ಬಂದೆ ನೀನು ಮೆಲ್ಲಗೆ…ಸೀದಾ ನನ್ನ ಮನಸಿಗೆ

 ಶರತ್ ಪಿ.ಕೆ. ಹಾಸನ.

 

ಬಂದೆ ನೀನು ಮೆಲ್ಲಗೆ…ಸೀದಾ ನನ್ನ ಮನಸಿಗೆ
ಮಾತು ಬರದ ಮೌನಿ ನಾನು, ನನಗೆ ಮಾತು ಕಲಿಸಿದೆ
ಬಂದೆ ನೀನು ಕನಸಿಗೆ…ನಗುತಾ ನಿಂತು ಹೂನಗೆ
ನೆಪವೆ ಇರದೆ ನನ್ನ ಮನಕೆ ನೀನು ಹಿಡಿಸಿದೆ

ಬಂದೆ ನೀನು ಮೆಲ್ಲಗೆ…ಸೀದಾ ನನ್ನ ಮನಸಿಗೆ…

ನನ್ನ ಕವಿತೆ ಸಾಲು ಕೂಡ ನಿನ್ನನೇ ರಮಿಸಿದೆ
ಅದರ ಹಣೆಯ ಬರಹದಲ್ಲೂ ನಿನ್ನದೇ ಹೆಸರಿದೆ
ಮಗುವಿನಂತೆ ನನ್ನ ನೀನು ಮುದ್ದು ಮಾಡುವೆ
ಅದಕೆ ನಾನು ನಾನಾ ಬಗೆಯ ತಂಟೆ ಮಾಡುವೆ
ನಿನ್ನ ಗಮನ ಸೆಳೆಯಲೆಂದೆ
ಹಿಂದೆ ಮುಂದೆ ಸುಳಿಯುವೆ
ತಿಳಿದು ತಿಳಿದು ನೋಡದಂತೆ ನೀನು ಹೋಗುವೆ

ಬಂದೆ ನೀನು ಮೆಲ್ಲಗೆ…ಸೀದಾ ನನ್ನ ಮನಸಿಗೆ…

ನಿನ್ನ ಹಣೆಯ ಚುಕ್ಕಿ ನನ್ನ ನೋಡಿ ನಸುನಗುತಿದೆ
ಕೆನ್ನೆ ಗುಳಿಯು ನನ್ನ ಬೆರಳನೇ ಹುಡುಕಿದೆ
ನನ್ನ ಏಕಾಂತವೆಲ್ಲ ನಿನಗೆ ನೀಡುವೆ
ಪೆದ್ದು ನೀನು ಗಣಿತದಲ್ಲಿ ತಪ್ಪು ಮಾಡುವೆ
ನನ್ನ ಎದೆಯ ಬಾವಗಣಿತ ನಿನಗೆ ತಿಳಿಸುವೆ
ನಿನ್ನ ಮನದ ಮಗ್ಗಿಯನ್ನು ನಾನೆ ತಿದ್ದುವೆ

ಬಂದೆ ನೀನು ಮೆಲ್ಲಗೆ…ಸೀದಾ ನನ್ನ ಮನಸಿಗೆ…
ಬಂದೆ ನೀನು ಕನಸಿಗೆ…ನಗುತ ನಿಂತೆ ಹೂನಗೆ….

(ಚಿತ್ರಸೆಲೆ: make2fun.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: