ಮಾರುಹೋಗಿರುವೆ ನಿನ್ನ ಮದುರ ಮಾತಿಗೆ

ಚೇತನ್ ಕೆ.ಎಸ್.

ನಿನ್ನ ಮಾತುಗಳೇ ಚೆನ್ನ
ಕೇಳಿದರೂ ಕೇಳಬೇಕೆನ್ನುವ ಬಯಕೆ
ಮೂಕಗೊಂಡಿಹೆನು ನಿನ್ನ ದನಿಗೆ
ಮಾರುಹೋದೆನು ನಿನ್ನ ನುಡಿಗೆ…

ಕಳೆದು ಹೋದೆ ಗೆಳತಿ
ನಿನ್ನ ಸವಿನುಡಿಯ ಸಲ್ಲಾಪಕೆ
ಪ್ರೀತಿ ತುಂಬಿದ ಆಲಾಪನೆಗೆ
ನಿನ್ನ ತುಂಬು ನಗೆಯ ಮಲ್ಲಿಗೆಗೆ…

ನೀ ದೂರವಿದ್ದರೂ ನಿನ್ನ ಮಾತು
ಸದಾ ನನ್ನ ಮನವನ್ನೇ ಕಾಡುತಿದೆ
ತನು ಮನಕೆ ಹೂ ಮಲ್ಲಿಗೆಯ ಚೆಲ್ಲುತಿದೆ
ಒಡಲಾಳದ ಜೀವಕೆ ಚೈತನ್ಯ ನೀಡುತಿದೆ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: