ಶೀರ್ ಕುರ‍್ಮಾ

– ಸವಿತಾ.

ಉತ್ತರ ಕರ‍್ನಾಟಕದ ಬಾಗದಲ್ಲಿ ಈದ್ ಹಬ್ಬದಲ್ಲಿ ಮಾಡುವ ವಿಶೇಶ ಸಿಹಿ ತಿನಿಸು ಇದು. ಇಲ್ಲಿ ಹಿಂದೂಗಳು ಕೂಡ ಮೊಹರಂ ನಲ್ಲಿ ಚೊಂಗೆ ಮತ್ತು ಈದ್ ಹಬ್ಬದಲ್ಲಿ ಶೀರ್ ಕುರ‍್ಮಾ ಮಾಡುವರು.

ಶೀರ್ ಕುರ‍್ಮಾ ಮಾಡಲು ಬೇಕಾಗುವ ಪದಾರ‍್ತಗಳು:

  • ಕೆಳಗೆ ಪಟ್ಟಿ ಮಾಡಿರುವ ಒಣಹಣ್ಣುಗಳು
    6 – ಬಾದಾಮಿ
    6 – ಗೋಡಂಬಿ
    6 – ಅಕ್ರೋಡ (walnut)
    6 – ಗೇರುಬೀಜ
    6 – ಪಿಸ್ತಾ
    20 – ಒಣ ದ್ರಾಕ್ಶಿ
    (ಇವುಗಳನ್ನು ಹಿಂದಿನ ದಿನ ರಾತ್ರಿ ನೀರಲ್ಲಿ ನೆನೆ ಹಾಕಿಟ್ಟರಬೇಕು)
  • 3 ಲೋಟ ಹಾಲು
  • ಮುಕ್ಕಾಲು ಲೋಟ ಗೋದಿ ಹಿಟ್ಟಿನ ಶಾವಿಗೆ
  • ಮುಕ್ಕಾಲು ಲೋಟ ಸಕ್ಕರೆ
  • 2-3 ಸಣ್ಣ ಚಮಚ ತುಪ್ಪ
  • 2 ಸಣ್ಣ ಚಮಚ ಗಸಗಸೆ
  • ಸ್ವಲ್ಪ ಜಾಜಿಕಾಯಿ
  • 4 ಏಲಕ್ಕಿ
  • 4 ಕೇಸರಿ ದಳಗಳು

ಮಾಡುವ ಬಗೆ:

  • ಏಲಕ್ಕಿ, ಜಾಜಿಕಾಯಿ ಪುಡಿ ಮಾಡಿ ಇಟ್ಟುಕೊಳ್ಳಿ
  • ಗಸಗಸೆ, ಕೇಸರಿದಳಗಳನ್ನು ಬಿಟ್ಟು, ಉಳಿದ ಒಣಹಣ್ಣುಗಳನ್ನು ಹಿಂದಿನ ದಿನ ರಾತ್ರಿ ಸ್ವಲ್ಪ ನೀರಲ್ಲಿ ನೆನೆ ಹಾಕಿಡಿ
  • ಮರುದಿನ ಒಣಹಣ್ಣುಗಳನ್ನು ಸಣ್ಣದಾಗಿ ಕತ್ತರಿಸಿರಿ
  • ಒಂದು ಚಮಚ ತುಪ್ಪ ಹಾಕಿ ಬಾಣಲೆಯಲ್ಲಿ ಶಾವಿಗೆ ಹುರಿದು ತೆಗೆದಿಡಿ
  • ನಂತರ ಇನ್ನೊಂದು ಚಮಚ ತುಪ್ಪ ಹಾಕಿ ಕತ್ತರಿಸಿದ ಒಣಹಣ್ಣುಗಳನ್ನು ಹುರಿದು ತೆಗೆದಿಡಿ
  • ಒಂದು ಪಾತ್ರೆಯಲ್ಲಿ ಹಾಲು ಕಾಯಲು ಇಟ್ಟು ಕೇಸರಿ ದಳಗಳನ್ನು ಬೆರೆಸಿ, ಒಂದು ಕುದಿ ಬಂದ ನಂತರ ಹುರಿದ ಶಾವಿಗೆ ಸೇರಿಸಿ ಸ್ವಲ್ಪ ಕುದಿಸಿರಿ.
  • ನಂತರ ಸಕ್ಕರೆ, ಕತ್ತರಿಸಿದ ಒಣಹಣ್ಣುಗಳ ಅರ‍್ದ ಬಾಗ ಕುದಿಯುವ ಶಾವಿಗೆಗೆ ಹಾಕಿರಿ. ಗಸಗಸೆ, ಏಲಕ್ಕಿ
  • ಜಾಜಿ ಕಾಯಿ ಪುಡಿ ಹಾಕಿ ಕೈಯಾಡಿಸಿ
  • ಒಲೆ ಆರಿಸಿರಿ, ಶೀರ್ ಕುರ‍್ಮಾ ಈಗ ತಯಾರು 🙂 

ಶೀರ್ ಕುರ‍್ಮಾ ಕುಡಿಯಲು ಕೊಡುವಾಗ, ಕತ್ತರಿಸಿದ ಹುರಿದ ಒಣ ಹಣ್ಣುಗಳನ್ನು ಮೇಲೆ ಉದುರಿಸಿ ಕೊಡುವುದು.

( ಚಿತ್ರ ಸೆಲೆ: kn.wikipedia.org )

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: