ಮುಗಿಯದು ಈ ಪಯಣ

– ಗೌರೀಶ ಬಾಗ್ವತ.

 

ಕಾಡುತ್ತಿತ್ತು ಆ ದಿನ.. ಅಂದಿಗೆ ಮುಗಿಯತು ಆ ಗಟನೆ

ಮತ್ತೆ ಆ ದಿನ ಮರಳದಿರಲಿ ಎಂಬುದೇ ಆಸೆ

ಆದರೆ ಯಾಕೋ ತಿಳಿಯದು, ಮರೆಯಲಾಗದು ಆ ದಿನವ…

ಆ ಗಳಿಗೆಯನೂ ಕೂಡ..

ಗತಿಸಿದ ಅದ್ಯಾಯಗಳ ಪುಟಗಳನು ತಿರುವಿ ನೋಡುವ ಬಯಕೆ ನನಗಿಲ್ಲ

ತೀರದ ಬಿಕ್ಕಳಿಕೆಯೊಡನೆ ನೆನಪಿನ ಬತ್ತಳಿಕೆಯ ಹೆಗಲಿಗೇರಿಸಿಕೊಂಡು ಬಿಕಾರಿಯಾದೆ ನಾನು…

ನಿನ್ನ ಕಣ್ಣೋಟದ ಅಲೆಗಳು ಅಪ್ಪುವ ರಬಸಕೆ ಹ್ರುದಯ ನಡುಗಿದೆ…

ಮುಸ್ಸಂಜೆಯ ಮುಗಿಲಲಿ ರವಿಗಿಂತ ನೀ ಶೋಬಿಸಿದ್ದೆ ಅಂದು

ನಿನ್ನಂತರಂಗವ ಅರಿಯದೇ ನನಗೇ ನಾ “ಅರಿ”ಯಾದೆ…

ಸದಾ ನಿನ್ನ ನೆನಪುಗಳನ್ನೇ ನೆಪವಾಗಿರಿಸಿಕೊಂಡು

ನೋವಿದ್ದರೂ ನಲಿವಿನ ಮುಕವಾಡ ತೊಟ್ಟು ಅಂತ್ಯದ ಹಾದಿಗೆ ಕಾದಿರುವೆ…

ಮುಗಿಯದು ಈ ಪಯಣ… ಸೇರದೇ ನಾ ಮಸಣ…

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: