ಕಪ್ಪು ಮೋಡದಲ್ಲೇ ಜಗದ ಬಲ…

ವಿನು ರವಿ.

ಕಪ್ಪು ಮೋಡದಲ್ಲೇ
ಜಗದ ಬಲ
ಜೀವ ಜಲ..
ಕಪ್ಪು ಮಣ್ಣಿನಲ್ಲೇ
ತುಂಬು ಬೆಳೆ
ಹಸಿರು ಇಳೆ…
ಕಪ್ಪು ಕಾಡಿಗೆ
ಕಣ್ಣ ತುಂಬಿದರೇ
ತಾರೆಗಿಂತಲೂ ಹೊಳಪು
ಕಂಗಳು.
ಕಪ್ಪು ಮುಂಗುರುಳು
ಚೆಲುವೆಯ ಮೊಗದಲಿ
ಲಾಸ್ಯವಾಡಿದರೆ
ಇಮ್ಮಡಿಯಾಯಿತು
ಬೆಡಗಿಯ ರಂಗು..
ಜಗವನೆ ಲಾಲಿಸುವ
ಆಡಿಸುವ ಜಗದೋದ್ದಾರಕ
ಮೋಹನ ಮುರಳಿ
ಶ್ಯಾಮನ ರಾಮನ
ನೀಲವರ‍್ಣಕೇ ಅಲ್ಲವೆ
ಒಲಿದರು ರಾದೆ ರುಕ್ಮಿಣಿ
ಬಾಮೆಯರು..
ಅಲ್ಲದೇ ಹದಿನಾರು ಸಾವಿರ
ಚೆಲುವೆಯರು..

(ಚಿತ್ರ ಸೆಲೆ: flickr.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: