ನಿನ್ನ ಜೊತೆಯಾಗುವಾಸೆ ಗೆಳತಿ

– ಸಂಜಯ್ ದೇವಾಂಗ.

(ಅವನು)
ನಿನ್ನ ಹ್ರುದಯದ ಕೋಣೆಯಲ್ಲಿ
ಪ್ರೀತಿಯಾ ಕೋಳದಿ
ಬಂದಿಸಿರುವ ಹ್ರುದಯಗಳ್ಳಿ ನೀನು
ನನ್ನ ಹ್ರುದಯವ ಮರಳಿ ಕೊಡು ಎನ್ನುವ
ಇನಿಯ ನಾನಲ್ಲ

(ಅವಳು)
ನಾ ಕಂಡ ಕನಸಿನಂತೆ ಜೊತೆಯಾಗಿ
ಪ್ರೀತಿಯ ಅರಮನೆ ಕಟ್ಟುವಾಸೆ
ಕ್ಶಮಿಸಿ ಬಿಡು ಗೆಳೆಯ
ಹ್ರುದಯದ ಬೀಗವ
ನಾ ಕಳೆದು ಕೊಂಡಿರುವೆ.

***

ಹೇ ಗೆಳತಿ ನಿನ್ನ ಮೌನ ನನ್ನ
ಹ್ರುದಯವ ಕಲುಕಿದೆ
ಹೇಳು ಬೇಗನೆ ಎಲ್ಲಿರುವೆ ನೀನೆಂದು
ನಾ ಕಾದು ಕಾದು ಮರಳಿ
ಹೋಗುವ ದಾರಿಯ ಮರೆತಿರುವೆ
ನಿನ್ನ ಬರುವಿಕೆಯ ದಾರಿ ಹಿಡಿದು
ಕಾದು ಕುಳಿತಿರುವೆ
ಮರಳಿ ಬೇಗ ಬಾ ಮತ್ತೆ ನಿನ್ನ
ಜೊತೆಯಾಗುವಾಸೆ ಗೆಳತಿ

(ಚಿತ್ರ ಸೆಲೆ: pexels.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: