ಬಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ

– ಸಿಂದು ಬಾರ‍್ಗವ್.

ಬಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ
ಕೆಲವನ್ನು ನೆಲದೊಳಗೆ
ಹಲವನ್ನು ಮನದೊಳಗೆ
ಮುಚ್ಚಿಟ್ಟಿದ್ದೇನೆ

ಮಳೆಯನ್ನೇ ಕಾಯುತಿರುವೆ
ಮೊಳಕೆಯೊಡೆಯಬಹುದು
ಮನ ತಣಿಯುವುದ ನೋಡುತಿರುವೆ
ಕನಸು ಚಿಗುರಬಹುದು

ಪ್ರೀತಿಯ ನಾಯಕನಾತ
ಮರೆತು ಹೋಗಿರುವ
ಮನದ ನಾವಿಕನಾತ
ತೊರೆದು ಸಾಗಿರುವ

ನನಗೀಗ ಅಲೆಗಳೇ ಗೆಳತಿಯರು
ಬಾವನೆಗಳಿಗೆ ಜೊತೆಗಿಹರು

ಕ್ಶಮಿಸುವುದ ಕಲಿಸುತ್ತಾ
ನೋವುಗಳ ಮರೆಸಿಹರು
ಮತ್ತೊಂದು ಹೊಸ ಪರ‍್ವ
ಬರುವ ಬರವಸೆ ತುಂಬಿಹರು

(ಚಿತ್ರ ಸೆಲೆ: deviantart.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *