ಹಕ್ಕಿಯ ಅಳಲು
ಕಟ್ಟಲೇನು ಕಶ್ಟನಮಗೆ
ಪುಟ್ಟಗುಡಿಸಲು
ಇಶ್ಟಪಟ್ಟು ಕಟ್ಟಬೇಕು
ಕೂಡಿ ಬದುಕಲು
ಗರಿಯ ಎಳೆಯ ಸೀಳಿ ಎಳೆದು
ಗೂಡುಕಟ್ಟಲು
ಮರದ ಎದೆಯ ಅರಿಯಬೇಕು
ಮುದದಿ ಬಾಳಲು
ಗಾಳಿಮಳೆಯ ರಕ್ಶಣೆಗೆ
ನಮಗೂ ಗುಡಿಸಲು
ಮೊಟ್ಟೆ ಒಡೆದು ಮರಿಯು ಬರಲು
ನಮಗೂ ಒಕ್ಕಲು
ನೀವೂ ಬಾಳಿ, ಬಾಳಬಿಡಿ
ಎಂದಿಹರು ಮಹಾತ್ಮರು
ಮರವ ಕಡಿದು, ಮನೆಯ
ಮುರಿದರು ದುರುಳಾತ್ಮರು
ನಿಮ್ಮ ಮಹಲೆ
ತುಂಬುತಿವೆ ದರೆಯ ತುಂಬಲು
ಪ್ರಾಣಿ ಪಕ್ಶಿ ವಾಸವಿರಲು
ಜೀವ ಬಂಬಲು
(ಚಿತ್ರ ಸೆಲೆ: pixabay.com)
ಚನ್ನಾಗಿದೆ … ಪದ ಬಳಿಕೆ ಸೊಗಸಾಗಿದೆ