ಸುರುಳಿ ಹೋಳಿಗೆ

– ಸವಿತಾ.

ಸುರುಳಿ ಹೋಳಿಗೆ, surali holige

ಸುರುಳಿ ಹೋಳಿಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು 5 ದಿನ ಇಟ್ಟು ಆಮೇಲೂ ತಿನ್ನಬಹುದು.

ಕಣಕದ ಹಿಟ್ಟು ಮಾಡಲು ಬೇಕಾಗುವ ಪದಾರ‍್ತಗಳು:

  • 2 ಲೋಟ – ಮೈದಾ ಹಿಟ್ಟು
  • 1 ಲೋಟ – ಚಿರೋಟಿ ರವೆ
  • 4 ಚಮಚ – ಕಾಯಿಸಿದ ಎಣ್ಣೆ

ಸ್ವಲ್ಪ ಉಪ್ಪು, ನೀರು ಸೇರಿಸಿ ಚಪಾತಿ ಹಿಟ್ಟಿನಗಿಂತ ಸ್ವಲ್ಪ ತೆಳ್ಳಗೆ ಹಿಟ್ಟು ನಾದಿಕೊಂಡು, ಮೇಲೆ ಒಂದು ಬಟ್ಟೆ ಮುಚ್ಚಿ 2 ಗಂಟೆ ಕಾಲ ಇಡಿ.

ಒಳಗೆ ತುಂಬಲು ಕೊಬ್ಬರಿ ಸಿಹಿ ಮಿಶ್ರಣ ಮಾಡಲು ಬೇಕಾಗುವ ಪದಾರ‍್ತಗಳು:

  • 1/2 ಲೋಟ – ಕೊಬ್ಬರಿ ತುರಿ
  • 2 ಚಮಚ – ಗಸಗಸೆ
  • 1/2 ಲೋಟ – ಸಕ್ಕರೆ ಪುಡಿ
  • 6 ಏಲಕ್ಕಿಯ ಪುಡಿ
  • ಸ್ವಲ್ಪ ಅತವಾ ಕಾಲು ಚಮಚ – ಜಾಜಿ ಕಾಯಿ ಪುಡಿ

ಗಸಗಸೆಯನ್ನು ಸ್ವಲ್ಪ ಹುರಿಯಿರಿ. ಸಕ್ಕರೆ ಪುಡಿಗೆ ಕೊಬ್ಬರಿ ತುರಿ, ಏಲಕ್ಕಿ ಪುಡಿ, ಜಾಜಿಕಾಯಿ ಪುಡಿ ಮತ್ತು ಹುರಿದ ಗಸಗಸೆಯನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲೆಸಿಟ್ಟಿರಿ.

ಹೋಳಿಗೆ ಮಾಡುವ ಬಗೆ:

  • ಕಲಸಿ ಇಟ್ಟ ಕಣಕದ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ನಾದಿಕೊಂಡು, ಒಂದು ಉಂಡೆ ಅಳತೆ ಹಿಟ್ಟು ತೆಗೆದುಕೊಳ್ಳಿರಿ.
  • ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ಎಣ್ಣೆ ಹಚ್ಚಿ, ತೆಳುವಾಗಿ ಚಪಾತಿಯಂತೆ ಲಟ್ಟಿಸಿರಿ (ಲಟ್ಟಿಸುವಾಗ ಮಾತ್ರ ಎಣ್ಣೆ ಹಚ್ಚಿ)
  • ತವೆ ಬಿಸಿ ಮಾಡಿ ಸಣ್ಣ ಉರಿಯಲ್ಲಿಟ್ಟು, ಎರಡೂ ಬದಿ ಸ್ವಲ್ಪ ಬೇಯಿಸಿರಿ.
  • ಕೊಬ್ಬರಿ ಸಿಹಿ ಮಿಶ್ರಣ ಒಂದು ಅತವಾ ಎರಡು ಚಮಚದಶ್ಟು ಹಾಕಿ ಸಮವಾಗಿ ಹರಡಿ.
  • ಚಪಾತಿಯಂತೆ ಲಟ್ಟಿಸಿದ ಹಿಟ್ಟಿನ ಒಂದು ಕೊನೆಯನ್ನು ಮಡಚಿ, ಅದರ ಮೇಲೆ ಮತ್ತೊಂದು ಕೊನೆಯನ್ನು ಮಡಚುತ್ತಾ ಬಟ್ಟೆಯಿಂದ ಒತ್ತಬೇಕು. ಅದು ಲಕೋಟೆಯ ಹಾಗೇ ಕಾಣುತ್ತದೆ
  • ಕೊಬ್ಬರಿ ಮಿಶ್ರಣ ಹೊರ ಬರದಂತೆ ಬಟ್ಟೆಯಿಂದ ಒತ್ತಿ ಮುಚ್ಚಿರಿ.
  • ಹಿಟ್ಟು ಒಣಗುವವರೆಗೆ ಬೇಯಿಸಿರಿ.
  • ಎಣ್ಣೆ ಹಾಕದೇ ಎರಡೂ ಬದಿ ಬೇಯಿಸಿ ತೆಗೆಯಿರಿ. ಸುರುಳಿ ಹೋಳಿಗೆ ತಯಾರು 🙂

ನೆನಪಿಡಿ: ಈ ಹೋಳಿಗೆಯನ್ನು ಸಾವಕಾಶವಾಗಿ ಮಾಡಬೇಕು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: