ಮನಸ್ಸು ಚಂಚಲ

– ನಂದೀಶ್.ಡಿ.ಆರ್.

ರಾತ್ರಿ ಕಂಡ ಕನಸುಗಳ ಬಿಟ್ಟು
ಮುಂಜಾನೆಯಲಿ ಎದ್ದೇಳಲು
ಚಡಪಡಿಸುವ ಮನಸ್ಸು ಚಂಚಲ

ಎದುರಿಗೆ ತಾವರೆ ಕೆನ್ನೆಯ ಚೆಲುವೆಯ
ಕಂಡಾಗ ಮನಸ್ಸು ಚಂಚಲ
ಅವಳ ಅಂದಕೆ ಸೋತಾಗ
ಕುಶಿ ಪಡುವ ಮನಸ್ಸು ಚಂಚಲ

ನನ್ನಯ ಮನಸ್ಸಲಿ ಗುನುಗುವ ಅವಳ
ಹಾಡನು ಹಾಡಲು ಮನಸ್ಸು ಚಂಚಲ
ಬಯಸಿದ ಹ್ರುದಯದ ಒಲವನು
ಕೇಳಲಾಗದ ಮನಸ್ಸು ಚಂಚಲ

ಯಾರ ಮಾತನು ಕೇಳಲಾಗದೆ
ಹಾದಿ ತಪ್ಪಿದ ಮನಸ್ಸು ಚಂಚಲ
ಸಂಪಿಗೆ ಸೊಬಗನು ಸವಿಯಲು
ಯೋಚಿಸುವ ಮನಸ್ಸು ಚಂಚಲ

ಜೀವದ ಬಂದವ ತಿಳಿಯದೆ
ಒದ್ದಾಡುವ ಮನಸ್ಸು ಚಂಚಲ
ಕ್ಶಣ ಕ್ಶಣಕೂ ಬದಲಾಗೋ
ಮನಸ್ಸು ಚಂಚಲ

ಗೊತ್ತಿಲ್ಲದೆ ನಿರ‍್ದಾರವ
ತೆಗೆದುಕೊಳ್ಳೋ ಮನಸ್ಸು ಚಂಚಲ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications