ಮಾಡಿ ಸವಿಯಿರಿ ಡ್ರೈ ಜಾಮೂನು
– ನಮ್ರತ ಗೌಡ.
ಬೇಕಾಗುವ ವಸ್ತುಗಳು
- ಜಾಮೂನು ಪುಡಿ – 200 ಗ್ರಾಂ.
- ಸಕ್ಕರೆ – ಅರ‍್ದ ಕೆ.ಜಿ.
- ಏಲಕ್ಕಿ – ಸ್ವಲ್ಪ
- ಒಣ ಕೊಬ್ಬರಿ – ಅರ‍್ದ ಹೋಳು
- ಎಣ್ಣೆ – ಕರಿದುಕೊಳ್ಳಲು
- ತುಪ್ಪ – ಸ್ವಲ್ಪ
- ಹಾಲು – ಸ್ವಲ್ಪ
ಮಾಡುವ ಬಗೆ
ಮೊದಲಿಗೆ ಸಕ್ಕರೆ ಪಾಕಮಾಡಿಟ್ಟುಕೊಳ್ಳಿ. ಪಾಕವು ಮಾಮೂಲಿ ಜಾಮೂನಿನ ಪಾಕಕ್ಕಿಂತ ಸ್ವಲ್ಪ ದಪ್ಪಗಿರಬೇಕು, ತೆಳ್ಳಗೆ ಬೇಡ. ಇದಕ್ಕೆ ಎರಡು ಏಲಕ್ಕಿ ಸೇರಿಸಿಕೊಳ್ಳಿ.
ಜಾಮೂನಿನ ಪುಡಿಗೆ ಹಾಲು ಸೇರಿಸಿ ನಾದಿಕೊಳ್ಳಿ. ಸ್ವಲ್ಪ ದೊಡ್ಡ ಗಾತ್ರದ ಉಂಡೆ ಮಾಡಿಕೊಳ್ಳಿ. ಉಂಡೆ ಮಾಡುವಾಗ ಕೈಗೆ ಅಂಟದಿರುವಂತೆ ಮತ್ತು ರುಚಿ ಹೆಚ್ಚಿಸಲು ಸ್ವಲ್ಪ ತುಪ್ಪ ಸೇರಿಸಿಕೊಳ್ಳಿ. ಉಂಡೆ ಕಟ್ಟಿಟ್ಟುಕೊಂಡ ಬಳಿಕ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದುಕೊಳ್ಳಿ. ಕರಿದುಕೊಂಡ ನಂತರ ಇದನ್ನು ಪಾಕಕ್ಕೆ ಹಾಕಿ. ಕೊಬ್ಬರಿಯನ್ನು ತುರಿದು ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಸೇರಿಕೊಂಡು ಮಿಕ್ಸಿಯಲ್ಲಿ ಮಿಶ್ರಣ ಮಾಡಿಕೊಳ್ಳಿ.
ಪಾಕದಲ್ಲಿರುವ ಜಾಮೂನುಗಳನ್ನು ಅರ‍್ದ ಗಂಟೆಯ ನಂತರ ಒಂದೊಂದಾಗಿ ತೆಗೆದು ಕೊಬ್ಬರಿ ಮತ್ತು ಸಕ್ಕರೆಯ ಮಿಶ್ರಣದಲ್ಲಿ ಹೊರಳಾಡಿಸಿ. ಡ್ರೈ ಜಾಮೂನು ಸವಿಯಲು ಸಿದ್ದ.
(ಚಿತ್ರ ಸೆಲೆ: ನಮ್ರತ ಗೌಡ)
ಇತ್ತೀಚಿನ ಅನಿಸಿಕೆಗಳು