ಲಿ ಮಂಜಂತೆ ತಬ್ಬು
ಜಗದೊಡೆಯ, ಎಲ್ಲೆಲ್ಲೂ ಈ ಬಾವ ಹಬ್ಬು

(ಚಿತ್ರ ಸೆಲೆ: weatherwizkids.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: