ಕೊನೆವರೆಗೂ ಇದೇ ನನ್ನ ಪ್ರಾರ‍್ತನೆ

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ಆಕಾಶವೇ ಕಳಚಿ ಬಿದ್ದಂತೆ ಸುರಿಯುತಿದೆ ನೋಡ
ಕರಗಿ ನೀರಾಗುತಿದೆ ಮೇಲೆ ಅವಿತಿದ್ದ ಕರಿಮೋಡ

ಬೀಸುವ ಗಾಳಿಗೆ ದರೆಗೆ ಉರುಳುತಿದೆ ಮರಗಳು
ಗೂಡುಗಳ ಕಳೆದುಕೊಳ್ಳುತಿವೆ ಪಕ್ಶಿ ಸಂಕುಲಗಳು

ತೇಲುತಿದೆ ರಸ್ತೆಯಲ್ಲಿ ಕಾರು ಬೈಕುಗಳು
ಸಿಗುತಿದೆ ಅಂತ ಪೋಟೋಗಳಿಗೆ ಪೇಸ್ಬುಕ್ಕಿನಲ್ಲಿ ನೂರಾರು ಲೈಕುಗಳು

ವರುಣ ರಾಜನ ಬುವಿಯ ಮೇಲಿನ ಪ್ರೀತಿಗೆ ಅದರ ರೀತಿಗೆ ವಂದನೆ
ಆದರೆ ಕೇಳದೆ ಇರದು ಜನರ ಬಾಯಲ್ಲಿ ನಿಂದನೆ

ಬೇಗ ತುಂಬಲಿ ಎಲ್ಲಾ ಕೆರೆಕಟ್ಟೆ ಬಾವಿಗಳು
ಒಣಗದೆ ಇದ್ದರು ಬೇಸರ ಇಲ್ಲ ನಮ್ಮ ಒಗೆದ ಬಟ್ಟೆಗಳು

ಜನರಿಲ್ಲದೆ ಬಣಗುಟ್ಟುತಿದೆ ಮದುವೆ ಮನೆಗಳು
ಬರದೆ ಇರಲು ಕೊಡುತಿಹರು ನಿನ್ನದೇ ನೆಪಗಳು

ಮೀಟರ್ ಗಿಂತ ಕೇಳುತಿಹರು ಆಟೋದವರು ಜಾಸ್ತಿ
ವಿದಿ ಇಲ್ಲದೆ ಹೋಗಬೇಕು, ಅದಕೆ ಅವರಿಗೆ ನಿನ್ನ ಕಂಡರೆ ಪ್ರೀತಿ

ಸರಸರನೇ ಕಾಲಿಯಾಗುತಿದೆ ಬಜ್ಜಿ, ಬೋಂಡಾಗಳು
ತುಂಬಿ ತುಳುಕಾಡುತಿದೆ ಎಲ್ಲ ಬಾರುಗಳು

ಯಾರ ಮೇಲು ಗೋಡೆ-ಮರ ಬೀಳದಿರಲಿ
ಎಲ್ಲರು ಕ್ಶೇಮವಾಗಿ ಮನೆಗಳ ಸೇರಲಿ

ಮಳೆಯೆಂಬುದು ಇಳೆಯ ಮೇಲಿನ ಪ್ರೀತಿಯ ಸಂಕೇತ
ಏನೇ ಆದರೂ ಆ ಪ್ರೀತಿ ಇರಲಿ ಶಾಶ್ವತ

ಹೀಗೆ ಬಾ, ಹಾಗೆ ಬಾ ಎನ್ನಲು ನಾನ್ಯಾರು?
ಒಂದು ವೇಳೆ ಅಂದರು ನೀ ಮಾಡಲ್ಲ ಕೇರು

ಹೀಗೆ ತೋರಿದರೆ ಕರುಣೆ
ನೀಗುವುದು ನಮ್ಮ ಎಲ್ಲಾ ಬವಣೆ
ಕೊನೆವರೆಗೂ ಇದೇ ನನ್ನ ಪ್ರಾರ‍್ತನೆ

( ಚಿತ್ರ ಸೆಲೆ: youtube.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: