ರುಚಿ ರುಚಿಯಾದ ಅಡುಗೆ – ತರಕಾರಿ ಕುರ‍್ಮ
ಬೇಕಾಗುವ ಸಾಮಾಗ್ರಿಗಳು:
ಬೀನ್ಸ್ – 10-15
ಕ್ಯಾರೆಟ್ – 1-2
ಆಲೂಗಡ್ಡೆ – 2
ಬಟಾಣಿ – 1 ಲೋಟ
ಕಾಯಿತುರಿ – 1/4 ಲೋಟ
ಪುದೀನಾ ಸೊಪ್ಪು – 1/4 ಕಟ್ಟು
ಕೊತ್ತಂಬರಿ ಸೊಪ್ಪು – 1/2 ಕಟ್ಟು
ಈರುಳ್ಳಿ – 1
ಹಸಿಮೆಣಸು 6-8
ದಾಲ್ಚಿನ್ನಿ – 2 ತುಂಡು
ಏಲ್ಲಕ್ಕಿ – 2
ಲವಂಗ – 3-4
ಗಸಗಸೆ – 2 ಚಮಚ
ಕಾಳುಮೆಣಸು -5-6
ಬೆಳ್ಳುಳ್ಳಿ – 6-7 ಎಸಳು
ಶುಂಟಿ – 1/2 ಇಂಚು
ನಿಂಬೆಹಣ್ಣು – 1/2
ಜೀರಿಗೆ – 1 ಚಮಚ
ಮಾಡುವ ಬಗೆ:
ಬೀನ್ಸ್, ಕ್ಯಾರೆಟ್, ಆಲೂಗಡ್ಡೆ, ಬಟಾಣಿಯನ್ನು ಉಪ್ಪು ಹಾಕಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ಚಕ್ಕೆ, ಲವಂಗ, ಏಲಕ್ಕಿ, ಗಸಗಸೆ, ಕಾಳುಮೆಣಸು, ಶುಂಟಿ, ಬೆಳ್ಳುಳ್ಳಿ ಹಾಗೂ ಹಸಿಮೆಣನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು, ಅದಕ್ಕೆ ಕಾಯಿತುರಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಎಲ್ಲವನ್ನು ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಬಳಿಕ ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ, ಕರಿಬೇವು, ಈರುಳ್ಳಿ ಹಾಕಿ ಬಾಡಿಸಿಕೊಳ್ಳಬೇಕು. ನಂತರ ಬೇಯಿಸಿದ ತರಕಾರಿ, ರುಬ್ಬಿದ ಮಿಶ್ರಣ, ರುಚಿಗೆ ಬೇಕಾದಶ್ಟು ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ಕೊನೆಗೆ ನಿಂಬೆಹಣ್ಣು ಹಿಂಡಿದರೆ ಬಿಸಿ ಬಿಸಿ ತರಕಾರಿ ಕುರ‍್ಮ ತಿನ್ನಲು ಸಿದ್ದ. ಇದನ್ನು ಪುರಿ, ಚಪಾತಿ, ತುಪ್ಪದನ್ನದೊಂದಿಗೆ ಸವಿಯಲು ತುಂಬಾ ಚೆನ್ನಾಗಿರುತ್ತೆ.
(ಚಿತ್ರ ಸೆಲೆ: wikimedia)
ಇತ್ತೀಚಿನ ಅನಿಸಿಕೆಗಳು