ಅಮ್ಮ‌ನ‌ ಕೈರುಚಿಯ‌ ಅವ‌ಲ‌ಕ್ಕಿ ಉಪ್ಪಿಟ್ಟು

ಸಂತೋಶ್ ಕುಮಾರ್.

ಬೇಕಾಗುವ‌ ಸಾಮಾಗ್ರಿಗ‌ಳು

200 ಗ್ರಾಮ್ ಸ‌ಣ್ಣ‌/ಮ‌ದ್ಯ‌ಮ‌ ಗಾತ್ರ‌ದ‌ ಅವ‌ಲ‌ಕ್ಕಿ
2 ಸ‌ಣ್ಣ‌ಗೆ ಹೆಚ್ಚಿದ‌ ಈರುಳ್ಳಿ
2 ಮೆಣ‌ಸಿನ‌ಕಾಯಿ
10 ರಿಂದ‌ 15‍ ಕ‌ರಿಬೇವಿನ‌ ಎಲೆಗ‌ಳು
1 ನಿಂಬೆಹ‌ಣ್ಣು
1/2 ಚ‌ಮ‌ಚ‌ ಜೀರಿಗೆ
1/2 ಚ‌ಮ‌ಚ‌ ಸಾಸಿವೆ
1/2 ಚ‌ಮ‌ಚ‌ ಅರಿಶಿನ‌ ಪುಡಿ
ಸ್ವ‌ಲ್ಪ‌ ಕೊತ್ತಂಬ‌ರಿ ಸೊಪ್ಪು
4 ಚ‌ಮ‌ಚ‌ ಅಡುಗೆ ಎಣ್ಣೆ
50 ಗ್ರಾಮ್ ಕ‌ಡ‌ಲೆ ಬೀಜ‌ (ಕ‌ಡ್ಡಾಯ‌ವ‌ಲ್ಲ‌)

ಮಾಡುವ‌ ಬಗೆ

ಮೊದ‌ಲು ಕ‌ಡ‌ಲೆಬೀಜ‌ವ‌ನ್ನು ಹುರಿದು ಬೇರೆ ಇಟ್ಟುಕೊಳ್ಳಿ. ಅವ‌ಲ‌ಕ್ಕಿಯ‌ನ್ನು ನೀರಿನಿಂದ ತೊಳೆದು ನೀರೆಲ್ಲಾ ಸೋರುವಂತೆ ಮಾಡಿ ಇಟ್ಟುಕೊಳ್ಳಿ (ಅವ‌ಲ‌ಕ್ಕಿಯ‌ನ್ನು ಕೇವ‌ಲ‌ ತೊಳೆದುಕೊಳ್ಳ‌ಬೇಕು, ನೆನೆಸ‌ಬಾರ‌ದು). ಬಾಣ‌ಲೆಯಲ್ಲಿ ಎಣ್ಣೆಹಾಕಿ ಬಿಸಿಮಾಡಿ, ಅದ‌ಕ್ಕೆ ಸಾಸಿವೆ ಮತ್ತು ಜೀರಿಗೆಯ‌ನ್ನು ಹಾಕಿ ಅರ‍್ದ‌ ನಿಮಿಶ‌ ಹುರಿದುಕೊಳ್ಳಿ. ಬಳಿಕ ಕ‌ತ್ತ‌ರಿಸಿದ‌ ಮೆಣ‌ಸಿನ‌ಕಾಯಿ ಮ‌ತ್ತು ಕರಿಬೇವಿನ‌ ಎಲೆಗ‌ಳನ್ನು ಹಾಕಿ ಕಲಸಿ. 1 ನಿಮಿಶ‌ದ‌ ನಂತ‌ರ‌ ಹೆಚ್ಚಿಟ್ಟ ಈರುಳ್ಳಿಯ‌ನ್ನು ಹಾಕಿ ಅದ‌ರ‌ ಬ‌ಣ್ಣ‌ ಸ್ವ‌ಲ್ಪ‌ ಬ‌ದಲಾಗುವವ‌ರೆಗೆ ಹುರಿಯಿರಿ. ಈರುಳ್ಳಿಯ‌ ಬ‌ಣ್ಣ‌ ಬ‌ದ‌ಲಾದ‌ ಮೇಲೆ ಅರಿಶಿನ‌ ಪುಡಿಯ‌ನ್ನು ಹಾಕಿ ಮಿಶ್ರ‌ಣ‌ದಲ್ಲಿ ಬೆರೆಯುವಂತೆ ಮಾಡಿ. ಆಮೇಲೆ ಹುರಿದು ಇಟ್ಟುಕೊಂಡಿದ್ದ‌ ಕ‌ಡ‌ಲೆಬೀಜ‌ವ‌ನ್ನು ಮಿಶ್ರ‌ಣ‌ದ‌ಲ್ಲಿ ಸೇರಿಸಿ ಒಂದು ನಿಮಿಶ‌ ಬೇಯಿಸಿ.

ಈಗ‌ ನೀರೆಲ್ಲಾ ಸೋರಿ ಸ್ವ‌ಲ್ಪ‌ ಒದ್ದೆಯಾಗಿರುವ‌ ಅವ‌ಲ‌ಕ್ಕಿಯ‌ನ್ನು ಹಾಕಿ ಚೆನ್ನಾಗಿ ಬೆರೆಸಿರಿ. ರುಚಿಗೆ ತ‌ಕ್ಕ‌ಶ್ಟು ಉಪ್ಪ‌ನ್ನು ಅದ‌ರ‌ಲ್ಲಿ ಬೆರೆಸಿ, ಬಾಣ‌ಲೆಯ‌ನ್ನು ಮುಚ್ಚಿ 5 ನಿಮಿಶ‌ ಬೇಯಿಸಿ. ಆಮೇಲೆ ಮುಚ್ಚ‌ಳ‌ವ‌ನ್ನು ತೆಗೆದು ನಿಂಬೆಹ‌ಣ್ಣಿನ‌ ರ‌ಸ‌ ಮ‌ತ್ತು ಸ‌ಣ್ಣ‌ಗೆ ಹೆಚ್ಚಿದ‌ ಕೊತ್ತಂಬ‌ರಿ ಸೊಪ್ಪು ಬೆರೆಸಿ ಮ‌ತ್ತೆ 5 ನಿಮಿಶ‌ ಬೇಯಿಸಿ. ಒಲೆಯ‌ನ್ನು ಆರಿಸಿ ಮ‌ತ್ತೊಮ್ಮೆ ಕಲಸಿದರೆ ಬಿಸಿಬಿಸಿ ಅವ‌ಲ‌‌ಕ್ಕಿ ಉಪ್ಪಿಟ್ಟು ಸಿದ್ದ. ಚ‌ಹಾ ಇಲ್ಲ‌ವೇ ಕಾಪಿಯೊಂದಿಗೆ ತಿನ್ನ‌ಲು ತುಂಬಾ ಚೆನ್ನಾಗಿರುತ್ತೆ.

(ಚಿತ್ರ ಸೆಲೆ: ಸಂತೋಶ್ ಕುಮಾರ್ )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *