ನೋವಿನ ಮಂತನದಲ್ಲಿ

ವಿನು ರವಿ.

ನೋವಿನ ಮಂತನದಲ್ಲಿ
ಸಾವಿನ ಬೆಳಕು
ಆಸೆಯ ಕಿರಣವಾಗಿದೆ

ಆಸೆ ನಿರಾಸೆಗಳ
ಹಗ್ಗ ಜಗ್ಗಾಟದಲ್ಲಿ
ಕೈಗೂಡದ ಕನಸುಗಳು
ಒಣಗಿದೆಲೆಗಳಂತೆ
ಕಳಚಿ ಬೀಳುತ್ತಿವೆ

ಕತ್ತಲಲ್ಲಿ ಕಳೆದು ಹೋದ
ಬೆಳಕಿಗಾಗಿ
ಹಂಬಲಿಸುತ್ತಾ
ತಪಿಸಿದ್ದು
ಮತಿಸಿದ್ದು..

ಸಂಜೀವಿನಿಯ ಹೊತ್ತು
ತರುವವರ ಕಾಣದೆ,
ಅಮೂರ‍್ತ ಆನಂದದ
ಹುಡುಕಾಟದಲ್ಲಿ
ಸಾವಿನರಮನೆಯ ಸಮೀಪವಾಗಿದ್ದು
ಗೊತ್ತಾಗಲೇ ಇಲ್ಲ.

(ಚಿತ್ರ ಸೆಲೆ: scienceve.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. PRASAD KODIYA says:

    ತುಂಬಾನೇ ಚೆನ್ನಾಗಿದೆ ಕಣ್ರೀ

  2. K.V Shashidhara says:

    ಸೊಗಸಾಗಿದೆ

ಅನಿಸಿಕೆ ಬರೆಯಿರಿ: