ನೀ ಯಾರೇ…
– ವಿನು ರವಿ.
ಮುಗಿಲ ಹಸೆಗೆ
ಬಣ್ಣ ರಂಗು ಬಳಿದು
ಹಾಡಿದ ಕಿನ್ನರಿ ನೀ ಯಾರೇ
ಬನದ ಹಸಿರಿಗೆ
ಜರಿ ಕುಪ್ಪಸದ
ಬ್ರುಂಗ ಜೇಂಕರಿಸಿ
ನಕ್ಕ ಗಂದರ‍್ವ ಕನ್ನಿಕೆ ನೀ ಯಾರೇ
ಜುಳು ಜಳು ಹರಿವ
ಹೊಳೆಯಲಿ
ಮುತ್ತು ಪಚ್ಚೆ ರತ್ನಗಳ
ತಂದಿಟ್ಟ ದೇವದೂತೆ ನೀ ಯಾರೇ
ಗಿರಿ ಶಿಕರಕೆ ಮೋಡಗಳ
ಕಿರೀಟ ತೊಡಿಸಿ
ಜಾರುಬಂಡೆಯಾಡಿದ
ಯಕ್ಶಿಣಿ ನೀ ಯಾರೆ
ರವಿ ಕಿರಣಗಳ
ಒಡವೆ ತೊಟ್ಟು
ಹೊಳೆವ ಬಳೆ ಗಲ್ಲೆನೆಸಿದ
ಸುರಮಣಿ ನೀ ಯಾರೇ
ಪಾರಿಜಾತ ಗಂದ
ಸವರಿ ನವಿಲು ಗರಿ
ಮೇಲುದವ ಹೊದ್ದು
ಹೊರಟ ಶ್ರೀ ಕ್ರಿಶ್ಣೆ ನೀ ಯಾರೇ
ಸ್ವರ‍್ಗ ಮರ‍್ತ್ಯ ಬೆಸೆದು
ಚೆಲುವ ಸೊಬಗ ಹೊಸೆದು
ನಿಸರ‍್ಗ ದೇವಿ ಮೆರೆದಳೊ..
ಇಳೆಯ ರಸಿಕರೆಲ್ಲಾ
ನೋಡಬನ್ನಿರೋ…
( ಚಿತ್ರ ಸೆಲೆ: qygjxz.com )
ಸೊಗಸಾದ ಕವಿತೆ
ಚೆನ್ನಾಗಿದೆ