ಮಕ್ಕಳ ಕತೆ: ಸೋಮಾರಿತನ ತಂದ ಪಜೀತಿ

– ಸುರಬಿ ಲತಾ.

ಶಾಲೆಯಲ್ಲಿ ಕೆಲ ಮಕ್ಕಳು ತುಂಬಾ ಜಾಣರಾಗಿಯೂ, ಇನ್ನೂ ಕೆಲವು ಮಕ್ಕಳು ದಡ್ಡರಾಗಿ ಇರುತ್ತಾರೆ. ಆದರೆ ಯಾರೂ ದಡ್ಡರಲ್ಲ ಅದು ಸೋಮಾರಿತನ. ಇದನ್ನು ಮಕ್ಕಳಿಗೆ ತಿಳಿ ಹೇಳಿ ಆ ಸೊಂಬೇರಿತನವನ್ನು ಹೋಗಲಾಡಿಸುವುದು ಕಲಿಸುವವರ ಕರ‍್ತವ್ಯ.

ಸುಮ ಈ ನಿಟ್ಟಿನಲ್ಲಿ ಮಕ್ಕಳಿಗಾಗಿ ಒಂದು ಕತೆಯನ್ನು ಪ್ರಯೋಗದ ಮೂಲಕ ತಿಳಿಸಲು ಬಯಸಿದಳು.

“ಮಕ್ಕಳೇ ನಾನು ಮಾಡುವ ಪ್ರಯೋಗವನ್ನು ಎಲ್ಲರೂ ಗಮನವಿಟ್ಟು ನೋಡಿ, ಕೊನೆಯಲ್ಲಿ ನಾನು ಪ್ರಶ್ನೆಗಳು ಕೇಳಿದಾಗ ಉತ್ತರಿಸಿ”

ಮಕ್ಕಳು ಒಪ್ಪಿಕೊಂಡರು. ಸುಮ ತನ್ನ ಪ್ರಯೋಗದ ಶುರು ಮಾಡಿದಳು. ಮೊದಲಿಗೆ ಒಂದು ಕಪ್ಪೆಯನ್ನು ತೆಗೆದುಕೊಂಡಳು ಒಂದು ನೀರು ತುಂಬಿದ ಪಾತ್ರೆಯಲ್ಲಿ ಹಾಕಿದಳು. ಅದು ಮಜವಾಗಿ ಈಜಲಾರಂಬಿಸಿತು.

ನಂತರ ಉರಿಯುವ ಬೆಂಕಿಯ ಮೇಲೆ ಪಾತ್ರೆಯನ್ನು ಇಟ್ಟಳು ನೀರು ಬಿಸಿಯಾಗ ತೊಡಗಿತು. ಆಗ ಕಪ್ಪೆ ಹಿಂದೆ ಮುಂದೆ ಈಜತೊಡಗಿತು.

ನಂತರ ಉರಿ ಜಾಸ್ತಿ ಮಾಡಿದಳು ಆಗ ಸ್ವಲ್ಪ ವಿಚಲಿತಗೊಂಡು ಮತ್ತೆ ಈಜತೊಡಗಿತು. ಆಗ ಉರಿಯನ್ನು ಮತ್ತೂ ಜೋರಾಗಿ ಇಟ್ಟಳು.

ಆಗ ಅದರ ಮೈ ಸುಡುವಂತಾಗಿ ಹೊರಬರಲು ಕಾತರಿಸಿತು. ಆದರೆ ಪಾತ್ರೆ ಜಾಸ್ತಿ ಬಿಸಿಯಾಗಿಯೂ ನೀರು ಹೆಚ್ಚು ಕಾದದ್ದಾದರಿಂದ ಹೊರ ಬರಲಾಗದೇ ಸತ್ತು ಹೋಯಿತು .

ಆಗ ಅವಳು ಮಕ್ಕಳನ್ನು ಕೇಳಿದಳು ಯಾಕೆ ಕಪ್ಪೆ ಸತ್ತು ಹೋಯಿತು?

ಮಕ್ಕಳು ಹೇಳಿದರು, “ಅದು ಬಿಸಿ ತಾಳಲಾಗಾದೇ ಸತ್ತುಹೋಯಿತು ಎಂದರು”

ಆಗ ಟೀಚರ್ ಹೇಳಿದಳು ಅಲ್ಲ ಅದು ಸರಿ ಉತ್ತರ ಅಲ್ಲ.

ಸರಿಯಾದ ಉತ್ತರ: ಅದು ತನ್ನ ಸೋಮಾರಿತನ ಹಾಗು ನಿರ‍್ಲಕ್ಶ್ಯದಿಂದ ಸತ್ತು ಹೋಯಿತು.

ನೀರು ಸ್ವಲ್ಪ ಬಿಸಿಯಾದೊಡನೇ ಅದು ಹೊರಬರಲು ಪ್ರಯತ್ನ ಪಟ್ಟಿದ್ದರೆ ಅದು ಸಾಯುತ್ತಿರಲಿಲ್ಲ. ಆದರೆ ಹಾಗೆ ಮಾಡದೇ ಬಿಸಿಗೆ ತನ್ನನ್ನು ತಾನು ಹೊಂದಿಸಿಕೊಂಡು ಸುಮ್ಮನಾಯಿತು.ಬಿಸಿ ಹೆಚ್ಚಾದಾಗ ಅದು ಹೊರ ಬರಲಾಗದೇ ಸಾವನ್ನಪ್ಪಿತು.

ನಾವು ಸಮಸ್ಯೆಗಳು ಚಿಕ್ಕದಿರುವಾಗಲೇ ಎಚ್ಚೆತ್ತು ಕೊಳ್ಳದೇ ಉದಾಸೀನ ಮಾಡುತ್ತೇವೆ. ಕೊನೆಗೆ ಅವು ಬೂತಾಕಾರ ತಾಳಿದೊಡನೆ ಎದುರಿಸಲಾಗದೆ ಸಾಯುತ್ತೇವೆ.

“ಮಕ್ಕಳೇ, ಪಾಟಗಳು ನಿಮಗೆ ಅರ‍್ತವಾಗದೇ ಇದ್ದಾಗ ಆಗಲೇ ನೀವು ದೊಡ್ಡ ವರನ್ನು ಕೇಳಿ ಆಗಲೇ ಸಮಸ್ಯೆ ಗಳನ್ನು ಪರಿಹರಿಸಿ ಕೊಳ್ಳದಿದ್ದರೆ ಅದು ನಿಮಗೆ ಮುಂದೆ ದೊಡ್ಡದಾಗಿ ಪರೀಕ್ಶೆಯ ಹೊತ್ತಿನಲ್ಲಿ ತೊಂದರೆ ಕೊಡಬಹುದು. ಹಾಗಾಗಿ ನೀವು ಕಪ್ಪೆಯ ಈ ಕತೆಯನ್ನು ನೀತಿಪಾಟವಾಗಿ ನೆನಪಿಡಿ.” ಎಂದು ಹೇಳಿದಳು.

ಅಂದಿನಿಂದ ಮಕ್ಕಳು ಓದಲು ಉತ್ಸುಕರಾದರು.

(ಚಿತ್ರ ಸೆಲೆ: dancingwiththeblackdog.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.