ಆ ಸುಂದರ ಕನಸುಗಳ ಓಟ

– ಶಾಂತ್ ಸಂಪಿಗೆ.

ಸವಿನೆನಪಿನ ಜಡಿ ಮಳೆಗೆ
ಚಿಗುರುತಿದೆ ಒಂದು ಕನಸು
ಮರಳಿ ಬರುವುದೆ ನನಗೆ
ಆ ಮದುರವಾದ ಬದುಕು ||

ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ನಡೆದ ನಡಿಗೆ ಸೊಗಸು
ತೊದಲ ನುಡಿ ಕಲಿತ ಗಳಿಗೆ
ಎಶ್ಟು ಚೆಂದ ಸ್ಮರಿಸು ||

ಚಂದಮಾಮ ಬೇಕು ಎನ್ನುವ
ಹಟದಿ ಬಂತು ಮುನಿಸು
ಎಂದೆಂದು ಹೀಗೇ ಇರಲಿ ನನಗೆ
ಮುದ್ದು ಮಗುವಿನ ಮನಸು ||

ಅಕ್ಕ ಪಕ್ಕ ಮನೆಯ ಗೆಳೆಯರ
ಜೊತೆ ಆಡುತ್ತಿದ್ದ ಆಟ
ಹೊಲ ಗದ್ದೆ ಮರದ ನೆರಳ
ಕೆಳಗೆ ಮಾಡುತ್ತಿದ್ದ ಊಟ ||

ಕೆರೆಯ ಏರಿ ಜಿಗಿದು ನೀರಿನಲ್ಲಿ
ಕುಣಿವ ಮದುರ ಕೂಟ
ಮತ್ತೆ ಮತ್ತೆ ಬೇಕು ನನಗೆ
ಸುಂದರ ಕನಸುಗಳ ಓಟ ||

(ಚಿತ್ರ ಸೆಲೆ: pixabay.com)Categories: ನಲ್ಬರಹ

ಟ್ಯಾಗ್ ಗಳು:, , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s