ಅಪ್ಪ

– ಸಿಂದು ಬಾರ‍್ಗವ್.

ಅಪ್ಪನ ಅಡುಗೆ ರುಚಿ
ತಿನ್ನಲು ಪುಣ್ಯಬೇಕು,
ಅವರ ಸವೆದ ಚಪ್ಪಲಿ ಹಾಕಿ
ನಾಲ್ಕ್ ಹೆಜ್ಜೆ ನಡೆಯಬೇಕು…

ಅಮ್ಮನೋ ನೋವು, ಅಳುವನು
ಒಂದೇ ತಕ್ಕಡಿಯಲಿ ತೂಗುವಳು,
ಅದಕ್ಕೆಂದೇ ಸೆರಗನು
ಕೈಯಲ್ಲೇ ಹಿಡಿದಿಹಳು…

ಅಪ್ಪನ ಮನದ ನೋವ
ನೋಡಿದಿರಾ ನೀವು..?!
ದುಕ್ಕ ಉಮ್ಮಳಿಸಿ ಬಂದರೂ
ಕಣ್ಣಂಚಿನಲೇ ತುಂಬಿಕೊಂಡಿರುವರು…

ಚಳಿಗೆ ನಡುಗುವಾಗ ಬಂದು
ಹೊದಿಕೆ ಹೊದಿಸುವರು,
ಸುಕನಿದಿರೆ ಮಾಡೆಂದು
ತಲೆ ಸವರಿ ಹೋಗುವರು…

ಪರೀಕ್ಶೆಯಲಿ ಪೇಲಾದರೆ
ಹುಸಿಕೋಪಗೊಳ್ಳುವರು,
ಅಳಬೇಡ ಇನ್ನೊಮ್ಮೆ
ನೋಡು ಎನ್ನುವರು…

ಬುಜದ ಮೇಲೆ ಹೊತ್ತು
ಜಾತ್ರೆ ತೋರಿಸುವರು,
ಬೇಕು-ಬೇಡಗಳ ಪೂರೈಸುತಲೇ
ಹೀರೋ ಆಗುವರು…

ಅಮ್ಮನ ಹೊಗಳುವವರೇ ಎಲ್ಲಾ..
ಅಪ್ಪನ ಸವೆತ ಸೂಕ್ಶ್ಮವಾಗಿ ಗಮನಿಸಿದವರಿಲ್ಲ..
ಅಪ್ಪನ ಮಗುಮನಸ್ಸ ಅರಿತವರೇ ವಿರಳ…

(ಚಿತ್ರ ಸೆಲೆ: www.fathersrightsdallas.attorney)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: